ಕುಶಾಲನಗರ, ಫೆ 20: ಕೂರ್ಗ್ ವಾಟರ್ ಪಾರ್ಕ್ ವತಿಯಿಂದ ಕುಶಾಲನಗರದ ಜಾತ್ರಾ ಮೈದಾನದಲ್ಲಿ ಫೆ 21 ರಿಂದ 26 ರ ತನಕ ಹಮ್ಮಿಕೊಂಡಿರುವ ಕ್ರಿಕೆಟ್ ಟೂರ್ನಿಯ ಅಂಗವಾಗಿ ಗೆಳೆಯರ ಬಳಗ ತಂಡದ ಜರ್ಸಿ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಕಾವೇರಿ ನದಿ ಸ್ವಚ್ಚತಾ ಆಂದೋಲನ ಸಮಿತಿ ಅಧ್ಯಕ್ಷರಾದ ಎಂ.ಎನ್.ಚಂದ್ರಮೋಹನ್, ವಾಟರ್ ಪಾರ್ಕ್ ಮಾಲೀಕ ಲಕ್ಷ್ಮೀನಾರಾಯಣ, ಗೆಳೆಯರ ಬಳಗದ ಮಾಲೀಕ ವಿ.ಎಸ್.ಆನಂದಕುಮಾರ್, ಪತ್ರಕರ್ತ ವಿನೋದ್ ಜರ್ಸಿ ಬಿಡುಗಡೆಗೊಳಿಸಿ ಟೂರ್ನಿಗೆ ಶುಭ ಹಾರೈಸಿದರು.
ಗೆಳೆಯರ ಬಳಗದ ತಂಡದ ನಾಯಕ ಜಯಪ್ರಕಾಶ್, ಉಪನಾಯಕ ವೆಂಕಟೇಶ್ ಹಾಗೂ ಆಟಗಾರರು, ಗೆಳೆಯರ ಬಳಗದ ಸದಸ್ಯರು ಇದ್ದರು.
Back to top button
error: Content is protected !!