ಟ್ರೆಂಡಿಂಗ್
ಜರ್ಸಿ ತಳಿ ಸಂವರ್ಧನ ಕೇಂದ್ರಕ್ಕೆ ಸೇರಿದ ಹುಲ್ಲುಗಾವಲಿಗೆ ಬೆಂಕಿ: 10 ಎಕರೆ ಬೆಂಕಿಗಾಹುತಿ

ಕುಶಾಲನಗರ, ಮಾ 30:
ಕೂಡಿಗೆ ಕೃಷಿ ಕ್ಷೇತ್ರದ ಆವರಣದಲ್ಲಿರುವ ಸೈನಿಕ ಶಾಲೆಯ ಮುಂಭಾಗದ ಜರ್ಸಿ ತಳಿ ಸಂವರ್ಧನ ಕೇಂದ್ರಕ್ಕೆ ಸೇರಿದ 10 ಎಕರೆಗಳಷ್ಟು ಪ್ರದೇಶದ ಹುಲ್ಲುಗಾವಲಿಗೆ ಬೆಂಕಿ ಬಿದ್ದ ಪರಿಣಾಮವಾಗಿ ಅಲ್ಲಿ ಹಸುಗಳಿಗೆ ಬೆಳೆಸಲಾಗಿದ್ದ ಪ್ರದೇಶದ ಹಸಿಹುಲ್ಲು ಮತ್ತು ಸಂಗ್ರಹದ ಒಣ ಹುಲ್ಲು ಸೇರಿದಂತೆ ನೀರಾವರಿ ಸರಬರಾಜಿಗೆ ಅಳವಡಿಕೆ ಮಾಡಿದ ಪೈಪ್ ಗಳು ಬೆಂಕಿಗೆ ಅಹುತಿಯಾದ ಘಟನೆ ಶನಿವಾರ ಸಂಜೆ ನಡೆದಿದೆ.
ಕುಶಾಲನಗರ ಅಗ್ನಿಶಾಮಕ ದಳದವರು ಸ್ಧಳಕ್ಕೆ ಅಗಮಿಸಿ ಬೆಂಕಿಯನ್ನು ನಂದಿಸಲು ಹರಸಾಹಸ ಪಟ್ಟರೂ ಸಹ ಹುಲ್ಲುಗಾವಲು ಸಂಪೂರ್ಣವಾಗಿ ಬೆಂಕಿ ಆಹುತಿಯಾಯಿತು. ಪಕ್ಕದಲ್ಲಿನ ತೋಟಗಾರಿಕೆ ಇಲಾಖೆಗೆ ಮತ್ತು ಗ್ರಾಮ ಪಂಚಾಯತಿ ಕಸ ವಿಲೇವಾರಿ ಘಟಕಕ್ಕೆ ಬೆಂಕಿ ಬೀಳಬಹುದೆಂದು ಮುನ್ನೆಚ್ಚರಿಕೆ ಕ್ರಮವಾಗಿ ಅಗ್ನಿಶಾಮಕ ದಳದ ಎರಡೂ ವಾಹನಗಳ ಮೂಲಕ ಆ ಭಾಗದಲ್ಲಿ ಬೆಂಕಿ ಹರಡದಂತೆ ಕ್ರಮ ವಹಿಸಲಾಯಿತು.
ಕೂಡುಮಂಗಳೂರು ಗ್ರಾಮ ಪಂಚಾಯತಿ ಅಧ್ಯಕ್ಷ ಭಾಸ್ಕರ್ ನಾಯಕ್ ಮತ್ತು ಅಭಿವೃದ್ಧಿ ಅಧಿಕಾರಿ ಸಂತೋಷ್ ಸ್ಥಳಕ್ಕೆ ಭೇಟಿ ನೀಡಿ ಕಸ ವಿಲೇವಾರಿ ಘಟಕದ ಕಡೆಯಲ್ಲಿ ಬೆಳೆದು ನಿಂತಿದ ಹುಲ್ಲುಗಾವಲಿಗೆ ಬೆಂಕಿ ಬೀಳದ ಹಾಗೆ ಮುನ್ನೆಚ್ಚರಿಕೆ ವಹಿಸಿದರು.