ಕುಶಾಲನಗರ, ಸೆ 18: ಯುವಜನತೆಗೆ ಕಾರುಗಳ ಬಗ್ಗೆ ಕ್ರೇಜ್ ಹೆಚ್ಚು. ಪರಿಣಾಮ ಮಾರುಕಟ್ಟೆಯಲ್ಲಿ ಕಾರುಗಳಿಗೆ ಭಾರಿ ಬೇಡಿಕೆಯಿದೆ.ಹಾಗಂತ ಕೇವಲ ಹೊಸ ಕಾರುಗಳು ಮಾತ್ರವಲ್ಲ, ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಮತ್ತು ಕಡಿಮೆ ಬೆಲೆಗೆ ಸಿಗುವ ಕಾರಣ ಹಳೇ ಕಾರು ಕೊಳ್ಳೋದಕ್ಕೂ ಜನರು ಒಲವು ತೋರಿಸುತ್ತಿದ್ದಾರೆ. ಆದರೆ ಸೆಕೆಂಡ್ ಹ್ಯಾಂಡ್ ಕಾರು ಖರೀದಿ ವೇಳೆ ಹೆಚ್ಚಿನವರು ಮೋಸ ಹೋಗುತ್ತಿದ್ದಾರೆ. ಹೀಗಾಗಿ ಈ ವ್ಯವಹಾರವನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಹೊಸ ನಿಯಮ ಜಾರಿಗೆ ತರಲು ಮುಂದಾಗಿದೆ.ಕೇಂದ್ರ ರಸ್ತೆ ಸಚಿವಾಲಯ ಪ್ರಕಟಿಸಿದ ಕರಡು ನಿಯಮದ ಪ್ರಕಾರ ಯೂಸ್ಡ್ ಕಾರ್ ಡೀಲರ್‌ಗಳು ತಮ್ಮ ವ್ಯವಹಾರವನ್ನು ನಡೆಸಲು ರಾಜ್ಯ ಸಾರಿಗೆ ಪ್ರಾಧಿಕಾರದಿಂದ ಅಧಿಕೃತ ಪ್ರಮಾಣಪತ್ರವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಲಾಗಿದೆ.ಬಳಸಿದ ವಾಹನಗಳನ್ನು ಖರೀದಿ ಮತ್ತು ಮಾರಾಟ ಮಾಡುವ ಡೀಲರ್‌ಗಳು ಪ್ರತಿ ವಾಹನದ ಕುರಿತಾಗಿ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಸಂಪೂರ್ಣ ಮಾಹಿತಿಯನ್ನು ನೀಡಬೇಕು. ಇದರಲ್ಲಿ ಡೀಲರ್, ವಾಹನ ಮಾರಾಟ ಮಾಡುವ ಮಾಲೀಕ ಮತ್ತು ವಾಹನ ಖರೀದಿಸುವ ಗ್ರಾಹಕರ ಮಾಹಿತಿಯನ್ನು ನೀಡಬೇಕು.ಇನ್ನು ಈ ಹೊಸ ನಿಯಮದ ಪ್ರಕಾರ ಮೂಲ ಮಾಲೀಕರು ಮತ್ತು ಹೊಸ ಖರೀದಿದಾರರ ನಡುವೆ ಯಾವುದೇ ಲಿಂಕ್ ಇರುವುದಿಲ್ಲ. ಹೀಗಾಗಿ ಟ್ರಾಫಿಕ್ ಉಲ್ಲಂಘನೆಯ ಚಲನ್‌ಗಳು ಮೊದಲ ಮಾಲೀಕರ ಹೆಸರಿಗೆ ಬರುವುದು, ಹಳೇ ಮಾಲೀಕರು ಮಾಡಿದ ಉಲ್ಲಂಘನೆಗಳಿಗಾಗಿ ಹೊಸ ಮಾಲೀಕರು ಕಾನೂನು ಕ್ರಮ ಎದುರಿಸುವಂತಹ ಪ್ರಕರಣಗಳು ತಪ್ಪುತ್ತವೆ.ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸಲು ಮತ್ತು ಪ್ರೀ ಓನ್ಡ್ ಕಾರು ಮಾರುಕಟ್ಟೆಯನ್ನು ನಿಯಂತ್ರಿಸಲು ಸರ್ಕಾರ ಈ ಹೊಸ ನಿಯಮ ಜಾರಿಗೆ ತರಲು ಮುಂದಾಗಿದೆ. ಹೊಸ ನಿಯಮದ ಪ್ರಕಾರ ವ್ಯಕ್ತಿಯು ತನ್ನ ಕಾರನ್ನು ಸೆಕೆಂಡ್ ಹ್ಯಾಂಡ್ ಡೀಲರ್‌ಗೆ ಮಾರಾಟ ಮಾಡಿದ ತಕ್ಷಣ ಇಬ್ಬರೂ ಸ್ಥಳೀಯ ಆರ್‌ಟಿಒಗೆ ಮಾಹಿತಿ ನೀಡಬೇಕು.ಆ ವಾಹನ ಖರೀದಿಸುವ ಗ್ರಾಹಕರ ಮಾಹಿತಿಯನ್ನು ಸಹ ಆರ್‌ಟಿಒ ಅಧಿಕಾರಿಗಳಿಗೆ ತಿಳಿಸಬೇಕು. ಇನ್ನು ಈ ಮಾಹಿತಿಯನ್ನು ಡೀಲರ್ ನೇರವಾಗಿ ಇಲ್ಲವೇ ಆನ್‌ಲೈನ್ ಮೂಲಕ ಸಲ್ಲಿಸಬಹುದು. ವಾಹನ ಮಾರಾಟದ ವೇಳೆ ಡೀಲರ್ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿದರೆ ಪರವಾನಿಗೆಯನ್ನು ರದ್ದುಗೊಳಿಸಲಾಗುತ್ತದೆ. ಅಲ್ಲದೇ ಈ ನಿಯಮ ಕದ್ದ ವಾಹನಗಳ ಮರು ಮಾರಾಟವನ್ನು ತಡೆಯಲು ಸಹಕಾರಿಯಾಗಲಿದೆ.ಇನ್ನು ಭಾರತದಲ್ಲಿ 2022ರ ಆರ್ಥಿಕ ವರ್ಷದಲ್ಲಿ 35 ಲಕ್ಷ ಬಳಸಿದ ಕಾರು ಮಾರಾಟವಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ದಾಖಲೆ ಮಟ್ಟದಲ್ಲಿ ಮಾರಾಟವಾಗಿದೆ. ಇನ್ನು 2026ರ ವೇಳೆಗೆ 70 ಲಕ್ಷಕ್ಕೂ ಅಧಿಕ ಕಾರು ಮಾರಾಟವಾಗುವ ನಿರೀಕ್ಷೆಯಿದೆ.
Back to top button
error: Content is protected !!