ಗೋಣಿಕೊಪ್ಪ ದೇವರಪುರ ಬಳಿ ದರೋಡೆ: ಆರೋಪಿಗಳ ಬಂಧನ
ಕುಶಾಲನಗರ, ಡಿ 19: ಕೇರಳ ರಾಜ್ಯ ಮಲಪ್ಪುರಂ ಜಿಲ್ಲೆ ನಿವಾಸಿ ಶಮಾದ್ ರವರು ಕೇರಳ ರಾಜ್ಯದಿಂದ ಹೆಚ್‌ಆರ್-26 ಸಿಎಲ್-5200 ರ ಕಾರಿನಲ್ಲಿ ತೆರಳಿ ಮೈಸೂರು ನಗರದ ಅಶೋಕಪುರ ರಸ್ತೆಯಲ್ಲಿರುವ ಶ್ರೀ ಯೋಗೇಶ್ ಎಂಬುವವರ ಜ್ಯುವೆಲರ್ಸ್ ಅಂಗಡಿಯಲ್ಲಿ 750 ಗ್ರಾಂ ಚಿನ್ನವನ್ನು ಮಾರಾಟ ಮಾಡಿ ರೂ. 50,00,000/- ಗಳ ಹಣವನ್ನು ಪಡೆದುಕೊಂಡು ಕೇರಳ ರಾಜ್ಯಕ್ಕೆ ತೆರಳುವಾಗ ದಿನಾಂಕ: 09-12-2023 ರ ಬೆಳಗ್ಗಿನ ಸಮಯ ಸುಮಾರು 02.00 ಗಂಟೆಗೆ ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ದೇವರಪುರ ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ಒಂದು ಪಿಕ್ ಅಪ್ ವಾಹನನ್ನು ರಸ್ತೆಗೆ ಅಡ್ಡವಾಗಿ ನಿಲ್ಲಿಸಿ 10-15 ಜನರು ಕಾರನ್ನು ಸುತ್ತುವರೆದು ಕಾರಿನಲ್ಲಿದ್ದ ಶಮ್ಯಾದ್ ಹಾಗೂ ಅಪ್ಪುರವರಿಗೆ ಹಲ್ಲೆ ನಡೆಸಿ ಬಲವಂತವಾಗಿ ಕಾರನ್ನು ಮತ್ತು ಕಾರಿನಲ್ಲಿದ್ದ 50.00.000/- ರೂ ನಗದು ಹಣವನ್ನು ದರೋಡೆ ಮಾಡಿರುವ ಕುರಿತು ದೂರು ಸ್ವೀಕರಿಸಿದ್ದು, ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.
ಶ್ರೀ ಕೆ.ರಾಮರಾಜನ್, ಐಪಿಎಸ್, ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ, ಶ್ರೀ ಕೆ.ಎಸ್.ಸುಂದರ್ ರಾಜ್, ಅಪರ ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ರವರ ಮಾರ್ಗದರ್ಶನದಲ್ಲಿ ಶ್ರೀ ಆರ್. ಮೋಹನ್ ಕುಮಾರ್, ಡಿಎಸ್‌ಪಿ, ವಿರಾಜಪೇಟೆ ರವರ ಉಸ್ತುವಾರಿಯಲ್ಲಿ ಈ ಕೆಳಕಂಡ ಅಧಿಕಾರಿ/ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಿ ತನಿಖೆ ಕೈಗೊಂಡು ದರೋಡೆ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ.
1. ಶ್ರೀ ಗೋವಿಂದರಾಜು, ಸಿಪಿಐ, ಗೋಣಿಕೊಪ್ಪ ವೃತ್ತ. 2. ಶ್ರೀ ಶಿವರುದ್ರ.ಬಿ.ಎಸ್, ಸಿಪಿಐ, ವಿರಾಜಪೇಟೆ ವೃತ್ತ.
3. ಶ್ರೀ ಮಂಜಪ್ಪ.ಸಿ.ಎ, ಸಿಪಿಐ, ಕುಟ್ಟ ವೃತ್ತ.
4. ಶ್ರೀಮತಿ ರೂಪದೇವಿ ಬಿರಾದರ್, ಪಿಎಸ್‌ಐ, ಗೋಣಿಕೊಪ್ಪ ಪೊ.ಠಾ.
5. ಶ್ರೀ ನವೀನ್.ಜಿ, ಪಿಎಸ್‌ಐ, ಪೊನ್ನಂಪೇಟೆ ಪೊ.ಠಾ.
6. ಶ್ರೀ ಹೆಚ್.ಎಸ್ ಸುಬ್ರಮಣ್ಯ, ಪಿಎಸ್‌ಐ, ಪೊನ್ನಂಪೇಟೆ ಪೊ.ಠಾ.
7. ಶ್ರೀ ರವೀಂದ್ರ, ಪಿಎಸ್‌ಐ, ವಿರಾಜಪೇಟೆ ನಗರ ಪ್ರೊ.ಠಾ.
