ಕುಶಾಲನಗರ, ಆ 24: ದಿನಾಂಕ 26 ರಂದು ಕೊಡಗಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದವರು ಹಮ್ಮಿಕೊಂಡಿದ್ದ ರಾಲಿಗಳನ್ನು ರದ್ದುಗೊಳಿಸಿದ್ದು, ರಾಲಿಯಿಂದ ಆಗುವ ತೊಂದರೆಗಳ ಮನಗಂಡು ಜಿಲ್ಲಾಡಳಿತ 24 ರಿಂದ 26ರ ವರೆಗೆ ಕೊಡಗಿಗೆ ಸೆಕ್ಸನ್ 144 ಜಾರಿಗೆ ತಂದು ಮಡಿಕೇರಿಯಲ್ಲಿ ವ್ಯಾಪಾರ ಮತ್ತು ಮದ್ಯ ಮಾರಾಟ ನಿಷೇಧ ಮಾಡಿರುತ್ತೀರಿ. ಅದರೆ ಕಾಂಗ್ರೆಸ್ ಮತ್ತು ಬಿಜೆಪಿ ತಮ್ಮ ರಾಲಿಗಳ ಸ್ವ ಇಚ್ಚೆಯಿಂದ ರದ್ದುಗೊಳಿಸಿದ್ದು ಸಂಘರ್ಷದ ಪರಿಸ್ಥಿತಿಗೆ ಅವಕಾಶ ಇಲ್ಲವಾಗಿದೆ.
ಕೊಡಗಿನಲ್ಲಿ ಈಗಾಗಲೆ ನೆರೆ, ಕೊರೋನದಂತಹ ಸಂದಿಗ್ಧ ಪರಿಸ್ಥಿತಿಯಿಂದ ವ್ಯಾಪಾರ, ವ್ಯವಹಾರ ಕುಂಟಿತವಾಗಿದ್ದು ಇಂತಹ ಪರಿಸ್ಥಿತಿಯಲ್ಲಿ ಸೆಕ್ಷನ್ 144 ಹಾಗೂ ಮದ್ಯಪಾನ ನಿಷೇಧ ಮಾಡುವುದು ಸರಿಯಲ್ಲ. ಕೂಡಲೆ ಇದನ್ನು ಪರಿಶೀಲಿಸಿ ಸೆಕ್ಷನ್ 144 ಅನ್ನು ತೆರವುಗೊಳಿಸಿ ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸಿ ಕೊಡಬೇಕೆಂದು ಆಗ್ರಹಿಸಿ ಕೂಡುಮಂಗಳೂರು ನಿವಾಸಿಗಳಾದ ರವಿ ಹಾಗೂ ಧರ್ಮ ಎಂಬವರು ಕುಶಾಲನಗರ ತಹಶೀಲ್ದಾರ್ ಟಿ.ಎಂ.ಪ್ರಕಾಶ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
Back to top button
error: Content is protected !!