ಕುಶಾಲನಗರ, ಏ 08: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಬಸವನತ್ತೂರು ಗ್ರಾಮದ ಗ್ರಾಮ ದೇವತೆ ಶ್ರೀ ಚೌಡಮ್ಮ ಉತ್ಸವ ಆಚರಣ ಸಮಿತಿಯ ನೂತನ ಅಧ್ಯಕ್ಷರಾಗಿ ರವಿ ಪಕ್ಷಿ ಆಯ್ಕೆಯಾದರು.
ಶ್ರೀ ಮತ್ ಚೌಡಮ್ಮ ದೇವಿಯ ಪೂಜಾ ಕಾರ್ಯಕ್ರಮಗಳ ಬಗ್ಗೆ ಊರಿನ ಗಣ್ಯರು ಹಾಗೂ ಗೌರವಾನ್ವಿತ ಅಧ್ಯಕ್ಷರಾದಂತಹ ಲಿಂಗಯ್ಯ, ಶಿವಣ್ಣ, ಕಾಳಪ್ಪಣ್ಣ, ವರದರಾಜ ದಾಸ್, ಜವರಪ್ಪಣ್ಣ, ದೇವಸ್ಥಾನ ಸಮಿತಿಯ ಸರ್ವ ಸದಸ್ಯರು ಹಾಗೂ ಊರಿನ ಪ್ರಮುಖರ ಸಮ್ಮುಖದಲ್ಲಿ ಸಭೆ ನಡೆಸಿ ಚೌಡಮ್ಮ ತಾಯಿಯ ಉತ್ಸವ ಆಚರಣ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ರವಿ, ಉಪಾಧ್ಯಕ್ಷರಾಗಿ ರವಿನಾಯಕ್, ಕಾರ್ಯದರ್ಶಿಯಾಗಿ ಸತೀಶ್ ತೋಪಯ್ಯ, ಖಜಾಂಜಿಯಾಗಿ ಧರ್ಮ, ನಿರ್ದೇಶಕರಾಗಿ ಅಭಿಲಾಶ್, ರೋಹಿತ್, ಗಣೇಶ್ ಅವರನ್ನು ನೇಮಕ ಮಾಡಲಾಗಿದೆ. ಸಭೆಯಲ್ಲಿ ದೇವತಾ ಕಾರ್ಯಕ್ರಮವನ್ನು ಇದೇ ತಿಂಗಳ ಏಪ್ರಿಲ್ 24 ರಂದು ದೇವತಾ ಪೂಜಾ ಕಾರ್ಯಕ್ರಮಗಳು ಹಾಗೂ ಅನ್ನ ಸಂತರ್ಪಣ ಕಾರ್ಯಕ್ರಮವನ್ನು ನೆರವೇರಿಸಲು ತೀರ್ಮಾನಿಸಲಾಯಿತು. ಎಲ್ಲಾ ಭಕ್ತಾದಿಗಳು ತನು ಮನ ಧನ ಸಹಾಯದೊಂದಿಗೆ ಅಧಿಕ ಸಂಖ್ಯೆಯಲ್ಲಿ ಬಂದು ಶ್ರೀ ಮತ್ ಚೌಡಮ್ಮ ದೇವಿಯ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಾಗಿ ಸಮಿತಿ ವಿನಂತಿಸಿದೆ.
Back to top button
error: Content is protected !!