ಕುಶಾಲನಗರ ಮಾ 30: ಕುಶಾಲನಗರದ ಟೈಕೂನ್ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಉಚಿತ ಹಾಕಿ ತರಬೇತಿ ಶಿಬಿರ ಏಪ್ರಿಲ್ 7 ರಿಂದ ಆರಂಭಗೊಳ್ಳಲಿದೆ ಎಂದು ಕ್ಲಬ್ ಕಾರ್ಯದರ್ಶಿ ಬಿ.ಟಿ. ಪೂರ್ಣೇಶ್ ತಿಳಿಸಿದ್ದಾರೆ.
ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಕಳೆದ ಹತ್ತು ವರ್ಷಗಳಿಂದ ಶಿಬಿರ ನಡೆಯುತ್ತಿದ್ದು, ಈ ಮೂಲಕ ತರಬೇತಿ ಪಡೆದ ವಿದ್ಯಾರ್ಥಿಗಳು ಕ್ರೀಡಾ ಶಾಲೆಗಳಿಗೆ ನೇಮಕಗೊಳ್ಳುತ್ತಿದ್ದಾರೆ. ಶಿಬಿರದಲ್ಲಿ ಹಾಕಿ, ಅಥ್ಲೆಟಿಕ್ಸ್ ಮತ್ತು ಈಜು ಬಗ್ಗೆ ತರಬೇತಿ ನೀಡಲಾಗುತ್ತದೆ. ನುರಿತ ತರಬೇತುದಾರರ ಮೂಲಕ ಹದಿನೈದು ದಿನಗಳ ಕಾಲ ಶಿಬಿರ ನಡೆಯಲಿದೆ ಎಂದು ತಿಳಿಸಿದರು.
ಎಂಟು ವರ್ಷದಿಂದ ಮೇಲ್ಪಟ್ಟವರು ಈ ಶಿಬಿರದಲ್ಲಿ ಪಾಲ್ಗೊಳ್ಳಬಹುದು. ಕುಶಾಲನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಶಿಬಿರ ನಡೆಯಲಿದೆ. ಬೆಳಗ್ಗೆ 6:30 ರಿಂದ 8 ಗಂಟೆ ತನಕ ಹಾಕಿ ನಂತರ ಅಥ್ಲೆಟಿಕ್ಸ್ ತರಬೇತಿ ನೀಡಲಾಗುವುದು.
ಈಜು ತರಬೇತಿಗೆ ಮಾತ್ರ ಖಾಸಗಿ ಈಜುಕೊಳ ಸೌಲಭ್ಯ ಹೊಂದಬೇಕಾದ ಕಾರಣ ಶಿಬಿರಾರ್ಥಿಗಳಿಗೆ ಕನಿಷ್ಠ ಶುಲ್ಕ ವಿಧಿಸಲಾಗುತ್ತದೆ ಎಂದರು.
ಕ್ರೀಡೆ ಮೂಲಕ ಮಕ್ಕಳ ದೈಹಿಕ ಮಾನಸಿಕ ಬೆಳವಣಿಗೆ ವೃದ್ಧಿಪಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ತರಬೇತುದಾರರಾದ ಬಿ.ಟಿ.ಪೂರ್ಣೇಶ್, ಚಂದ್ರಶೇಖರ್ ರೆಡ್ಡಿ, ತಾತ್ವಿಕ್ ಶೆಟ್ಟಿ, ಶ್ರೇಯಸ್ ಶೆಟ್ಟಿ, ಅರುಣ್ ,ಮಹೇಶ್, ನಂದ, ದಿನೇಶ್, ಸೌಮ್ಯ, ಚಂದ್ರಶೇಖರ್, ಕಿಶನ್ ಗೌಡ ಮತ್ತಿತರರು ತರಬೇತು ನೀಡಲಿದ್ದಾರೆ ಎಂದರು.
ಸರಕಾರಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಬಗ್ಗೆ ತಮ್ಮ ಸಂಸ್ಥೆ ಹೆಚ್ಚಿನ ಗಮನ ಹರಿಸಲಿದ್ದು ಶಿಬಿರದಲ್ಲಿ ಪಾಲ್ಗೊಳ್ಳುವಂತೆ ಪೂರ್ಣೇಶ್ ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9449831426 ಅಥವಾ 9448647608 ಸಂಪರ್ಕಿಸುವಂತೆ ಕೋರಿದ್ದಾರೆ.
ಗೋಷ್ಠಿಯಲ್ಲಿ ಖಜಾಂಚಿ ಪ್ರಕಾಶ್ ಪಳಂಗಪ್ಪ, ಸಹ ಕಾರ್ಯದರ್ಶಿ ಚಂದ್ರಶೇಖರ್, ಸಂಸ್ಥೆಯ ನಿರ್ದೇಶಕರಾದ ಅರುಣ್, ಮಹೇಶ್ ಇದ್ದರು.
Back to top button
error: Content is protected !!