8. ಶ್ರೀ ಸಿ.ಸಿ.ಮಂಜುನಾಥ್, ಪಿಎಸ್‌ಐ, ವಿರಾಜಪೇಟೆ ಗ್ರಾಮಾಂತರ ಪೊ.ಠಾ.
9. ಗೋಣಿಕೊಪ್ಪ ಪೊ.ಠಾ, ವಿರಾಜಪೇಟೆ ನಗರ & ಗ್ರಾಮಾಂತರ ಪೊ.ಠಾ, ಪೊನ್ನಂಪೇಟೆ ಪೂ.ಠಾ ಮತ್ತು ಕುಟ್ಟ ಪೊಲೀಸ್ ಠಾಣೆ ಸಿಬ್ಬಂದಿಗಳು ಹಾಗೂ ಡಿಸಿಆರ್‌ಬಿ & ತಾಂತ್ರಿಕ ಸಿಬ್ಬಂದಿಗಳು.
ಈ ಪ್ರಕರಣದ ಆರೋಪಿಗಳ ಪತ್ತೆಗಾಗಿ ವಿಶೇಷ ತನಿಖಾ ತಂಡವು ಅಪರಾಧ ಕೃತ್ಯ ನಡೆದ ಹಿಂದಿನ ದಿನಗಳ ಸ್ಥಳೀಯ ಹಾಗೂ ಸುತ್ತ-ಮುತ್ತಲಿನ ಜಿಲ್ಲೆಯಲ್ಲಿನ ಸುಮಾರು 300 ಕ್ಕಿಂತ ಹೆಚ್ಚಿನ ಸಿಸಿಟಿವಿ ಕ್ಯಾಮೆರಾ ದೃಶ್ಯವಾಳಿಯನ್ನು ಪರಿಶೀಲಿಸಲಾಗಿರುತ್ತದೆ ಹಾಗೂ ತಾಂತ್ರಿಕ ಸಿಬ್ಬಂದಿಗಳಿಂದ ಮೊಬೈಲ್ ಕರೆಗಳ ಪರಿಶೀಲನೆಯಿಂದ ಕೃತ್ಯಕ್ಕೆ ಸಂಬಂಧಿಸಿದಂತೆ ಸ್ಥಳೀಯ ಅನುಮಾನಸ್ಪದ ವ್ಯಕ್ತಿಗಳ ಮಾಹಿತಿ ಲಭ್ಯವಾಗಿರುತ್ತದೆ.
1. ಆರ್ಜಿ ಗ್ರಾಮದ ನಿವಾಸಿಯಾದ ನಾಗೇಶ್.ಬಿ.ಜಿ, 42 ವರ್ಷ ಎಂಬಾತನು ಕೇರಳ ಮೂಲದ 10 ಜನರಿಗೆ ವಿರಾಜಪೇಟೆ ನಗರ ಶ್ರೀ ಕೃಷ್ಣ ಲಾಡ್ಜ್‌ನಲ್ಲಿ ವಾಸ್ತವ್ಯಕ್ಕಾಗಿ ಕೊಠಡಿಯನ್ನು ಬುಕ್ ಮಾಡಿ ಸಹಕರಿಸಿ ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುತ್ತಾನೆ.
2. ಬಿಟ್ಟಂಗಾಲ ಗ್ರಾಮ ಪೆಗ್ಗರೆಕಾಡು ಪೈಸಾರಿ ನಿವಾಸಿಯಾದ ಪ್ರಶಾಂತ್, 40 ವರ್ಷ ಎಂಬಾತನು ರಸ್ತೆಗೆ ಅಡ್ಡ ಹಾಕಲು ಮಹೀಂದ್ರ ಪಿಕ್‌ಅಪ್ ವಾಹನವನ್ನು ಒದಗಿಸಿ ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುತ್ತಾನೆ.
3. ಬಿಟ್ಟಂಗಾಲ ಗ್ರಾಮ ಪೆಗ್ಗರೆಕಾಡು ಪೈಸಾರಿ ನಿವಾಸಿಯಾದ ರಮೇಶ್.ಎ.ಕೆ @ ಗಾಂಜಾ ರಮೇಶ್, 39 ವರ್ಷ ಎಂಬಾತನು ಮಗ್ಗುಲ ಗ್ರಾಮದಲ್ಲಿ ಮೀನು ಮಾರಾಟ ಅಂಗಡಿಯನ್ನು ಹೊಂದಿದ್ದು, ಅಪರಾಧ ಕೃತ್ಯಕ್ಕಾಗಿ ಮಾರುತಿ ಸ್ವಿಫ್ಟ್ ಡಿಜೈರ್ ಕಾರನ್ನು ಒದಗಿಸಿ ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುತ್ತಾನೆ.
