ಕುಶಾಲನಗರ ಏ 09:ಕುಶಾಲನಗರದ ಪ್ರತಿಷ್ಠಿತ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ತೊರೆನೂರು ಗ್ರಾಮದ ಹೆಚ್.ಬಿ.ಚಂದ್ರಪ್ಪ ನೇಮಕವಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಚಂದ್ರಪ್ಪ ಅವರು ಗೆಲುವು ಸಾಧಿಸಿದರು.
ಒಟ್ಟು 12 ಮಂದಿ ನಿರ್ದೇಶಕರ ಸ್ಥಾನದ ಆಡಳಿತ ಮಂಡಳಿಯ ನೂತನ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹೆಚ್.ಬಿ.ಚಂದ್ರಪ್ಪ ಅವರಿಗೆ 7 ಮತಗಳು,
ಪ್ರತಿಸ್ಪರ್ಧಿ ಅಭ್ಯತ್ ಮಂಗಲದ ಕೆ.ಎಂ.ಪ್ರಸನ್ನ ಅವರಿಗೆ 5 ಮತಗಳು ದೊರೆತವು.
ರಿಟರ್ನಿಂಗ್ ಅಧಿಕಾರಿಯಾಗಿ ಕೊಡಗು ಡಿಸಿಸಿ ಬ್ಯಾಂಕಿನ ಮೋಹನ್ ಅವರು ಕಾರ್ಯನಿರ್ವಹಿಸಿದರು.
ಹಿರಿಯ ಸಹಕಾರಿ ಎಂ.ಎನ್.ಕುಮಾರಪ್ಪ ಅವರ ನಿಧನದಿಂದಾಗಿ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆಯಿತು.
ಈ ಸಂದರ್ಭ ನಿರ್ದೇಶಕರಾದ ಬಿ.ಎಂ.ಪಾರ್ವತಿ, ಕೆ.ಎಸ್.ಮಂಜುನಾಥ್, ಎನ್.ಸಿ.ಪೊನ್ನಪ್ಪ, ಹೆಚ್.ಜೆ.ಶರತ್, ಬಿ.ಸಿ.ಮಲ್ಲಿಕಾರ್ಜುನ, ಹೆಚ್.ಡಿ.ನಂದಕುಮಾರ್, ಡಿ.ಕೆ.ಗಂಗಾಧರ್, ಹೆಚ್.ಎನ್.ಮಹಾದೇವ ಹಾಗೂ ಡಿಸಿಸಿ ಬ್ಯಾಂಕಿನ ಪ್ರತಿನಿಧಿ ಜಲಜಾ ಶೇಖರ್ ಹಾಗೂ ಸಂಘದ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಇದ್ದರು.
Back to top button
error: Content is protected !!