ಮಡಿಕೇರಿ, ಡಿ 13: ಫೇಸ್ಬುಕ್ನಲ್ಲಿ ಪರಿಚಯವಾದ ಯುವತಿಯ ಭೇಟಿಗಾಗಿ ಮಂಡ್ಯದಿಂದ ಮಡಿಕೇರಿಗೆ ಬಂದಿದ್ದ ವ್ಯಕ್ತಿಯನ್ನು ಮನೆಯೊಂದರಲ್ಲಿ ಬಂಧಿಸಿಟ್ಟು ಹಣಕ್ಕಾಗಿ ಬೇಡಿಕೆಯಿರಿಸಿ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಮಂಡ್ಯ ಜಿಲ್ಲೆಯ ಮದ್ದೂರು ಮೂಲದ ಮಹದೇವ್ ಶುಕ್ರವಾರ ಸಂಜೆ ಮಡಿಕೇರಿಗೆ ಬಂದಿದ್ದಾನೆ. ಮಹದೇವ್ಗೆ ಫೇಸ್ಬುಕ್ನಲ್ಲಿ ರಚನಾ ಎಂಬಾಕೆಯ ಪರಿಚಯವಾಗಿತ್ತು. ಅಕೆಯ ಭೇಟಿಗಾಗಿಯೇ ಮಡಿಕೇರಿಗೆ ಬಂದವನನ್ನು ಮಡಿಕೇರಿಯ ಮಂಗಳಾದೇವಿ ನಗರದ ಮನೆಯೊಂದರಲ್ಲಿ ಕೂಡಿ ಹಾಕಿ ಹಣಕ್ಕಾಗಿ ಬೇಡಿಕೆ ಇರಿಸಿದ್ದ ಮೂವರು, ರಾತ್ರಿಯೆಲ್ಲಾ ಮಹದೇವ್ ಮೇಲೆ ಹಲ್ಲೆ ನಡೆಸಿದ್ದಾರೆ. ಹಣ ನೀಡುವಂತೆ ಮಹದೇವ್ಗೆ ಹೇಳಿದ್ದಾರೆ. ಮೂವರಿಂದ ಮಹದೇವ್ ತಪ್ಪಿಸಿಕೊಂಡು ಮನೆಯಿಂದ ಹೊರಗೆ ಬಂದಿದ್ದಾನೆ. ಮಹದೇವ್ನನ್ನು ಬೆನ್ನಟ್ಟಿದ ಮೂವರು ಆಟೋದಲ್ಲಿ ಅಪಹರಣ ಮಾಡಲು ಮುಂದಾಗಿದ್ದಾರೆ. ಅಪಹರಣಕ್ಕೆ ಯತ್ನಿಸಿದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಅಲ್ಲಿಂದಲೂ ಮೂವರಿಂದ ತಪ್ಪಿಸಿಕೊಂಡ ಮಹದೇವ್, ಮಡಿಕೇರಿ ನಗರ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಮಹದೇವ್ ಹೇಳಿದ ಸ್ಥಳಕ್ಕೆ ಪೊಲೀಸರು ಭೇಟಿ ನೀಡುವಷ್ಟರಲ್ಲಿ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.
ಮಹದೇವ್ ಹಲ್ಲೆಗೆ ಬಳಸಲಾಗದ ಮಾರಕಾಸ್ತ್ರಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇದೊಂದು ಹನಿಟ್ರ್ಯಾಪ್ ಎಂಬ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ದೂರಿನ ವರದಿ:ದಿನಾಂಕ 13-12-2025 ರಂದು ಪಿರ್ಯಾದಿ ಮಹದೇವ್ ಠಾಣೆಗೆ ಹಾಜರಾಗಿ ನೀಡಿದ ಪುಕಾರಿನ ಸಾರಾಂಶವೇನೆಂದರೆ, ರಚನಾ ಎಂಬುವರೊಂದಿಗೆ ಪೇಸ್ ಬುಕ್ ನರೆ ಪರಿಚಯವಾಗಿದ್ದು ನಂತರ ಹಣದ ಅವಶ್ಯಕತೆ ಇದೆ ಎಂದು ಹೇಳಿ ಎರಡು ಬಾರಿ 5,000 ರೂಗಳನ್ನು ಪೋನ್ ಮಾಡಿಸಿಕೊಂಡಿದ್ದು, ಪಿರ್ಯಾದಿಯವರು ಹಣವನ್ನು ವಾಪಸ್ಸು ಕೇಳಿದಾಗ ರಚನಾಳು “ನಿನಗೆ ಬೇಕಾದ ಸುಖವನು ಕೊಡುತ್ತೇನೆ ಮೈಸೂರು ಅಥವಾ ಕುಶಾಲನಗರಕ್ಕೆ ಬಾ ರೂಮು ಮಾಡಿಕೊಂಡು ಸೇರೋಣ ಎಂದು ಹೇಳಿದ್ದು, ಆರೋಪಿ ರಚನಾಳು ದಿನಾಂಕ 12-12-2025 ರಂದು ಮಡಿಕೇರಿಗೆ ಪಿರ್ಯಾದಿಯನ್ನು ಬರಮಾಡಿಕೊಂಡು