ಶಿಕ್ಷಣ

ಕೊಡಗರಹಳ್ಳಿ ಪ್ರೌಢಶಾಲೆಯ ವಿದ್ಯಾರ್ಥಿನಿ ಶ್ರೀಶಾ ಳಿಗೆ ಜಿಲ್ಲಾಮಟ್ಟದ ಬಾಲ ವಿಜ್ಞಾನಿ ಪ್ರಶಸ್ತಿ

ಕೊಡಗಿನಿಂದ‌ 8 ಕಿರಿಯ ವಿಜ್ಞಾನಿಗಳು ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಸಮಾವೇಶಕ್ಕೆ ಆಯ್ಕೆ

ಕುಶಾಲನಗರ ಡಿ.24: ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ ( ಎನ್.ಸಿ.ಎಸ್.ಟಿ.ಸಿ.), ಮಡಿಕೇರಿ ನಗರದ ಕೊಡಗು ವಿದ್ಯಾಲಯದಲ್ಲಿ
ಜಿಲ್ಲಾ ಪಂಚಾಯ್ತಿ, ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಸಂಸ್ಥೆಯ ಸಹಯೋಗದಲ್ಲಿ
“ಯೋಗಕ್ಷೇಮಕ್ಕಾಗಿ ಜೀವಿ ಪರಿಸರ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳೋಣ” ಎಂಬ ಕೇಂದ್ರ ವಿಷಯದಡಿ ಮಡಿಕೇರಿ ನಗರದ ಕೊಡಗು ವಿದ್ಯಾಲಯ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ( ಡಿ.22 ರಂದು ಏರ್ಪಡಿಸಲಾಗಿದ್ದ
ಕೊಡಗು ಜಿಲ್ಲಾಮಟ್ಟದ 31ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ: 2023 ದಲ್ಲಿ ‘ಕಲುಷಿತಗೊಳ್ಳುತ್ತಿರುವ ನದಿಯ ತೀರಗಳು” ಎಂಬ ವಿಷಯದ
ಕುರಿತು ಉತ್ತಮವಾಗಿ ವೈಜ್ಞಾನಿಕ ಯನ್ನು ಯೋಜನಾ ಪ್ರಬಂಧ ಮಂಡಿಸಿದ ಸುಂಟಿಕೊಪ್ಪ ಬಳಿಯ
ಕೊಡಗರಹಳ್ಳಿ ಸುಂಟಿಕೊಪ್ಪನಾಡು ಪ್ರೌಢಶಾಲೆಯ ವಿದ್ಯಾರ್ಥಿನಿ ಎ.ಎಸ್.ಶ್ರೀಶಾ ಳಿಗೆ ಬಾಲ ವಿಜ್ಞಾನಿ ಪ್ರಶಸ್ತಿ ಲಭಿಸಿದೆ.
ಜನವರಿ ಮೊದಲ ವಾರ ಕೊಪ್ಪಳ ಜಿಲ್ಲೆಯಲ್ಲಿ ನಡೆಯಲಿರುವ ರಾಜ್ಯಮಟ್ಟದ ವಿಜ್ಞಾನ ಸಮಾವೇಶಕ್ಕೆ ಕೊಡಗು ಜಿಲ್ಲಾಮಟ್ಟದಿಂದ
ಆಯ್ಕೆಗೊಂಡ ಎಂಟು ಮಂದಿ ಕಿರಿಯ ವಿಜ್ಞಾನಿಗಳ ವಿವರ ಈ ಕೆಳಗಿನಂತಿದೆ. ಯೋಜನೆ ಮಂಡಿಸಿದ
ತಂಡದ ನಾಯಕರು ರಾಜ್ಯಮಟ್ಟದ ವಿಜ್ಞಾನ ಸಮಾವೇಶದಲ್ಲಿ ವೈಜ್ಞಾನಿಕ ಪ್ರಬಂಧ ಮಂಡಿಸಲು ಅರ್ಹತೆ ಪಡೆದಿದ್ದಾರೆ.
ಮುಂದೆ ಆವರಣದಲ್ಲಿ ವಿದ್ಯಾರ್ಥಿಗಳು ತಾವು ಮಂಡಿಸಿದ ವೈಜ್ಞಾನಿಕ ಯೋಜನಾ ಪ್ರಬಂಧ ವಿಷಯ, ತಂಡದ ನಾಯಕ ಮತ್ತು ಉಪ ನಾಯಕ ಹಾಗೂ ಮಾರ್ಗದರ್ಶಿ ಶಿಕ್ಷಕರ
ವಿವರಗಳನ್ನು ಆವರಣದಲ್ಲಿ
ಕೊಡಲಾಗಿದೆ.
