ಕುಶಾಲನಗರ, ಆ 24: ಹುಣಸೂರು ತಾಲೂಕು ದೊಡ್ಡಹೆಜ್ಜೂರು ಗ್ರಾಮ ಪಂಚಾಯ್ತಿಯ ತೆರವಾಗಿದ್ದ
ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಯಶೋಧಮಂಜುನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಆಂತರಿಕ ಒಪ್ಪಂದದಂತೆ ಹಿಂದಿನ ಉಪಾಧ್ಯಕ್ಷೆ ಅಂಬಿಕಾ ರಾಜೀನಾಮೆ ಕೊಟ್ಟ ಹಿನ್ನಲೆಯಲ್ಲಿ ನಡೆದ ಚುನಾವಣೆಯಲ್ಲಿ ಯಶೋಧಮಂಜುನಾಥ್ ಒಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಕಾರಿ ರೇಷ್ಮೆಇಲಾಖೆಯ ಸಹಾಯಕ ನಿರ್ಧೇಶಕ ಮಾದೇಶ್ ಘೋಷಿಸಿದ್ದಾರೆ.
ಚುನಾವಣೆಯಲ್ಲಿ ೧೪ಮಂದಿ ಸದಸ್ಯರ ಪೈಕಿ ಅಧ್ಯಕ್ಷ ಮುದಗನೂರುಸುಭಾಷ್ ಸೇರಿದಂತೆ ೧೦ಮಂದಿ ಸದಸ್ಯರು ಭಾಗಿಯಾಗಿದ್ದರು. ಮಾಜಿ ಅಧ್ಯಕ್ಷ ಶಿವಶಂಕರ್, ಮಾಜಿ ಉಪಾಧ್ಯಕ್ಷೆ ಅಂಬಿಕಾ, ಸದಸ್ಯರಾದ ಬಸವಣ್ಣ, ಲತಾ ಗೈರಾಗಿದ್ದರು.
Back to top button
error: Content is protected !!