ಕುಶಾಲನಗರ ಏ 01: ನಾಡಿನ ಭಕ್ತರ ಪಾಲಿಗೆ ನಡೆದಾಡುವ ದೈವವೇ ಆಗುವ ಮೂಲಕ ಲಕ್ಷಾಂತರ ಮಂದಿಗೆ ಬದುಕು ಕರುಣಿಸಿದ ಸಿದ್ದಗಂಗೆಯ ಸಿದ್ದಪುರುಷ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಯವರ 117 ನೇ ಹುಟ್ಟು ಹಬ್ಬವನ್ನು ಕುಶಾಲನಗರದ ಸೋಮೇಶ್ವರ ದೇವಾಲಯದಲ್ಲಿ ಸೋಮವಾರ ಆಚರಿಸಲಾಯಿತು.
ಸಿದ್ದಗಂಗಾ ಶ್ರೀ ಭಕ್ತ ಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶ್ರೀ ಸೋಮೇಶ್ವರ ದೇವರಿಗೆ ಶ್ರೀಗಳ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭ ಮಾತನಾಡಿದ ಸಿದ್ದಗಂಗಾ ಶ್ರೀ ಮಂಡಳಿ ಅಧ್ಯಕ್ಷ ಕೆ.ಎಸ್.ಮೂರ್ತಿ, ಸಿದ್ದಗಂಗೆಯ ಶ್ರೀ ಶಿವಕುಮಾರ ಸ್ವಾಮೀಜಿ ತಮ್ಮ ಜೀವಿತಾವಧಿಯಲ್ಲಿ ಕೈಗೊಂಡ ತ್ರಿವಿಧ ದಾಸೋಹದ ಸೇವೆಗೆ ಭಾರತ ಸರ್ಕಾರ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಒತ್ತಾಯಿಸಿದರು.
ಇದೇ ಸಂದರ್ಭ ಅಕ್ಕನ ಬಳಗದ ಮಹಿಳೆಯರಿಂದ ಕಾಯಕ ಯೋಗಿಯ ಕುರಿತು ಭಜನೆಗಳು ಏರ್ಪಟ್ಟವು. ಈ ಸಂದರ್ಭ
ಕುಶಾಲನಗರದ ಹಿರಿಯ ನಿವಾಸಿ ಬಿ.ಆರ್.ನಾರಾಯಣ, ದೇವಾಲಯದ ಅರ್ಚಕ ಸುಬ್ರಮಣ್ಯ ದೀಕ್ಷಿತ್, ಕುಶಾಲನಗರ ವೀರಶೈವ ಸಮಾಜದ ಅಧ್ಯಕ್ಷ ಎಂ.ಎಸ್.ಶಿವಾನಂದ, ಅಕ್ಕನ ಬಳಗದ ಸದಸ್ಯರಾದ ಲೇಖನಾ, ಬೇಬಿ, ನಿವೃತ್ತ ಯೋಧ ಅಮೆ ಜನಾರ್ಧನ್ ಹಾಗೂ ಕುಶಾಲನಗರದಲ್ಲಿ ವಾಸವಿರುವ ರಾಜಸ್ಥಾನ ಸಮಾಜದ ಮಹಿಳೆಯರು ಇದ್ದರು.
Back to top button
error: Content is protected !!