ಕುಶಾಲನಗರ ನ 27 : ವಿರಾಜಪೇಟೆ ಸಿದ್ದಾಪುರ ರಸ್ತೆಯಲ್ಲಿ ಕಾರನ್ನು ಅತೀವೇಗ, ಅಜಾಗರುಕತೆ ಹಾಗೂ ಸ್ಟೇರಿಂಗ್‌ನಿಂದ ಎರಡು ಕೈಗಳನ್ನು ತೆಗೆದು ಮೊಣಕಾಲಿನಿಂದ ಚಲಾಯಿಸುತ್ತಿರುವ ವಿಡಿಯೋ ತುಣುಕುಗಳನ್ನು ರ್ಯಾಲಿ ಅಪ್ಪಣ್ಣ ಚೊವಂಡ ಎಂಬ ಫೇಸ್‌ಬುಕ್ ಖಾತೆಯಲ್ಲಿ ಹಾಕಿರುತ್ತಾರೆ. ಈ ಕುರಿತು ಜಿಲ್ಲಾ ಪೊಲೀಸ್ Social Media Monitoring Cell ನ ಅಧಿಕಾರಿ/ಸಿಬ್ಬಂದಿಗಳು ಮಾಹಿತಿ ನೀಡಿರುತ್ತಾರೆ ಮತ್ತು ಈ ರೀತಿ ಅತೀವೇಗ ಹಾಗೂ ಅಜಾಗರುಕತೆಯಿಂದ ವಾಹನ ಚಲಾಯಿಸುವುದರಿಂದ ಅಪಘಾತವಾಗಿ ವಾಹನ ಚಾಲಕನಿಗೆ ಹಾಗೂ ರಸ್ತೆಯಲ್ಲಿ ಸಂಚರಿಸುವವರಿಗೂ ಸಹ ತೊಂದರೆಯಾಗುವ ಸಾಧ್ಯತೆಗಳಿರುತ್ತದೆ. ಆದ್ದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕ ಹಿತದೃಷ್ಟಿಯಿಂದ ಅತೀವೇಗ ಹಾಗೂ ಅಜಾಗರುಕತೆಯಿಂದ ವಾಹನ ಚಲಾಯಿಸಿದ ಬೆಟ್ಟಗೇರಿ ನಿವಾಸಿಯಾದ ಚೋವಂಡ ಲೋಕೇಶ್ ಅಪ್ಪಣ ಎಂಬುವವರ ಮೇಲೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ಜಪ್ತಿಗೊಳಿಸವಲ್ಲಿ ಕ್ರಮ ಕೈಗೊಳ್ಳಲಾಗುವುದು ಹಾಗೂ ಸದರಿಯರವರ ವಾಹನ ಚಲನಾ ಪರವಾನಿಗೆಯನ್ನು ರದ್ದುಗೊಳಿಸುವಂತೆ ಸಂಬಂಧಪಟ್ಟ ಇಲಾಖೆಗೆ ಶಿಫಾರಸ್ಸು ಮಾಲಾಗುವುದು.
Back to top button
error: Content is protected !!