ಕುಶಾಲನಗರ ನ 30: ಕರ್ನಾಟಕ ಟ್ಯಾಕ್ಸಿ ಡ್ರೈವರ್ಸ್ ಆರ್ಗನೈಸೇಶನ್ ಕೊಡಗು ಜಿಲ್ಲಾ ಘಟಕದ ಆಶ್ರಯದಲ್ಲಿ ಕೊಡಗು ಜಿಲ್ಲಾ ಸಮ್ಮೇಳನ ಹಾಗೂ ಕುಶಾಲನಗರ ತಾಲೂಕು ಸಮಿತಿಯ ವಾರ್ಷಿಕೋತ್ಸವ ಕಾರ್ಯಕ್ರಮ ಗುಡ್ಡೆಹೊಸೂರಿನಲ್ಲಿ ನಡೆಯಿತು.
ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂಥರ್ ಗೌಡ ಸಮ್ಮೇಳನ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಸಂಘಟನೆಯಲ್ಲಿ ಸಶಕ್ತರಾಗಿದ್ದರೂ ಕೂಡ ಚಾಲಕ ವರ್ಗ ಕೆಲವೊಂದು ಗಂಭೀರ ಸಮಸ್ಯೆ ಎದುರಿಸುತ್ತಿರುವುದು ವಾಸ್ತವ. ಪ್ರವಾಸೋದ್ಯಮಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಇಂತಹ ಚಾಲಕ ವರ್ಗದವರ ಸಂಕಷ್ಟಗಳನ್ನು ನಿವಾರಿಸುವ ಸಂಬಂಧ ಸಾರಿಗೆ ಇಲಾಖೆ ಅಧಿಕಾರಿಗಳು, ಜಿಲ್ಲಾಧಿಕಾರಿಗಖ ಸಮ್ಮುಖದಲ್ಲಿ ಸಭೆ ಏರ್ಪಡಿಸಿ ನಿಯಮಾನುಸಾರ ನಡೆಯುತ್ತಿರುವ ಸಂಘಟನೆಯ ರಕ್ಷಣೆ ಹಾಗೂ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಬದ್ದನಾಗಿದ್ದೇನೆ. ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಚಾಲಕರು ಕೂಡ ತಮ್ಮನ್ನು ತಾವು ಅಪ್ಡೇಟ್ ಮಾಡಿಕೊಂಡು ಮತ್ತಷ್ಟು ಪರಿಣಾಮಕಾರಿಯಾಗಿ ತಾಳ್ಮೆಯಿಂದ ಸೇವೆ ಒದಗಿಸಲು ಪ್ರಯತ್ನಿಸಬೇಕಿದೆ ಎಂದರು.
ಕೆಟಿಡಿಒ ರಾಜ್ಯ ಗೌರವಾಧ್ಯಕ್ಷ ಇಕ್ಬಾಲ್ ಪ್ರಾಸ್ತಾವಿಕವಾಗಿ ಮಾತನಾಡಿ, ವೈಟ್ ಬೋರ್ಡ್, ಬೈಕ್ ಟ್ಯಾಕ್ಸಿಯಿಂದ ಸರಕಾರಕ್ಕೆ ತೆರಿಗೆ ಪಾವತಿಸಿ ನಿಯಮಾನುಸಾರ ವೃತ್ತಿ ನಡೆಸುತ್ತಿರುವ ಚಾಲಕರಿಗೆ ತೀವ್ರ ಹೊಡೆತ ಬೀಳುತ್ತಿದೆ. ಈ ಸಮಸ್ಯೆಯನ್ನು ಗಂಭಿರವಾಗಿ ಪರಿಗಣಿಸಿ ನ್ಯಾಯ ಒದಗಿಸುವಂತೆ ಶಾಸಕರಲ್ಲಿ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ನಿಯಮಬಾಹಿರವಾಗಿ ನಡೆಯುವ ಯಾವುದೇ ಕಾರ್ಯಗಳಿಗೆ ತಾನು ಬೆಂಬಲಿಸುವುದಿಲ್ಲ. ಅಗತ್ಯ ಮಾನದಂಡಗಳಿಗೆ ಹೊರತಾಗಿ ಬೈಕ್ ಟ್ಯಾಕ್ಸಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಬಗ್ಗೆ ಮಾಹಿತಿ ಇದ್ದು ನಿಯಮಮೀರಿ ಉದ್ಯಮ ನಡೆಯುತ್ತಿದ್ದಲ್ಲಿ ಆ ಬಗ್ಗೆ ಗಂಭೀರವಾಗಿ ಪರಿಗಣಿಸಲಾಗುವುದು ಎಂದರು.
