ಕುಶಾಲನಗರ, ಮಾ 03 : ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯಡಿ ಶುಂಠಿ ಖರೀದಿಸಲು ರಾಜ್ಯ ಸರ್ಕಾರ ಪ್ರಸ್ತಾವನೆಯನ್ನು ಅಂಗೀಕರಿಸಿ ಕೇಂದ್ರಕ್ಕೆ ಕಳುಹಿಸಲಾಗಿದು, ಶೀಘ್ರದಲ್ಲಿಯೇ ರಾಜ್ಯ ಸರಕಾರವು ಖರೀದಿ ಕೇಂದ್ರಗಳನ್ನು ತೆರೆಯುವುದರಿಂದ ಯಾವ ರೈತರು ಶುಂಠಿಯನ್ನು ಕಡಿಮೆ ದರದಲ್ಲಿ ಮಾರಾಟ ಮಾಡಬಾರದು ಎಂದು ರಾಜ್ಯ ಶುಂಠಿ ಬೆಳೆಗಾರರ ಸಂಘದ ಪ್ರತಿನಿಧಿಗಳಾದ ಅರುಣ್ ಚಂಗಪ್ಪ ಹೇರೂರು ಮನವಿ ಮಾಡಿದರು.
ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ಜಿಲ್ಲಾ ಶುಂಠಿ ಬೆಳೆಗಾರರು ಕಳೆದ ತಿಂಗಳು ಜಿಲ್ಲಾಧಿಕಾರಿಗಳು ಹಾಗೂ ತೋಟಗಾರಿಕಾ ಉಪ ನಿರ್ದೇಶಕರು (ಜಿಪಂ) ಕೊಡಗು ಇವರಿಗೆ, ಮನವಿ ಸಲ್ಲಿಸಿದ್ದು, ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದ್ದು, ಪ್ರಸ್ತಾವನೆ ಜೊತೆಗೆ ಸುಮಾರು ೨೦ ಜಿಲ್ಲೆಗಳಿಂದ ಶುಂಠಿ ಬೆಳೆಗಾರರು ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಕುಲಂಕುಶವಾಗಿ ಪರಿಶೀಲಿಸಲಾಗಿ ಕೊಡಗು ಜಿಲ್ಲೆಯಲ್ಲಿ ಪ್ರಸ್ತುತ ೨೦೨೪-೨೫ರ ಮಾಹಿತಿ ಸುಮಾರು ಹೆಚ್ಚಿನ ಹೆಕ್ಟೇರ್ ಪ್ರದೇಶದಲ್ಲಿ ಶುಂಠಿ ಬೆಳೆಯನ್ನು ಬೆಳೆದಿದ್ದು, ಈಡಿ ಬೆಳೆಯು ಸುಮಾರು ೭ ರಿಂದ ೯ ತಿಂಗಳ ಬೆಳೆಯಾಗಿರುತ್ತದೆ. ರೈತರು ತಮ್ಮ ಜಮೀನುಗಳಲ್ಲಿ ವಾರ್ಷಿಕವಾಗಿ ೧ ಬೆಳೆಯನ್ನು ಮಾತ್ರ ಬೆಳೆಯನ್ನು ಬೆಳೆಯಲು ಸಾಧ್ಯವಾಗಿರುತ್ತದೆ. ಪ್ರಸ್ತುತ ಮಾರುಕಟ್ಟೆ ದರ ಕಳೆದ ೨ ತಿಂಗಳಿಂದ ಸುಮಾರು ೧ ಕೆ.ಜಿಗೆ ೧೫ ರಿಂದ ೨೦ ರೂಗಳಿಗೆ ರೈತರು ಮಾರಾಟ ಮಾಡುತ್ತಿದ್ದು, ಇದರಿಂದ ಶುಂಠಿ ಬೆಳೆಯುವ ರೈತರಿಗೆ ತುಂಬಾ ಆರ್ಥಿಕ ನಷ್ಟ ಉಂಟಾಗಿರುತ್ತದೆ ಎಂದರು. ಕಳೆದ ವರ್ಷಕ್ಕೆ ಹೊಲಿಸಿಕೊಂಡಲಿ ಶೇಕಡ ೭೦ ರಷ್ಟು ಬೆಳೆ ಕುಸಿತ ಉಂಟಾಗಿರುತ್ತದೆ ಮುಂದುವರೆದು (ಉಲ್ಲೇಖಿತ ಪತ್ರಗಳನ್ನು ಈ ಮನವಿ ಪತ್ರದೊಂದಿಗೆ ಲಗತ್ತಿಸಿದೆ.) ಉಲ್ಲೇಖ -೩ರ ಕೇಂದ್ರ ಸರ್ಕಾರದ ಮಿಸ್ ಹಿಂದಿನ ವರ್ಷದ ಉತ್ಪಾದನೆಗಿಂತ ಪ್ರಸಕ್ತ ಸಾಲಿನಲ್ಲಿ ಶೇಕಡ ೧೦ ರಷ್ಟು ಅಧಿಕ ಉತ್ಪಾದನೆ ಅಥವಾ ಶೇಕಡ ೧೦ ರಷ್ಟು ಕುಸಿತ ಕಂಡಿದ್ದರೆ ಸದರಿ ಬೆಳೆಯನ್ನು MIS (ಮಾರುಕಟ್ಟೆ ಮದ್ಯ ಪ್ರವೇಶ ಯೋಜನೆಯಡಿ) ಬೆಂಬಲ ಬೆಲೆಯನ್ನು ನಿಗಧಿ ಪಡಿಸಲು ಅವಕಾಶ ಇರುತ್ತದೆ ಎಂದು ಹೇಳಿದರು. ಮಾರುಕಟ್ಟೆ ಮದ್ಯ ಪ್ರವೇಶಯೋಜನಡಿ ರಾಜ್ಯ ಸರ್ಕಾರವು ದಿನಾಂಕ: ೨೭-೦೨-೨೦೨೫ ರಂದು ಸರ್ಕಾರದ ಕಾರ್ಯದರ್ಶಿಗಳು ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ಭಾರತ ಸರ್ಕಾರ, ಕೃಷಿ ಭವನ, ನವದೆಹಲಿ ಇವರಿಗೆ ಸರ್ಕಾರ ಪ್ರಧಾನ ಕಾರ್ಯದರ್ಶಿಗಳು ಸಹಕಾರ ಇಲಾಖೆ ಕರ್ನಾಟಕ ಸರ್ಕಾರ ಬೆಂಗಳೂರು ಇವರು ಪ್ರಸ್ತಾವನೆಯನ್ನು ಕಳುಹಿಸಲಾಗಿದೆ. ೧ ಕೆ.ಜಿ. ಹಸಿ ಶುಂಠಿಗೆ ೪೨.೯೦ಪೈಸ (ಕ್ವಿಂಟಲ್‌ಗೆ ೪,೨೯೦) ಕರ್ನಾಟಕ ಕೃಷಿ ಬೆಲೆ ಆಯೋಗದ ನಿರ್ದೇಶನದಂತೆ ಶಿಫಾರಸ್ಸು ಮಾಡಿದೆ. ಕೇಂದ್ರವು ಕೆಲವೇ ದಿನಗಳಲ್ಲಿ ಅಂಗೀಕರಿಸಿ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಲಿದೆ. ಆದ ಕಾರಣ ಇನ್ನು ಕೆಲವೇ ದಿನಗಳಲ್ಲಿ ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯಡಿ ರಾಜ್ಯ ಸರ್ಕಾರವು ಖರೀದಿ ಕೇಂದ್ರಗಳನ್ನು ತೆರೆಯಲಿದ್ದು, ರೈತರು ನೇರವಾಗಿ ಸರ್ಕಾರಕ್ಕೆ ಖರೀದಿ ಕೇಂದ್ರಗಳ ಮುಖಾಂತರ ಮಾರಾಟ ಮಾಡಬಹುದಾಗಿರುತ್ತದೆ. ರೈತರು ಯಾವುದೇ ಕಾರಣಕ್ಕೂ ಹಸಿಶುಂಠಿಯನ್ನು ಕಡಿಮೆ ದರದಲ್ಲಿ ಮಾರಾಟ ಮಾಡಿ ನಷ್ಟ ಉಂಟು ಮಾಡಿಕೊಳ್ಳಬಾರದೆಂದು ಸಮಸ್ತ ಜಿಲ್ಲಾ ಶುಂಠಿ ಬೆಳೆಗಾರರಲ್ಲಿ ರಾಜ್ಯ ಶುಂಠಿ ಬೆಳೆಗಾರರ ಸಂಘದ ಹಾಗು ಕೊಡಗು ಶುಂಠಿ ಕೃಷಿಕರ ಪರವಾಗಿ ಹೆರೂರು ಅರುಣ್ ಚೆಂಗಪ್ಪ, ವಿರಾಜಪೇಟೆ ಲವ, ಕಲ್ಲೂರು ಪ್ರಶಾಂತ್, ದೊಡ್ಡತ್ತೂರು ನಾರಾಯಣ, ಹೆರೂರು ಧನಪಾಲ್, ಮಾದಾಪಟ್ಟಣ ಮಹದೇವ, ಗುರುಮಲ್ಲೇಶ ಇತರರು ಆಗ್ರಹಿಸಿದ್ದಾರೆ.
Back to top button
error: Content is protected !!