ಕುಶಾಲನಗರ, ಮಾ 09 : ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಕುಶಾಲನಗರದ ಜಂಪ್ ಸ್ಮಾಶ್ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಆಯುಧಿ ತಂಡ ಮೊದಲ ಬಹುಮಾನದೊಂದಿಗೆ ಆಕರ್ಷಕ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿತು.
ಪಂದ್ಯಾವಳಿಯಲ್ಲಿ ನೈಟ್ ಆರು ತಂಡಗಳ ಮೂಲಕ ಸುಮಾರು 70 ಆಟಗಾರರು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು.
ಶಿವರಾತ್ರಿ ಹಬ್ಬದ ಶುಕ್ರವಾರ ಬೆಳಗ್ಗೆ 10 ಗಂಟೆಯಿಂದ ಆರಂಭವಾದ ಪಂದ್ಯ ಶನಿವಾರ ಮುಂಜಾನೆ 5 ಗಂಟೆಯವರೆಗೂ ನಡೆಯಿತು.
ಟೀಮ್ ರಾಕರ್ಸ್, ಎಇ, ಆಯುಧಿ ಹಾಗೂ ಜಂಪ್ ಸ್ಮಾಶ್ ನಾಲ್ಕು ತಂಡಗಳು ಸೆಮಿ ಪೈನಲ್ ತಲುಪಿದರೆ, ನೈಟ್ ರೈಡರ್ಸ್ ಹಾಗೂ ಗೋಲ್ಡನ್ ರಾಕರ್ಸ್ ತಂಡಗಳು ನೀರಸ ಪ್ರದರ್ಶನದೊಂದಿಗೆ ಹೊರಗುಳಿದವು.
ಬಳಿಕ ನಾಲ್ಕು ತಂಡಗಳ ನಡುವೆ ಹಣಾಹಣಿ ಏರ್ಪಟ್ಟು ಜಂಪ್ ಸ್ಮಾಶ್ ಹಾಗೂ ಆಯುಧಿ ತಂಡಗಳು ಫೈನಲ್ ತಲುಪಿದವು. ಅಂತಿಮವಾಗಿ ಆಯುಧಿ ಉತ್ತಮ ಪ್ರದರ್ಶನ ತೋರುವ ಮೂಲಕ ಮೊದಲ ಬಹುಮಾನ 30 ಸಾವಿರ ರೂ ಹಾಗೂ ಆಕರ್ಷಕ ಟ್ರೋಫಿ ತನ್ನದಾಗಿಸಿಕೊಂಡಿತು.
ಜಂಪ್ ಸ್ಮಾಶ್ ತಂಡ ದ್ವಿತೀಯ ಬಹುಮಾನ ರೂ.20 ಸಾವಿರ ಹಾಗೂ ಆಕರ್ಷಕ ಟ್ರೋಫಿ ಪಡೆದರೆ, ಟೀಮ್ ಎಇ ಮೂರನೇ ಬಹುಮಾನ ರೂ 10 ಸಾವಿರ ಹಾಗೂ ಟ್ರೋಫಿ ಪಡೆದುಕೊಂಡಿತು.
ಈ ಸಂದರ್ಭ ಹಿರಿಯ ಆಟಗಾರ ನಿರಂಜನ್ ಹಾಗೂ ಜಂಪ್ ಸ್ಮಾಶ್ ಕ್ರೀಡಾಂಗಣದ ಮಾಲೀಕ ಶರತ್ ಬಹುಮಾನ ವಿತರಿಸಿದರು.
ಇದಕ್ಕೂ ಮುನ್ನಾ ಪಂದ್ಯಾವಳಿಯನ್ನು ಕುಶಾಲನಗರ ಡಿವೈಎಸ್ಪಿ ಆರ್.ವಿ. ಗಂಗಾಧರ್ ಉದ್ಘಾಟಿಸಿ ಕ್ರೀಡಾಪಟುಗಳಿಗೆ ಶುಭ ಕೋರಿದರು.
Back to top button
error: Content is protected !!