ಕುಶಾಲನಗರ ನ 28: ಕುಶಾಲನಗರ ಪಟ್ಟಣದ ಮುಳ್ಳುಸೋಗೆ ಗ್ರಾಮದ ಗುಮ್ಮನಕೊಲ್ಲಿಯ ಬೃಂದಾವನ ಬಡಾವಣೆಯಲ್ಲಿ ಎಲ್ಲಾ ಧರ್ಮಿಯರು ಜತೆಗೂಡಿ ಜಾತ್ಯತೀತವಾಗಿ ಹುತ್ತರಿ ಹಬ್ಬ ಆಚರಿಸಿ ಭಾವೈಕ್ಯತೆ ಮೆರೆದರು.
ಕಳೆದ 10 ವರ್ಷಗಳಿಂದ ಬಡಾವಣೆಯಲ್ಲಿ ರಾಷ್ಟ್ರೀಯ ಹಬ್ಬಗಳು ಸೇರಿದಂತೆ ಎಲ್ಲಾ ರೀತಿಯ ಹಬ್ಬ ಹರಿದಿನಗಳು ಹಾಗೂ ವಿವಿಧ ಕ್ರೀಡಾಕೂಟಗಳನ್ನು ಪರಸ್ಪರ ಪ್ರೀತಿ- ವಿಶ್ವಾಸ ಹಾಗೂ ಸೌಹಾರ್ದತೆಯಿಂದ ನಡೆಸಿಕೊಂಡು ಬರುತ್ತಿರುವುದು ಸಮಾಜಕ್ಕೆ ಮಾದರಿಯಾಗಿದೆ.
ಬಡಾವಣೆಯ ನಿವಾಸಿ ಮೇಲ ಮನೆ ಎಂ.ಎನ್.ಕಾಳಪ್ಪ ಅವರ ಮನೆಯಲ್ಲಿ ನೆರೆಕಟ್ಟಿದ ನಂತರ ಮೆರವಣಿಗೆಯಲ್ಲಿ ಎಂ.ಎನ್.ಕಾಳಪ್ಪ
ಅವರ ಗದ್ದೆಯಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಕದಿರು ತೆಗೆಯಲಾಯಿತು.
ಅರಳಿ, ಮಾವು, ಹಲಸು, ಕುಂಬಳಿ, ಗೋಡಂಬಿ ಗಿಡಗಳ ಎಲೆಗಳನ್ನು ಬಳಸಿ ‘ನೆರೆ ಕಟ್ಟುವ’ ವಿಧಿ ವಿಧಾನದ ಮೂಲಕ ಹುತ್ತರಿ ಆಚರಣೆಗೆ ಸದಸ್ಯರು ಪೂಜೆ ಸಲ್ಲಿಸಿ ದೇವರಿಗೆ ಪೂಜೆ ಸಲ್ಲಿಸಿದರು. ಧಾರ್ಮಿಕ ವಿಧಿ ವಿಧಾನಗಳ ನಂತರ, ಸದಸ್ಯರು ‘ದುಡಿಕೋಟ್ಪಟ’ದೊಂದಿಗೆ ಗದ್ದೆಗೆ ಮೆರವಣಿಗೆ ನಡೆಸಿದರು.
ಸಾಂಪ್ರದಾಯಿಕ ಉಡುಗೆ – ತೊಡುಗೆಯೊಂದಿಗೆ ಭತ್ತದ ಗದ್ದೆಯಲ್ಲಿ ತೆರಳಿ ಗದ್ದೆಯಲ್ಲಿ ಬೆಳೆದಿದ್ದ ಕದಿರನ್ನು ಕೊಯ್ದು ಅಲ್ಲಿಂದ ಪ್ರತಿಯೊಬ್ಬರ ಕೈಯಲ್ಲಿ ಭತ್ತದ ಕದಿರನ್ನು ಹಿಡಿದು ಮನೆಗಳತ್ತ ಸಾಗಿದರು.
ಎಂ.ಎನ್.ಕಾಳಪ್ಪ ಅವರ ಮನೆಯಂಗಳಕ್ಕೆ ಕದಿರನ್ನು ತಂದು ಮನೆಯೊಳಗೆ ಈ ಮುಂಚೆ ಸಿದ್ಧ ಮಾಡಿದ ನೆರೆ ಕಟ್ಟಿದ ಆ ಕಂತೆಗಳ ಜತೆಯಲ್ಲಿ ಕದಿರನ್ನು ಸೇರಿಸಿ ಹಬ್ಬಕ್ಕೆ ಬಂದಿದ್ದ ಎಲ್ಲಾ ಕುಟುಂಬಗಳ ಹಿರಿಯರಿಗೆ ಕದಿರು ವಿತರಣೆ ಮಾಡಲಾಯಿತು.
ಹುತ್ತರಿ ಉತ್ಸವದಲ್ಲಿ ಹಿರಿಯ ಸಹಕಾರಿ ಧುರೀಣ ಎಂ.ಎನ್.ಕುಮಾರಪ್ಪ, ಆರ್ ಪಿ. ಲಕ್ಷ್ಮಣ್,
ಬಡಾವಣೆಯ ಪ್ರಮುಖರಾದ. ಹಂಡ್ರಂಗಿ ಜೆ.ನಾಗರಾಜ್, ಜಿ.ಬಿ.ಪೂವಯ್ಯ, ಉಮಾದೇವಿ, ಮಹೇಂದ್ರ, ಜಗನ್ನಾಥ್, ಶ್ರೀನಿವಾಸ್, ವನಿತ, ರಾಣಿ, ಲಲಿತಾ ,
ಮೀನಾಕ್ಷಿ, ಜಯ ಪ್ರಕಾಶ್ ಇನ್ನಿತರರು ಪಾಲ್ಗೊಂಡಿದ್ದರು.
Back to top button
error: Content is protected !!