ಕುಶಾಲನಗರ, ಏ 09: ಗೃಹಬಳಕೆ ಸಿಲಿಂಡರ್ ವಿತರಣೆ ಸಮರ್ಪಕವಾಗಿದ್ದು ಗ್ರಾಹಕರು ಆತಂಕ ಪಡೆದಂತೆ ಬೈಲುಕೊಪ್ಪ ಸಿದ್ದಾರ್ಥ ಗ್ಯಾಸ್ ಏಜೆನ್ಸಿಯ ವಿತರಕರಾದ ಎಂ.ಕೆ.ದಿನೇಶ್ ಮನವಿ ಮಾಡಿದ್ದಾರೆ.
ಸಿದ್ದಾರ್ಥ ಗ್ಯಾಸ್ ಗೋದಾಮು ಘಟಕಕ್ಕೆ ಮಂಗಳೂರಿನ ಬಿಪಿಸಿಎಲ್ ಅಧಿಕಾರಿಗಳ ತಂಡ ಭೇಟಿ ನೀಡಿ ಈಗಾಗಲೆ ಪರಿಶೀಲನೆ ನಡೆಸಿದೆ
ಗ್ರಾಹಕರಿಗೆ ಗೃಹ ಬಳಕೆಯ ಸಿಲಿಂಡರ್ ಸರಬರಾಜಿನಲ್ಲಿ ಸಮಸ್ಯೆ ಇಲ್ಲ. ಹಾಗಾಗಿ ಯಾವುದೇ ಗ್ರಾಹಕರು ಭಯಭೀತರಾಗುವ ಅಗತ್ಯವಿಲ್ಲ.
ಹಾಗೂ ಭಯಪೀಡಿತರಾಗಿ ಮುಂಗಡ ಬುಕ್ಕಿಂಗ್ ಮಾಡುವ ಅಗತ್ಯವೇ ಇಲ್ಲ.
ಮಧ್ಯಪ್ರಾಚ್ಯ ದೇಶಗಳಲ್ಲಿ ಕಳೆದ 40 ದಿನಗಳಿಂದ ನಡೆಯುತ್ತಿದ್ದ ಯುದ್ಧ ದಿಂದಾಗಿ ಭಾರತ ದೇಶಕ್ಕೆ ಸರಬರಾಜು ಆಗುತ್ತಿದ್ದ ಗ್ಯಾಸ್ ಸರಬರಾಜು ಆರಂಭದಲ್ಲಿ ಒಂದಷ್ಟು ವಿಳಂಭ ವಾಗಿದೆ.
ಆದರೆ ಈಗ ಆ ಸಮಸ್ಯೆ ಬಗೆಹರಿದಿದೆ.
ಸಿದ್ದಾರ್ಥ ಗ್ಯಾಸ್ ಸಂಪರ್ಕ ಪಡೆದಿರುವ ಹಾರನಹಳ್ಳಿ ಹಾಗೂ ಬೈಲಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿನ ಗ್ರಾಹಕರು ಗ್ಯಾಸ್ ಸಿಲಿಂಡರ್ ಪಡೆಯಲು ಭಯಪಡುವ ಅಗತ್ಯವಿಲ್ಲ.
ಸಕಾಲಕ್ಕೆ ಸಿಲಿಂಡರ್ ದೊರಕಲ್ಲಾ ಎಂಬ ಆತಂಕವೂ ಬೇಡ.
ಹಲವು ಗ್ರಾಹಕರು ಭಯಭೀತರಾಗಿ ಮುಗಿಬಿದ್ದು ಗ್ಯಾಸ್ ಬುಕ್ಕಿಂಗ್ ಮಾಡುತ್ತಿದ್ದ ಕಾರಣ ನೈಜ ಗ್ರಾಹಕರಿಗೆ ಒಂದಷ್ಟು ಅನಾನುಕೂಲ ವಾಗಿತ್ತು.
ಆದಾಗ್ಯೂ ನಾವು ನಮ್ಮ ಸಿದ್ಧಾರ್ಥ ಗ್ಯಾಸ್ ಗ್ರಾಹಕರ ಹಿತದೃಷ್ಟಿಯಿಂದ ಯಾವುದೇ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ಹಾಗೂ ಅಗತ್ಯ ಕ್ರಮ ಕೈಗೊಂಡಿದ್ದೇವೆ.
ಇದೀಗ ಮಧ್ಯಪ್ರಾಚ್ಯ ದೇಶಗಳಲ್ಲಿ ಯುದ್ದ ಭೀತಿ ಕ್ಷೀಣವಾಗುತ್ತಿರುವ ಕಾರಣ ಗ್ಯಾಸ್ ಸರಬರಾಜು ಹಿಂದಿನಂತೆಯೇ ಸರಬರಾಜು ಆಗಲಿದೆ ಅವರು ವಿವರಿಸಿದರು.
ಬಿಪಿಸಿಎಲ್ ಮಂಗಳೂರು ವಿಭಾಗದ ಅಧಿಕಾರಿಗಳ ತಂಡ
ಜೊತೆಗೆ ತಾಲ್ಲೂಕಿನ ತಹಸೀಲ್ದಾರ್ ಹಾಗೂ ಆಹಾರ ಅಧಿಕಾರಿಗಳು ಕೂಡ ಆಗಿಂದಾಗ್ಗೆ ಪರಿಶೀಲಿಸುತ್ತಿದ್ದು ಯಾವುದೇ ಸಮಸ್ಯೆ ಇಲ್ಲ ಎಂದು ಅವರು ತಿಳಿಸಿದ್ದಾರೆ.
ಈ ನಡುವೆ ದೊಡ್ಡ ದೊಡ್ಡ ಗ್ರಾಮಗಳು, ನಗರ ಪ್ರದೇಶಗಳಲ್ಲಿ ಎಲ್ ಪಿ ಜಿ ಬಿಟ್ಟು (ಪೈಪ್ ಗ್ಯಾಸ್) ಪಿಎನ್ ಜಿ ಗ್ಯಾಸ್ ಸಂಪರ್ಕ ಕಲ್ಪಿಸುವ ಗುರಿ ಕೇಂದ್ರ ಸರ್ಕಾರದ ಮುಂದಿದೆ. ಮುಂದಿನ ದಿನಗಳಲ್ಲಿ ಎಲ್ಲವೂ ಸರಾಗವಾಗಿ ನಡೆಯಲಿದೆ. ಗೃಹಬಳಕೆ ಗ್ಯಾಸ್ ಪಡೆದು ಕಾಳಸಂತೆಯಲ್ಲಿ ಮಾರಾಟ ಮಾಡದಂತೆ ಕೋರಿದ ಸಿದ್ದಾರ್ಥ ಗ್ಯಾಸ್ ವಿತರಕರಾದ ಅನಿತಾ ದಿನೇಶ್ ಹಾಗೂ ಎಂ.ಕೆ.ದಿನೇಶ್ ಕೋರಿದ್ದಾರೆ.
Back to top button
error: Content is protected !!