*ನಗರ ಕಿರಿಯ ವಿಭಾಗ*:: ಮಡಿಕೇರಿ ನಗರದ ಕೊಡಗು ವಿದ್ಯಾಲಯದ ಶ್ರೀಯ ಕಿರಣ್ ಮತ್ತು ಶ್ಲೋಕ್ ಅಯ್ಯಪ್ಪ (ಜೇನು ಕೃಷಿಯ ಮಹತ್ವ : ಮಾರ್ಗದರ್ಶಿ ಶಿಕ್ಷಕಿ ಎಂ.ಎಸ್.ಶೃತಿ ), ಇದೇ ಶಾಲೆಯ ಎಂ.ಪಿ.ಯಾಶಿಕ ಶೆಟ್ಟಿ ಮತ್ತು ಯಶ್ ಕಾರಿಯಪ್ಪ ( ಪರಿಸರ ವ್ಯವಸ್ಥೆಯಲ್ಲಿ ಏಡಿಗಳ ಕ್ಷೀಣಿಸುವಿಕೆ : ಮಾರ್ಗದರ್ಶಿ ಶಿಕ್ಷಕಿ : ಟಿ.ಜಯಶ್ರೀ)
*ಗ್ರಾಮಾಂತರ ಕಿರಿಯ ವಿಭಾಗ*::
ಕೊಡಗರಹಳ್ಳಿ ಸುಂಟಿಕೊಪ್ಪನಾಡು ಪ್ರೌಢಶಾಲೆಯ ಎ.ಎಸ್.ಶ್ರೀಶಾ ಮತ್ತು ಟಿ.ಎಸ್.ಶೃಜನ್ಯ ( ಕಲುಷಿತಗೊಳ್ಳುತ್ತಿರುವ ನದಿ ತೀರಗಳು : ಮಾರ್ಗದರ್ಶಿ ಶಿಕ್ಷಕಿ : ಎಂ.ಟಿ.ಶೋಭಾದಾಸ್)
ಪೊನ್ನಂಪೇಟೆ ಬಳಿಯ ಕಿರಗೂರು ಸರ್ಕಾರಿ ಪ್ರೌಢಶಾಲೆಯ ಎಚ್.ಬಿ.ಶ್ರೇಯಸ್ ಮತ್ತು ವೈ.ಆರ್.ಕೃತಿಕ್ ( ಮಾರಕವಾದ ಪ್ಲಾಸ್ಟಿಕ್ – ಪುನರ್ ಬಳಕೆ ಹಾದಿಯಲ್ಲಿ , ಮಾರ್ಗದರ್ಶಿ ಶಿಕ್ಷಕಿ : ಎಂ.ಎ.ಶ್ರೀಜ)
**ಗ್ರಾಮಾಂತರ ಹಿರಿಯ ವಿಭಾಗ*:: ಸುಂಟಿಕೊಪ್ಪ ಬಳಿಯ ಏಳನೇ ಹೊಸಕೋಟೆ ಸರ್ಕಾರಿ ಪ್ರೌಢಶಾಲೆಯ ಬಿ.ಆರ್.ಚೇತನ್ ಮತ್ತು ಎ.ಅಫ್ರಿನಾ ( ವನ್ಯಜೀವಿಗಳು ಮತ್ತು ಮಾನವ ಸಂಘರ್ಷ : ಕಾಡಾನೆಗಳ ಸುಳಿಯಲ್ಲಿ ರೈತಾಪಿ ಜನ: ಮಾರ್ಗದರ್ಶಿ ಶಿಕ್ಷಕಿ : ಟಿ.ವಿ.ಶೈಲಾ)
ತೊರೆನೂರು ಸರ್ಕಾರಿ ಪ್ರೌಢಶಾಲೆಯ ಟಿ.ಎ.ಪುಷ್ಪ ಮತ್ತು ಎ.ಆರ್.ಪೂರ್ವಿಕ ( ಸೊಳ್ಳೆಗಳ ಚೆಲ್ಲಾಟ – ಜನರಿಗೆ ಪ್ರಾಣ ಸಂಕಟ ,
ಮಾರ್ಗದರ್ಶಿ ಶಿಕ್ಷಕಿ : ಬಿ.ಪಿ.ಸವಿತ)
ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಬೋರಮ್ಮ ಮತ್ತು ಕೆ.ವಿ.ಇಶ್ರತ್ ( ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಿ
ಆರೋಗ್ಯ ಕಾಪಾಡಿ :ಮಾರ್ಗದರ್ಶಿ ಶಿಕ್ಷಕಿ : ಬಿ.ಡಿ.ರಮ್ಯ)
*ನಗರ ಹಿರಿಯ ವಿಭಾಗ*::
ಮಡಿಕೇರಿ ನಗರದ ಕೊಡಗು ವಿದ್ಯಾಲಯದ ಪಿ.ವಿ.ಲಕ್ಷ್ಯ ಮತ್ತು ಎಂ.ಭವಿಷ್ಯ ( ವನ್ಯಜೀವಿಗಳು ಮತ್ತು ಮಾನವನ ನಡುವಿನ ಸಂಘರ್ಷ – ಬದುಕಿ ಮತ್ತು ನಮ್ಮನ್ನು ಬದುಕಲು ಬಿಡಿ – ಆನೆಗಳ ಜತೆ ಸಹಬಾಳ್ವೆ ಜೀವನಕ್ಕೆ ಕರೆ :
,ಮಾರ್ಗದರ್ಶಿ ಶಿಕ್ಷಕಿ : ಪಿ.ಎಸ್.ಪೊನ್ನಮ್ಮ)

