ಕ್ರೀಡೆ

ತಂತ್ರಜ್ಞಾನ ಎಷ್ಟೇ ಬೆಳೆದರು ಕಲೆಗೆ ಬೆಲೆಯಿದೆ: ಪ್ಯಾಕ್ಸ್ ಅಧ್ಯಕ್ಷ ಟಿ.ಆರ್.ಶ್ರವಣಕುಮಾರ್

ಕುಶಾಲನಗರ, ಆ 29: ಛಾಯಾಗ್ರಾಹಕ ವೃತ್ತಿಯನ್ನು ಮೊಬೈಲ್ ಕಸಿದುಕೊಂಡಿದ್ದರು, ತಂತ್ರಜ್ಞಾನ ಎಷ್ಟೇ ಬೆಳೆದರು, ಛಾಯಾ ಕಲೆಗೆ ಬೆಲೆ ಈಗಲೂ ಇದೆ, ಮುಂದೆಯೂ ಇದ್ದೆ ಇರುತ್ತೆ ಎಂದು ಪ್ಯಾಕ್ಸ್ ಸಹಕಾರ ಸಂಘದ ಅಧ್ಯಕ್ಷ ಟಿ.ಆರ್.ಶ್ರವಣಕುಮಾರ ಅಭಿಪ್ರಾಯ ವ್ಯಕ್ತಪಡಿಸಿದರು.

ಕೊಡಗು ಜಿಲ್ಲಾ ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ವತಿಯಂದ ಕುಶಾಲನಗರದ ಗುಂಡೂರಾವ್ ಬಡಾವಣೆಯ ಜಾತ್ರಾ ಮೈದಾನದಲ್ಲಿ ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕುಶಾಲನಗರ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿ ನಿರತರ ಸಹಕಾರ ಸಂಘವು, ಕುಶಾಲನಗರ ಮತ್ತು ಮಡಿಕೇರಿ ವ್ಯಾಪ್ತಿಯ ಛಾಯಾಗ್ರಾಹಕರು ತಮ್ಮ ಸಂಘದ ಸದಸ್ಯತ್ವದ ಗುರುತಿನ ಚೀಟಿ ಇರುವವರಿಗೆ ನಮ್ಮ ಸಂಸ್ಥೆಯಲ್ಲಿ ಸದಸ್ಯತ್ವ ಕೊಡಲು ನಮ್ಮ ಮುಂದಿನ ಆಡಳಿತ ಮಂಡಳಿ ಸಭೆಯಲ್ಲಿ ಕ್ರಮ ಕೈಗೊಂಡು, ವಿಶೇಷವಾದ ಸಾಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು. ನಿಮ್ಮ ಸಂಘದಿಂದ ಹೊಸ ಆವಿಷ್ಕಾರದ ಕ್ಯಾಮರಾ ಕಂಪೆನಿಗಳಿಂದ ವರ್ಕ್ ಶಾಪ್ ಮಾಡಿಸುವ ಮೂಲಕ ಎಲ್ಲರಲ್ಲೂ ಜ್ಞಾನ ಹೆಚ್ಚಿಸುವ ಕಾರ್ಯಗಾರ ಮಾಡಿಸಲು ಸಲಹೆ ನೀಡಿದರು. ಕ್ರೀಡೆಯಿಂದ ನಿತ್ಯ ಜೀವನದ ಜಂಜಾಟಗಳಿಂದ ಹೊರ ಬಂದು ಕೊಂಚ ರಿಲ್ಯಾಕ್ಸ್ ಆಗಬಹುದು.
ಕುಶಾಲನಗರ ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ ಮಾತನಾಡಿ, ಕ್ರೀಡೆಯಿಂದ ಮಾನಸಿಕ ಮತ್ತು ದೈಹಿಕ ಸದೃಢತೆ ದೊರೆಯುತ್ತದೆ. ಆಟದಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮೂಲಕ ಕ್ರೀಡಾ ಸ್ಫೂರ್ತಿ ಮೆರೆಯಲು ಕರೆ ನೀಡಿದರು.
ಒಟ್ಟು ಜಿಲ್ಲೆಯ ನಾನಾ ಭಾಗಗಳಿಂದ 6 ಛಾಯಾಗ್ರಾಹಕರ ತಂಡಗಳು ಪಂದ್ಯಾಟದಲ್ಲಿ ಪಾಲ್ಗೊಂಡಿದೆ.
ಗುರುವಾರ ಮಳೆಯಾಗುತ್ತಿರುವ ಕಾರಣ ಶುಕ್ರವಾರವೂ ಪಂದ್ಯಾಟ ನಡೆಯಲಿದೆ. ಶುಕ್ರವಾರ ಸಂಜೆ ವೇಳೆಗೆ ಅಂತಿಮ ಹಣಾಹಣಿ ನಡೆಸಲಾಗುತ್ತದೆ ಎಂದು ಕ್ರೀಡಾ ಕಾರ್ಯದರ್ಶಿ ಡ್ಯಾಡು ತಿಳಿಸಿದ್ದಾರೆ.
ಜಿಲ್ಲಾಧ್ಯಕ್ಷ ಆವರ್ತಿ.ಆರ್.ಮಹದೇವಪ್ಪ, ಪ್ರಧಾನ ಕಾರ್ಯದರ್ಶಿ ಲವಕುಮಾರ್, ಸಂಘಟನಾ ಕಾರ್ಯದರ್ಶಿ ಸುಬ್ರಮಣಿ, ಉಪಾಧ್ಯಕ್ಷ ರೋಷನ್, ಕ್ರೀಡಾ ಕಾರ್ಯದರ್ಶಿ ಡ್ಯಾಡು ಜೋಸೆಫ್,
ಮಾಜಿ ಜಿಲ್ಲಾಧ್ಯಕ್ಷ ವಸಂತ, ಕೆ.ಎಸ್.ನಾಗೇಶ್, ವಿಶ್ವ ಗುಡ್ಡೆಮನೆ, ವಿಜಯಕುಮಾರ್, ಪ್ರದೀಪ್ ಮರಗೊಡು ಇತರರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!