ಕುಶಾಲನಗರ, ಡಿ 17: ಪರಿಸರ ಸಂರಕ್ಷಣೆ ಉದ್ದೇಶದಿಂದ ಉತ್ತರಪ್ರದೇಶದ ಇಟಾವದ ರಾಬಿನ್ ಸಿಂಗ್ ಎತಾವತ್ ಎಂಬವರು ಸೈಕಲ್ ಜಾಥಾ ಹಮ್ಮಿಕೊಂಡಿದ್ದು ಕನ್ಯಾಕುಮಾರಿಯಿಂದ ಸೈಕಲ್ ಜಾಥಾ ಆರಂಭಿಸಿದ್ದಾರೆ.
ಅಕ್ಟೋಬರ್ ತಿಂಗಳಿನಿಂದ ಪ್ರಾರಂಭಿಸಿದ ಇಂದಿಗೆ 437ನೇ ದಿವಸವಾಗಿದ್ದು ಇಲ್ಲಿಗೆ 2600 ಕಿಲೋಮೀಟರ್ಗಳನ್ನು ಪೂರೈಸಿರುತ್ತಾರೆ. ಎಲ್ಲಾ ರಾಜ್ಯ ಮತ್ತು ಎಲ್ಲಾ ಜಿಲ್ಲೆಗಳನ್ನು ತಲುಪಿ ಶಾಲಾ-ಕಾಲೇಜು ಮಕ್ಕಳಿಗೆ ಸಾರ್ವಜನಿಕರಿಗೆ ಪರಿಸರದ ಮಹತ್ವದ ಬಗ್ಗೆ ಅರಿವನ್ನು ಮೂಡಿಸಲು ಈ ಜಾಥ ಕೈಗೊಂಡಿರುವುದಾಗಿ ತಿಳಿಸಿದರು. ನೆಲ, ಜಲ, ವಾಯು ರತ್ನಗಳಿದ್ದ ಹಾಗೆ. ಇದನ್ನು ಕಾಪಾಡುವುದು ನಮ್ಮೆಲ್ಲರ ಹೊಣೆ ಎಂದು ಹೇಳಿದರು.
ಕುಶಾಲನಗರಕ್ಕೆ ಆಗಮಿಸಿದ ಇವರನ್ನು ಕುಶಾಲನಗರದ ಸಾರ್ವಜನಿಕರಾದ ಜಿತು, ಪ್ರವೀಣ್ ವಸಂತ್ ಸಿಂಗ್, ನಕುಲ್ ಸಿಂಗ್ ಪುಕ್ ರಾಜ್, ಬಲವತ್ ಸಿಂಗ್, ವೈಶಾಕ್ ರವರು ಸ್ವಾಗತಿಸಿ ಸನ್ಮಾನಿಸಿ ಬೀಳ್ಕೊಟ್ಟರು.
Back to top button
error: Content is protected !!