*ಪ್ರಶಸ್ತಿ ಪ್ರದಾನ*:
ಜಿಲ್ಲಾಮಟ್ಡದ ಬಾಲ ವಿಜ್ಞಾನಿ ಪ್ರಶಸ್ತಿ ಪುರಸ್ಕೃತ ಕೊಡಗರಹಳ್ಳಿ ಸುಂಟಿಕೊಪ್ಪನಾಡು ಪ್ರೌಢಶಾಲೆಯ ವಿದ್ಯಾರ್ಥಿನಿ ಶ್ರೀಜ ಳಿಗೆ ಕುಶಾಲನಗರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ‌ ಪ್ರಾಂಶುಪಾಲ ಡಾ ಎನ್.ಎಸ್.ಸತೀಶ್ ,
ಬಾಲ ವಿಜ್ಞಾನಿ ಪ್ರಶಸ್ತಿ ಪ್ರದಾನ ಮಾಡಿದರು.
ವಿಜ್ಞಾನ ಸಮಾವೇಶದ ಸಂಘಟಕ ಟಿ.ಜಿ.ಪ್ರೇಮಕುಮಾರ್,
ಸಂಸ್ಥೆಯ ಪ್ರಾಂಶುಪಾಲರಾದ ಕೆ.ಎಸ್.ಸುಮಿತ್ರ,
ಆಡಳಿತಾಧಿಕಾರಿ ಪಿ.ರವಿ,
ಎ.ಎಲ್.ಜಿ.ಕ್ರೆಸೆಂಟ್ ಶಾಲೆಯ ಕರೆಸ್ಪಾಂಡೆಂಟ್ ಮುನಿರ್ ಅಹ್ಮದ್,
ರೋಟರಿ ವುಡ್ಸ್ ನ ಮಾಜಿ ಅಧ್ಯಕ್ಷ ಸಂಪತ್ ಕುಮಾರ್,
ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ‌ ಸಿವಿಲ್ ವಿಭಾಗದ ಮುಖ್ಯಸ್ಥರಾದ ಡಾ ನವೀನ್ ಗೌಡ,
ಸಮಾವೇಶದ ಜಿಲ್ಲಾ ಸಂಯೋಜಕ ಜಿ.ಶ್ರೀಹರ್ಷ, ವಿಜ್ಞಾನ ಪರಿಷತ್ತಿನ ಪದಾಧಿಕಾರಿ ಎಂ.ಎನ್.ವೆಂಕಟನಾಯಕ್, ಸದಸ್ಯರಾದ ಜಿ.ಶ್ರೀನಾಥ್, ಎಸ್.ಎಚ್.ಈಶ, ಟಿ.ವಿ.ಶೈಲಾ , ಗೈಡ್ಸ್ ಕ್ಯಾಪ್ಟನ್ ಸಿ.ಎಂ.ಸುಲೋಚನ
ಇತರರು ಇದ್ದರು.

 

Related Articles

Leave a Reply

Your email address will not be published. Required fields are marked *

Back to top button
error: Content is protected !!