ಕೆಟಿಡಿಒ ಜಿಲ್ಲಾಧ್ಯಕ್ಷ ಎಂ.ಜೆ.ವಿನೋದ್ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭ ಚಾಲಕ ವರ್ಗಕ್ಕೆ ಸದಾ ಸೇವೆ ಒದಗಿಸುವ ಕೊಡಗಿನ ವಿವಿಧ ಭಾಗಗಳ ಮೆಕಾನಿಕ್, ತಂತ್ರಜ್ಞರನ್ನು ಹಾಗೂ ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಮಿಕ ಇಲಾಖೆ ಅಧಿಕಾರಿ ಯತ್ನೇಟಿ ಕಾರ್ಮಿಕ ಯೋಜನೆಗಳ ಬಗ್ಗೆ ಮಾಹಿತಿ ಒದಗಿಸಿದರು. ಚಾಲಕರಿಂದ ರಕ್ತದಾನ ಶಿಬಿರ ನಡೆಯಿತು.
ಸಮ್ಮೇಳನದಲ್ಲಿ ಕೆಟಿಡಿಒ ರಾಜ್ಯ ಸಂಘಟನಾ ಕಾರ್ಯದರ್ಶಿ ವಿನ್ಸೆಂಟ್ ಬಾಬು, ಜಿಲ್ಲಾ ಗೌರವಾಧ್ಯಕ್ಷ ಕಳ್ಳಿಚಂಡ ಪರಶುರಾಮ್, ಜಿಲ್ಲಾ ಉಪಾಧ್ಯಕ್ಷರಾದ ಬಿ.ಎಲ್.ತಿರುಪತಿ, ಅಖಿಲ್ ಶಿವಾಜಿ, ಸ್ಟ್ಯಾನ್ಲಿ, ಪ್ರಧಾನ ಕಾರ್ಯದರ್ಶಿ ಎಚ್.ಎನ್.ಕಿರಣ್,
ಸಂಘಟನಾ ಕಾರ್ಯದರ್ಶಿ ಟಿ.ಪಿ.ಡೆನ್ನಿಸ್, ಕೋಶಾಧಿಕಾರಿ ಎ.ಸಿ.ಲೋಕೇಶ್, ಸಹಕಾರ್ಯದರ್ಶಿ ಮಿಲನ್ ನಾಣಯ್ಯ, ವಿವಿಧ ತಾಲೂಕು ಘಟಕಗಳ ಪ್ರಮುಖರಾದ ಉಮೇಶ್, ರವಿ, ಪ್ರಸನ್ನ, ಪ್ರಕಾಶ್, ಕೆ.ಎಸ್.ಶಿವ, ಅನಿಲ್, ಶಬ್ಬೀರ್, ರಫೀಕ್, ಹೇಮಂತ್, ಮಂಜುನಾಥ್, ದಾನಿಗಳಾದ ಯೋಗೇಶ್, ಹುಸೇನ್, ಹರೀಶ್ ಪುತ್ರನ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ, ಚಂದ್ರಮೋಹನ್, ಜಿಲ್ಲಾ ರಕ್ತನಿಧಿ ಘಟಕದ ಕರುಂಬಯ್ಯ ಮತ್ತಿತರರು ಇದ್ದರು.
Back to top button
error: Content is protected !!