ಕುಶಾಲನಗರ, ಫೆ 21: ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರ 10 ಹೆಚ್ ಪಿ ಪಂಪ್ ಸೆಟ್ ಗಳ ವಿದ್ಯುತ್ ಕಡಿತವನ್ನು ಖಂಡಿಸಿ ಮಡಿಕೇರಿಯ ಕಾರ್ಯ ನಿರ್ವಾಹಕ ಇಂಜಿನಿಯರ್ ಕಚೇರಿಯ ಮುಂದೆ ಧರಣಿ ಕೂರಲಾಯಿತು.
ರೈತರ ಈ ಒಂದು ಬೇಡಿಕೆಗಳಿಗೆ ಕಾರ್ಯ ನಿರ್ವಾಹಕ ಅಧಿಕಾರಿಯವರು ಕಿಂಚಿತ್ತು ಸ್ಪಂದಿಸದೆ ರೈತರನ್ನು ಕಡೆಗಣಿಸಿರುತಾರೆ.. ಈ ಒಂದು ಹೋರಾಟವನ್ನು ಮೇಲೆ ಅಧಿಕಾರಿಗಳಿಗೆ ತಿಳಿಸದೆ ಉದ್ಧಟತನವನ್ನು ಪ್ರದರ್ಶಿಸುತ್ತಾರೆ. ಮೇಲಾಧಿಕಾರಿಯವರ ಆದೇಶ ಬರುವ ತನಕ ನಮ್ಮಿಂದ ನಿಮ್ಮ ಬೇಡಿಕೆಯನ್ನು ಈಡೇರಿಸಲು ಸಾಧ್ಯವಿಲ್ಲವೆಂದು ಹಾಗು ಕಡಿತ ಗೊಳಿಸಿರುವುದನ್ನು ಸಕ್ರಿಯಗೊಳಿಸಲು ಸಾಧ್ಯವಿಲ್ಲ ವೆಂದು ಮತ್ತು ಮುಂದಿನ ದಿನದಲ್ಲಿ ಬಿಲ್ ಪಾವತಿ ಮಾಡದವರ ವಿದ್ಯುತ್ ಸಂಪರ್ಕ ವನ್ನು ಕಡಿತಗೊಳಿಸುತ್ತೇವೆ ಎಂಬ ಹೇಳಿಕೆಯನ್ನು ನೀಡಿರುತ್ತಾರೆ. ಇದರಿಂದ ರೈತರು ಮನನೊಂದು ಅಹೋರಾತ್ರಿ ಧರಣಿ ಕಚೇರಿಯ ಮುಂದೆ ಪೆಂಡಾಲ್ ಹಾಕಿ ಧರಣಿ ಕೂತಿರುವ ರೈತರು ಆಕ್ರೋಷ ವ್ಯಕ್ತಪಡಿಸಿ ಸರಕಾರ ಕೊಡಲೇ ಸ್ಪಂದಿಸಿ ರೈತರ ಬೇಡಿಕೆಯನ್ನು ಈಡೇರಿಸಿ ಕೊಡಬೇಕಾಗಿ ಸ್ಥಳೀಯ ಶಾಸಕರನ್ನು ಕೋರಿದ್ದಾರೆ. ಪ್ರತಿಭಟನೆಯಲ್ಲಿ ಚಂದ್ರ ಶೇಖರ್ ಹೇರೂರು , ಕ್ಲಿವ ಪೊನ್ನಪ್ಪ , ದಾಸಂಡ ರಮೇಶ್ ಚೆಂಗಪ್ಪ , ಅರುಣ್ , ಗೌತಮ್ , ಶಾಶ್ವತ್ , ಅಯ್ಯಣ್ಣ , ಜಗನಾಥ್ಹಾಗು ಜಿಲ್ಲೆಯ ರೈತರು ಪಾಲ್ಗೊಂಡಿದ್ದರು.
Back to top button
error: Content is protected !!