ರಾತ್ರಿ ಅಂದಾಜು 10-30 ರ ವೇಳೆಗೆ ಮಡಿಕೇರಿಯ ನಕ್ಷತ್ರ ಸೂಪರ್ ಮಾರ್ಕೇಟ್ ಬಳಿಗೆ ಕರಸಿಕೊಂಡು ಆಲೆಂದ ಜೊತೆಯಲಿ ಮನೆಗೆ ಕರದುಕೊಂಡು ಹೋಗಿದ್ದು ಮನೆಯಲಿ ಇಬ್ಬರೇ ಇರುವಾಗ ರಾತ್ರಿ 11-45 ಗಂಟೆಗೆ ರಚನಾಳ ತಾಯಿ ಮಾಲತಿ ಮತ್ತು ದಿನೇಶ್ ಎಂಬವರು ಮನೆಗೆ ಬಂದು, ದಿನೇಶನು ಹಣದ ಬಗ್ಗೆ ಇವನನ್ನು ನಾನು ವಿಚಾರಿಸಿಕೊಳ್ಳುತ್ತೇನೆ ನೀವು ಹೋಗಿ ಎಂದು ರಚನಾ ಮತ್ತು ಅವರ ತಾಯಿಯನ್ನು ಮನೆಯಿಂದ ಕಳುಹಿಸಿ, ನಂತರ ದಿನೇಶನು ಪೋನ್ ಮಾಡಿ ಸುಜೀತ್ ಮತ್ತು ದರ್ಶನ್ ಎಂಬುವರನ್ನು ಮನೆಗೆ ಕರೆಸಿಕೊಂಡು ನಂತರ ಮೂರು ಜನರು ಸೇರಿಕೊಂಡು ಪಿರ್ಯಾದಿಯವರಿಗೆ ಕೈಗಳಿಂದ, ದೊಣೆ,ಯಿಂದ ಮತ್ತು ಕತ್ತಿಯ ಹಿಡಿಯಿಂದ ಮುಖಕ್ಕೆ ಬಾಯಿಗೆ, ಎಡ ಎದೆಯ ಭಾಗಕ್ಕೆ ಹಾಗೂ ಎಡ ಕಾಲಿನ ಮಂಡಿಗೆ ಹೊಡೆದು ನೋವು ಪಡಿಸಿ ಕೂಡಿ ಹಾಕಿ ಬಟ್ಟೆಯನ್ನು ಬಲವಂತವಾಗಿ ಬಿಚ್ಚಿ ಬೆತ್ರಲೆಯನ್ನಾಗಿಸಿ ಆರೋಪಿಗಳು ಅವರ ಮೊಬೈಲ್ ಗಳಿಂದ ಬೆತ್ತಲೆ ವಿಡಿಯೋವನ್ನು ಮಾಡಿ ಬೆದರಿಸಿ 50 ಲಕ್ಷ ಹಣ ಕೊಡು ಇಲ್ಲದಿದ್ದರೆ ನಿನ್ನ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಹೇಳಿ ಬೆದರಿಕೆ ಹಾಕಿ ಮನೆಯಲಿ.. ಬೆಳಿಗಿ ನವರೆಗೆ ಬಲವಂತವಾಗಿ ಕೂಡಿಹಾಕಿದ್ದು, ಮಹದೇವ್ ಬಾತ್ ರೂಮಿಗೆ ಹೋಗುವುದಾಗಿ ಹೇಳಿ ಧರಿಸಿದ್ದ ಒಳಚೆಡ್ಡಿಯೊಂದಿಗೆ ಮನೆಯಿಂದ ತಪ್ಪಿಸಿಕೊಂಡು ಬಂದಿರುವುದಾಗಿ, ಆರೋಪಿಗಳಾದ ರಚನಾ ಆಕೆಯ ತಾಯಿ ಮಾಲತಿ ದಿನೇಶ, ಸುಜೀತ್ ಮತ್ತು ದರ್ಶನ್ ರವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳಬೇಕಾಗಿ ದೂರು ನೀಡಿದ್ದಾನೆ.
ಹಾನಿಟ್ಯ್ರಾಪ್ ಗೆ ಸಂಬಂಧಿಸಿದಂತೆ ರಚನ ಎಂಬ ಮಹಿಳೆ ಮಡಿಕೇರಿ ನಗರದ ಆಶೋಕಪುರದ ನಿವಾಸಿಯಾಗಿದ್ದಾಳೆ.ಈಕೆ ಹಲವಾರು ವರ್ಷಗಳ ಹಿಂದೆ ಪೊಲೀಸ್ ಪೆದೆಯೊಂದಿಗೆ ಮದುವೆ ಅಗಿದ್ದಾಳೆ.ಅದರೆ ಈಕೆ ಸಾಕಷ್ಟು ಕುಡಿತದ ಚಟಕ್ಕೆ ಒಳಗಾಗಿದ್ದಾಳು ಎನ್ನಲಾಗಿದು.ಅಕೆಯ ನಡುವಳಿಕೆ ಕಂಡು ಪೊಲೀಸ್ ಪೇದೆಯೇ ವಿವಾಹ ವಿಚ್ಚೇದನ ನೀಡಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಈ ಸಂಬಂಧ ರಚನಾ, ಆಕೆಯ ತಾಯಿ ಮಾಲತಿ ಸೇರಿದಂತೆ ಹಲ್ಲೆ ನಡೆಸಿದ ದಿನೇಶ್, ಸುಜಿತ್, ದರ್ಶನ್, ಹಾಗೂ ಆಟೋ ಡ್ರೈವರ್ ಮೇಲೆ ಪ್ರಕರಣ ದಾಖಲಾಗಿದೆ.
Back to top button
error: Content is protected !!