ಕುಶಾಲನಗರ ಡಿ. 20: ಕೂಡುಮಂಗಳೂರು ಗ್ರಾಮ ಪಂಚಾಯತಿಯ 2023-24 ನೇ ಸಾಲಿನ ಗ್ರಾಮ ಸಭೆಯುಪಂಚಾಯತಿ ಅಧ್ಯಕ್ಷ ಡಿ. ಭಾಸ್ಕರ್ ನಾಯಕ್ ಅಧ್ಯಕ್ಷತೆಯಲ್ಲಿ ಮಾರುಕಟ್ಟೆ ಪ್ರಾಂಗಣದಲ್ಲಿ ಜರುಗಿತು.
ಗ್ರಾಮಸ್ಥರ ಕೊರತೆ ಕಂಡುಬಂದ ಕಾರಣ ಸಭೆ ತಡವಾಗಿ ಆರಂಭಗೊಂಡಿತು.
ಹಿಂದಿನ ಗ್ರಾಮ ಸಭೆಯ ನಡಾವಳಿ ವರದಿ ಸಂಬಂಧ ಸುದೀರ್ಘ ಚರ್ಚೆಗಳು ನಡೆದವು.
ಈಗಾಗಲೇ ಹಾಸನ ರಾಜ್ಯ ಹೆದ್ದಾರಿ ವಿಸ್ತರಣಗೊಳ್ಳುವ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಕಟ್ಟಡವನ್ನು ತೆರವುಗೊಳಿಸಲಾಗುವ ಹಿನ್ನೆಲೆಯಲ್ಲಿ ಬದಲಿ ಜಾಗವನ್ನು ಯಾವ ಪ್ರದೇಶದಲ್ಲಿ ಗುರುತಿಸಲಾಗಿದೆ ಎಂದು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಕೆ.ವಿ. ಸಣ್ಣಪ್ಪ ಪ್ರಶ್ನಿಸಿದರು. ಕೂಡಿಗೆ ಕೃಷಿ ಕೃಷಿ ಕ್ಷೇತ್ರದ ಮುಖ್ಯ ದ್ವಾರದ ಸಮೀಪದ ಜಾಗವನ್ನು ಗುರುತಿಸಲಾಗಿದ್ದು ಈಗಾಗಲೇ ಜಿಲ್ಲಾಡಳಿತ ಮುಖೇನ ಪತ್ರವ್ಯವಹಾರ ಮಾಡಲಾಗಿದೆ. ನಿಯಮಾನುಸಾರ ಖಾತೆ ವರ್ಗಾವಣೆ ಸಂಬಂಧಿಸಿದಂತೆ ರಾಜ್ಯ ಮಟ್ಟದಲ್ಲಿ ಶಾಸಕರ ಮತ್ತು ಉಸ್ತುವಾರಿ ಸಚಿವರ ಸಹಕಾರದೊಂದಿಗೆ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಅಧ್ಯಕ್ಷ ಭಾಸ್ಕರ್ ನಾಯಕ್ ಮಾಹಿತಿ ನೀಡಿದರು.
ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರ ನೇಮಕ, ಸೇರಿದಂತೆ ಅಲ್ಲಿನ ಸ್ಟಾಫ್ ನರ್ಸ್ ಗಳ ನೇಮಕ ಸಂಬಂಧ ಹಿಂದಿನ ಗ್ರಾಮ ಸಭೆಗಳಲ್ಲಿ ಚರ್ಚೆಗಳು ನಡೆದರೂ ಯಾವುದೇ ಕ್ರಮಗಳನ್ನು ಸಂಬಂಧಿಸಿದ ಅರೋಗ್ಯ ಇಲಾಖೆಯವರು ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮಸ್ಥರ ಪ್ರಮುಖ ಬೇಡಿಕೆಗೆ ಸಂಬಂಧಿಸಿದಂತೆ ಈಗಾಗಲೇ ರಾಜ್ಯ ಅರೋಗ್ಯ ಸಚಿವರು ಕೂಡಿಗೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮನವಿಯನ್ನು ಸಲ್ಲಿಸಲಾಗಿದೆ. ಮುಂದಿನ ಯೋಜನೆಯಲ್ಲಿ ಜಿಲ್ಲಾ ಮಟ್ಟದ ಅರೋಗ್ಯ ಇಲಾಖೆಯ ಅಧಿಕಾರಿಗಳು ಕ್ರಮ ವಹಿಸಿಬೇಕಾಗಿದೆ ಎಂದು ಸಭೆಗೆ ಅಧ್ಯಕ್ಷರು ಮಾಹಿತಿ ನೀಡಿದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಅಗಮಿಸಿದ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಗೆ ಸಂಬಂಧಿಸಿದ ಮಾಹಿತಿ ನೀಡಿದರು.
ಈ ಸಂದರ್ಭ ಹೈಟೆನ್ಷನ್ ಮಾರ್ಗಕ್ಕೆ ಹೊಂದಿಕೊಂಡಂತೆ ಟಿವಿ ಕೇಬಲ್ ಎಳೆಯಲಾಗಿದ್ದು, ಅಪಾಯಕಾರಿ ಪರಿಸ್ಥಿತಿ ನಿರ್ಮಾಣಗೊಂಡಿದೆ ಈ ಬಗ್ಗೆ ಚೆಸ್ಕಾಂ ಹಾಗೂ ಗ್ರಾಪಂ ಎಚ್ಚರವಹಿಸಬೇಕಿದೆ, ಅರಣ್ಯ ಇಲಾಖೆಯ ಜಾಗದಲ್ಲಿ ಅನಧಿಕೃತವಾಗಿ ಮನೆಗಳ ನಿರ್ಮಾಣವಾಗಿದೆ, ಹಾರಂಗಿ ಕುಶಾಲನಗರ ರಸ್ತೆಯ ನಿರ್ಮಾಣ ಸಂದರ್ಭದಲ್ಲಿ ಸಮರ್ಪಕವಾಗಿ ಚರಂಡಿ ವ್ಯವಸ್ಥೆ, ಕೆಲಸ ನಿರ್ವಹಣೆ ಮಾಡದಿರುವ ಬಗ್ಗೆ ಸರಕಾರಿ ಶಾಲೆಗಳ ಉನ್ನತೀಕರಣ, ರಸ್ತೆ ಸಂಪರ್ಕ, ಗೃಹಲಕ್ಷ್ಮಿ ಯೋಜನೆ ಮತ್ತಿತರ ವಿಚಾರಗಳಿಗೆ ಸಂಬಂಧಿಸಿದಂತೆ ಗ್ರಾಮಸ್ಥರು ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಸಭೆಯಲ್ಲಿ ನೋಡಲ್ ಅಧಿಕಾರಿಯಾಗಿ ಸೋಮವಾರಪೇಟೆ ತಾಲ್ಲೂಕಿನ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಕಾಳನಾಯಕ ಕಾರ್ಯನಿರ್ವಹಿಸಿದರು. ವೇದಿಕೆಯಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಶಶಿಕಲಾ ಸೇರಿದಂತೆ ಸರ್ವ ಸದಸ್ಯರು ಮತ್ತು ಅಭಿವೃದ್ಧಿ ಅಧಿಕಾರಿ ಸಂತೋಷ್ ಹಾಜರಿದ್ದರು.
Back to top button
error: Content is protected !!