ಟ್ರೆಂಡಿಂಗ್

ಬ್ಯಾಂಕ್ ಉದ್ಯೋಗಿ ಕಾರ್ಗಿಲ್ ಯೋಧ ಮೊಹಮ್ಮದ್ ನಬಿಗೆ ಬೀಳ್ಕೊಡುಗೆ

ಕುಶಾಲನಗರ, ಮಾ 31: ಅದೊಂದು ಹೃದಯಸ್ಪರ್ಶಿ ಸಮಾರಂಭ.
ಎರಡೂವರೆ ದಶಕಗಳ ಹಿಂದೆ ಕಾರ್ಗಿಲ್ ನಲ್ಲಿ ಜೀವವನ್ನು ಪಣಕ್ಕಿಟ್ಟು ಶತ್ರುಗಳೊಂದಿಗೆ ಹೋರಾಡಿ ಸಾವನ್ನು ಜಯಿಸಿ ದೇಶಪ್ರೇಮ ಮೆರೆದು ಬಂದ ಸಾಹಸಿ ಯೋಧ ಬ್ಯಾಂಕಿನಲ್ಲಿ ತಮ್ಮ ಸೇವೆಯನ್ನು ಮುಗಿಸಿ ನಿವೃತ್ತಿಯಾದಾಗ ಬ್ಯಾಂಕಿನ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಬ್ಯಾಂಕಿನ ಗ್ರಾಹಕರು ಸೇರಿ ಸಲ್ಲಿಸಿದ ಗೌರವದ ಸಂದರ್ಭವದು.
ಕುಶಾಲನಗರದ ಯೂನಿಯನ್ ಬ್ಯಾಂಕಿನಲ್ಲಿ ಕಳೆದ 20 ವರ್ಷಗಳ ಸುಧೀರ್ಘ ಅವಧಿಯ ಸೇವೆ ಸಲ್ಲಿಸಿ ನಿವೃತ್ತಿಯಾದ ಸಂದರ್ಭ ಎಲ್ಲರ ಕಣ್ಣಂಚಿನಲ್ಲಿ ಕಂಬನಿ ತರಿಸಿ ಶುಭ ಹಾರೈಸಿದ ಪ್ರಸಂಗವದು.
ಯೂನಿಯನ್ ಬ್ಯಾಂಕಿನ ಹಿರಿಯ ವ್ಯವಸ್ಥಾಪಕಿ ರಾಜಶ್ರೀ ರಾಮಚಂದ್ರನ್ ಅಧ್ಯಕ್ಷತೆಯಲ್ಲಿ ಜರುಗಿದ ಸರಳ ಹಾಗೂ ಸುಂದರ ಸಮಾರಂಭದಲ್ಲಿ ಬ್ಯಾಂಕಿನ ನಿವೃತ್ತ ಅಧಿಕಾರಿ ಬಾಲಚಂದ್ರ ಮೊಹಮ್ಮದ್ ನಬಿ ಅವರು ಯೂನಿಯನ್ ಬ್ಯಾಂಕ್ ನೊಂದಿಗೆ ಸಾರ್ವಜನಿಕರನ್ನು ಆಕರ್ಷಿಸಿ ಅವರಿಗೆ ನೀಡುತ್ತಿದ್ದ ಸೇವೆಗಳು ಹಾಗೂ ಅವರು ಹೊಂದಿದ್ದ ಉತ್ತಮ ಬಾಂಧವ್ಯದ ಕುರಿತು ಮಾತನಾಡುತ್ತಲೇ ಇಡೀ ಸಭೆ ಮಂತ್ರಮುಗ್ಧತೆಯೊಂದಿಗೆ ಗೌರವ ಸಲ್ಲಿಸಿದ ಬಗೆ ನಿಜಕ್ಕೂ ಶ್ಲಾಘನೀಯ.
ತಾನು ಬ್ಯಾಂಕಿಗೆ ನೌಕರನಾಗಿ ಸೇರುವ ಮುನ್ನಾ ಎದುರಿಸಿದ ಬ್ಯಾಂಕಿಂಗ್ ಪರೀಕ್ಷೆಗಳು, ದೇಶಸೇವೆಯಲ್ಲಿದ್ದಾಗ ಶತ್ರು ರಾಷ್ಟ್ರಗಳ ಸೈನಿಕರೊಂದಿಗೆ ಅನುಭವಿಸಿದ ಅನುಭವಗಳನ್ನು ಸಭಿಕರ ಮುಂದೆ ಯೋಧ ನಬಿ ಅಹಮದ್ ಬಿಚ್ಚಿಟ್ಟಾಗ ಸಭೆ ಸಲ್ಲಿಸಿದ ಗೌರವ ಅವಿಸ್ಮರಣೀಯ.
ಈ ಸಂದರ್ಭ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಮೂರ್ತಿ, ನಿವೃತ್ತ ಶಿಕ್ಷಕ ಹೆಬ್ಬಾಲೆ ವಸಂತ್, ಹಿರಿಯ ಪೇದೆ ಕೃಷ್ಣಶೆಟ್ಟಿ, ದಂತ ವೈದ್ಯ ಪೊನ್ನುಕಟ್ಟಿ, ಉದ್ಯಮಿ ಕನ್ಯಾಂಭ ರಾಜಶೇಖರ್, ಮೊಹಮ್ಮದ್ ನಭಿ ಅವರ ಪತ್ನಿ ನೂರ್ ಜಹಾನ್, ಮಕ್ಕಳಾದ ಆಸಿಫ್ ಹಾಗೂ ಅಜರ್ ಮೊದಲಾದವರು ಯೂನಿಯನ್ ಬ್ಯಾಂಕಿನಲ್ಲಿ ನಬಿ ಅಹಮದ್ ಸಲ್ಲಿಸುತ್ತಿದ್ದ ಸಾರ್ವಜನಿಕರ ಸೇವೆಗಳ ಬಗ್ಗೆ ಮುಕ್ತ ಕಂಠದಿಂದ ಶ್ಲಾಘಿಸಿ ಶುಭ ಹಾರೈಸಿದರು.
ಬ್ಯಾಂಕಿನ ಗ್ರಾಮೀಣ ಅಭಿವೃದ್ದಿ ಅಧಿಕಾರಿ ಕವಿತಾ,
ಬ್ಯಾಂಕಿನ ಸಿಬ್ಬಂದಿಗಳಾದ ಬಿ.ಟಿ.ಪ್ರಕಾಶ್, ಅನಿಲ್ ಕುಮಾರ್, ಎಂ.ಪ್ರಸನ್ನ ಮೊದಲಾದವರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!
WhatsApp us