ಕೂಡಿಗೆ, ಏ. 2: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಭುವನಗಿರಿ ಗ್ರಾಮದಲ್ಲಿರುವ ಶ್ರೀ ವೀರಾಂಜನೇಯ ಸ್ವಾಮಿಯ 7. ನೇ ವರ್ಷದ ವಾರ್ಷಿಕ ಪೂಜ್ಯೋತ್ಸವವು ಶ್ರೀ ವೀರಾಂಜನೇಯ ಸ್ವಾಮಿದೇವಸ್ಥಾನ ಸಮಿತಿ ವತಿಯಿಂದ ಭುವನಗಿರಿ ಗ್ರಾಮದಲ್ಲಿ ಶ್ರಧ್ಧಾಭಕ್ತಿ, ವಿವಿಧ ಹೋಮ ಹವನಗಳ ನಡುವೆ ನೆರವೇರಿತು.
ಪೂಜ್ಯೋತ್ಸವ ಅಂಗವಾಗಿ ಕಣಿವೆಯ ಸಮಿಪದಲ್ಲಿ ಹರಿಯುತ್ತಿರುವ ಕಾವೇರಿ ನದಿಯಲ್ಲಿ ಗಂಗಾ ಪೂಜೆ ನೆರವೇರಿಸಿ ನಂತರ ಪೂಜ್ಯೋತ್ಸವಕ್ಕೆ ಅಗಮಿಸಿದ್ದ ಭಕ್ತ ಮಹಿಳೆಯರು 108. ಕಳಸವನ್ನು ಕಾವೇರಿ ನದಿಯಲ್ಲಿ ಪೂಜೆ ಸಲ್ಲಿಸಿ, ನಂತರ 108. ಕಳಸ ಹೊತ್ತ ಮಹಿಳೆಯರು, ಶ್ರೀ ವೀರಾಂಜನೇಯ ಸ್ವಾಮಿಯ ಪಲ್ಲಕ್ಕಿಯ ಜೊತೆಯಲ್ಲಿ ಮೆರವಣಿಗೆಯ ಮೂಲಕ ಭುವನಗಿರಿ ಗ್ರಾಮದಲ್ಲಿರುವ ದೇವಸ್ಥಾನದವರೆಗೆ ಸಾಗಿ ಬಂದರು,
ದೇವಾಲಯದ ಆವರಣದಲ್ಲಿ ಶ್ರೀ ಸ್ವಾಮಿಗೆ ಪಂಚಾಮೃತ, ರುದ್ರಾಭಿಷೇಕ ಸೇರಿದಂತೆ ವಿವಿಧ ಹೋಮ ಹವನ ಪೂಜಾ ಕೈಂಕರ್ಯಗಳು ನಡೆದವು. ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ಅನ್ನಸಂರ್ತಪಣೆ ಕಾರ್ಯ ನೆರವೇರಿತು.
ಪೂಜಾ ಕೈಂಕರ್ಯಗಳನ್ನು ಅರ್ಚಕರಾದ ಶ್ರೀ ಶಿವಕುಮಾರ್ , ಕೃಷ್ಣ ಮೂರ್ತಿ ಭಟ್ಟರು, ಅನಂತರಾಮು ಸೇರಿದಂತೆ ತಂಡವರು ನೆರವೇರಿಸಿದರು.
ಪೂಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ಕೆ.ಪಿ. ಚಂದ್ರಕಾಲ, ಕೂಡಿಗೆ ಕೂಡುಮಂಗಳೂರು ವೀರಾ ಹಮನು ಸೇನಾ ಸೇವಾ ಸಮಿತಿ ಅಧ್ಯಕ್ಷ ಶಿವಕುಮಾರ್, ಸೇರಿದಂತೆ ದೇವಾಲಯದ ಹನುಮಸೇವಾ ಸಮಿತಿಯ ಹನುಮನ ನೂರಾರು ಭಕ್ತರು, ಸೇರಿದಂತೆ ಕೂಡಿಗೆ, ಕೂಡುಮಂಗಳೂರು, ಹೆಬ್ಬಾಲೆ ಸೇರಿದಂತೆ ಪಕ್ಕದ ಜಿಲ್ಲೆಯ ಹಾಸನ, ಮತ್ತು ಮೈಸೂರು ಜಿಲ್ಲೆಯ ನೂರಾರು ಭಕ್ತರು ಭಾಗವಹಿಸಿದರು.
Back to top button
error: Content is protected !!