4. ವಿರಾಜಪೇಟೆಯ ಅರಸುನಗರದ ನಿವಾಸಿಯಾದ ರಮೇಶ್.ಪಿಸಿ, 46 ವರ್ಷ ಮಗ್ಗುಲ ಗ್ರಾಮದಲ್ಲಿ ಮೀನು ಮಾರಾಟ ಅಂಗಡಿಯಲ್ಲಿ ಕ್ಲಿನಿಂಗ್ ಕೆಲಸ ನಿರ್ವಹಿಸುತ್ತಿದ್ದು, ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುತ್ತಾನೆ.
5. ಕೇರಳ ರಾಜ್ಯ ಮೂಲದ ತೊನ್ನಪರಂಬಿಲ್ ಜಂಶಬ್, 29 ವರ್ಷ ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುತ್ತಾನೆ.
6. ಕೇರಳ ರಾಜ್ಯ ಮೂಲದ ಕೊನ್ನಪರಂಬಿಲ್ ಅರುಣ, 29 ವರ್ಷ ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುತ್ತಾನೆ.
ಈ ಮೇಲ್ಕಂಡ ಆರೋಪಿಗಳನ್ನು ವಿಶೇಷ ತನಿಖಾ ತಂಡವು ದಿನಾಂಕ: 18-12-2023 ರಂದು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ ಹಾಗೂ ಅಪರಾಧ ಕೃತ್ಯಕ್ಕೆ ಬಳಸಿದ 02 ವಾಹನಗಳು (ಮಹೀಂದ್ರ ಪಿಕ್ ಅಪ್ & ಮಾರುತಿ ಸ್ವಿಫ್ಟ್ ಡಿಜೈರ್), 05 ಮೋಬೈಲ್‌ಗಳು ಮತ್ತು ರೂ. 3 ಲಕ್ಷಗಳ ನಗದನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ.
ಸದರಿ ಪ್ರಕರಣದ ದೂರುದಾರರು ನೀಡಿರುವ ದೂರಿನಲ್ಲಿ 750ಗ್ರಾಂ ಚಿನ್ನ ಮಾರಾಟ ಮಾಡಿ ರೂ. 50 ಲಕ್ಷ ಹಣ ಪಡೆದಿರುವುದಾಗಿ ತಿಳಿಸಿದ್ದು, 993 ಗ್ರಾಂ ಚಿನ್ನವನ್ನು ಮಾರಾಟ ಮಾಡಿ ರೂ. 61,70,000/- ಗಳನ್ನು ಪಡೆದಿರುವುದಾಗಿ ತನಿಖೆಯಲ್ಲಿ ಕಂಡುಬಂದಿರುತ್ತದೆ ಹಾಗೂ ಮಾರಾಟ ಮಾಡಿರುವ ಚಿನ್ನವನ್ನು ವಶಕ್ಕೆ ಪಡೆಯಲಾಗಿರುತ್ತದೆ.
ಈ ಪ್ರಕರಣದಲ್ಲಿ ದೂರುದಾರರು ಚಿನ್ನ ಮಾರಾಟ ಮಾಡಿ ಪಡೆದಿರುವ ಹಣಕ್ಕೆ ಯಾವುದೇ ಬಿಲ್
ಪಡೆಯದೇ ನಗದು ರೂ. 61,70,000/- ಗಳ ವ್ಯವಹಾರಿಸಿರುವ ಕುರಿತು ವಾಣಿಜ್ಯ ತೆರಿಗೆ ಇಲಾಖೆ
ಹಾಗೂ ಆದಾಯ ತೆರಿಗೆ ಇಲಾಖೆಗಳಿಗೆ ವರದಿಯನ್ನು ಸಲ್ಲಿಸಲಾಗುವುದು ಮತ್ತು ಬಿಲ್ ಪಡೆಯದಿರುವ
ಕುರಿತು ಜಿಎಸ್‌ಟಿ ಇಲಾಖೆಗೆ ವರದಿಯನ್ನು ಸಲ್ಲಿಸಲಾಗುವುದು.
ಸದರಿ ಪ್ರಕರಣದಲ್ಲಿನ ಬಾಕಿ ಉಳಿದ ಆರೋಪಿಗಳಿಗಾಗಿ ವಿಶೇಷ ತನಿಖಾ ತಂಡದಿಂದ ಪತ್ತೆ ಕಾರ್ಯ ಪ್ರಗತಿಯಲ್ಲಿ ಇರುತ್ತದೆ.
ಸದರಿ ಪ್ರಕರಣದ ಆರೋಪಿಯನ್ನು ಬಂದಿಸುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿರವರುಗಳನ್ನು ಶ್ರೀ ಕೆ. ರಾಮರಾಜನ್, ಐಪಿಎಸ್, ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ, ಮಡಿಕೇರಿ ರವರು ಶ್ಲಾಘಿಸಿರುತ್ತಾರೆ.