ಕಾರ್ಯಕ್ರಮ

ಕರ್ನಾಟಕ ಬ್ಯಾಂಕ್ ಶಾಖಾ ಪ್ರಾಂಗಣ ಆರಂಭ

ಕುಶಾಲನಗರ, ಮಾ.04: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸವತ್ತೂರು ಗ್ರಾಮದಲ್ಲಿದ್ದ
ಕೂಡಿಗೆ ‌ಕರ್ನಾಟಕ ಬ್ಯಾಂಕ್ ನೂತನ ಶಾಖಾ ಪ್ರಾಂಗಣದ ಕಛೇರಿಯನ್ನು  ಕೂಡುಮಂಗಳೂರಿನಲ್ಲಿ ನೂತನವಾಗಿ ಪ್ರಾರಂಭ ಮಾಡಿರುವುದನ್ನು ಎಂ. ಆರ್. ಸಿ. ಬೋಧಿಸತ್ವ ಟ್ರಸ್ಟ್ ಅಧ್ಯಕ್ಷ ಕರ್ಮ ಸ್ಯಾಮ್ಟೆನ್ಲಿಂಗ್ಪಾರಿನ್ ಪೋಚೆ ನವರು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟನೆಯನ್ನು ನೆರವೇರಿಸಿದರು.
ನಂತರ ಮಾತನಾಡಿ ಗ್ರಾಹಕರ ಸೇವೆ ಮಾಡುವುದರ ಮೂಲಕ ಬ್ಯಾಂಕ್ ಗಳ ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಬ್ಯಾಂಕ್ ಮುಖ್ಯ ವ್ಯವಸ್ಥಾಪಕರು, ಮತ್ತು ವಲಯ ಅಧಿಕಾರಿ ಜಯಾನಂದ ದೇವಾಡಿಗ, ಮೈಸೂರು ಪ್ರಾದೇಶಿಕ ಕಛೇರಿ ಅಸಿಸ್ಟೆಂಟ್ ಜನರಲ್‌ ಮ್ಯಾನೇಜರ್ ಡಾ. ಟಿ.ಆರ್. ಡಾ. ಅರುಣ್, ಕೂಡಿಗೆ ಬ್ಯಾಂಕಿನ ಮ್ಯಾನೇಜರ್ ಕೆ.ಎಂ. ಭಾನುಪ್ರಕಾಶ್, ಬ್ಯಾಂಕ್ ಮತ್ತು ಸಾರ್ವಜನಿಕ ಸಹಭಾಗಿತ್ವ ಸೇರಿದಂತೆ ಸೇವೆ ಬಗ್ಗೆ ಮಾತಾನಾಡಿದರು.
ಈ ಸಂದರ್ಭದಲ್ಲಿ
ವಿವಿಧ ವಿಭಾಗದ ಅಧಿಕಾರಿ ವರ್ಗದವರು ಮತ್ತು ಬ್ಯಾಂಕ್ ನೂರಾರು ಖಾತೆದಾರರು , ಸಾರ್ವಜನಿಕರು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!
WhatsApp us