ಕುಶಾಲನಗರ,ಡಿ೨೭: ಕಲ್ಲಡ್ಕಪ್ರಭಾಕರ್ ಅವರು ಮುಸ್ಲಿಂ ಮಹಿಳೆಯವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಕುಶಾಲನಗರ ತಾಲ್ಲೂಕು ಮುಸ್ಲಿಂ ಒಕ್ಕೂಟದ ವತಿಯಿಂದ ಕುಶಾಲನಗರದ ಕಾರ್ಯಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕುಶಾಲನಗರದ ಕಾರ್ಯಪ್ಪ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಪೊಲೀಸರು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿ ಕಲ್ಲಡ್ಕ ಪ್ರಭಾಕರ್ ಅವರನ್ನು ಬಂಧಿಸುವಂತೆ ಆಗ್ರಹಿಸಿದರು. ನಂತರ ಕಲ್ಲಡ್ಕ ಪ್ರಭಾಕರ್ ಅವರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಮಾತನಾಡಿದ ಕುಶಾಲನಗರ ತಾಲ್ಲೂಕು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಅಬ್ದುಲ್ ಕಲೀಂ, ಇಂದು ಭಾರತದಲ್ಲಿ ಹಿಂದೂ ಮುಸಲ್ಮಾನರು ಪರಸ್ಪರ ಶಾಂತಿ, ಕಲ್ಲಡ್ಕ ಪ್ರಭಾಕರ್ ಎಂಬವರು ಮುಸಲ್ಮಾನ ಹೆಣ್ಣು ಮಕ್ಕಳನ್ನು ಅವಹೇಳಿಸಿರುವುದು ಖಂಡನೀಯ. ಆತನ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದ ಅವರು, ಅಲ್ಪ ಸಂಖ್ಯಾತರ ಮತವನ್ನು ಪಡೆದು ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ನೈತಿಕತೆಯಿದ್ದರೇ, ಕಾಂಗ್ರೆಸ್ ಜಾತ್ಯಾತೀತ ಪಕ್ಷವೇ ಆಗಿದ್ದರೇ ಕಲ್ಲಡ್ಕ ಪ್ರಭಾಕರ್ ಅವರಂತಹ ಸಮಾಜಕ್ಕೆ ಮಾತಕವಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದರು.
ಕುಶಾಲನಗರ ಎಸ್.ಡಿ.ಪಿ.ಐ ಅಧ್ಯಕ್ಷ ಜ಼ಕರಿಯಾ ಮಾತನಾಡಿ, ಇಂದು ಭಾರತದಲ್ಲಿ ಹಿಂದೂ ಮುಸಲ್ಮಾನರು ಪರಸ್ಪರ ಶಾಂತಿ, ಸೌಹಾರ್ಧತೆಯಿಂದ ಬಾಳುತ್ತಿದ್ದೇವೆ. ಆದರೆ ಕಲ್ಲಡ್ಕ ಪ್ರಬಾಕರ್ ಎಂಬ ವ್ಯಕ್ತಿ ಮುಸ್ಲಿಂ ಮಹಿಳೆಯರ ಬಗ್ಗೆ ತುಚ್ಚವಾಗಿ ಮಾತಾಡಿದ್ದಾರೆ. ಇಂತಹ ಸಮಾಜಘಾತುಕ ಶಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ ಎಂದರು.
ಈ ಸಂದರ್ಭ ಪ್ರತಿಭಟನೆಯಲ್ಲಿ ತಾಲ್ಲೂಕು ಮುಸ್ಲಿಂ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜಮೀರ್, ಉಪಾಧ್ಯಕ್ಷ ಪಾಷಾ, ಅನ್ವರ್, ಅಕ್ಬರ್, ಖಲೀರ್, ಶರೀಫ್, ಸಲೀಂ, ಮೊಯ್ದೀನ್, ಸಮಿ, ಅಶ್ರಫ್, ಜ಼ರೀನಾ, ಹಮೀದ್, ಸಾಹುಲ್ ಹಾಗೂ ಇನ್ನಿತರರು ಇದ್ದರು.
Back to top button
error: Content is protected !!