ಕುಶಾಲನಗರ, ನ25: ಕನ್ನಡ ಉಳಿಸಿ ಬೆಳೆಸುವುಲ್ಲಿ ಆಟೋ ಚಾಲಕರ ಪಾತ್ರ ಮಹತ್ವವಾದದ್ದು. ಕನ್ನಡ ಭಾಷೆ, ಸಾಹಿತ್ಯವನ್ನು ಹೆಚ್ಚು ಬಳಸುವ ಮೂಲಕ ಚಾಲಕರು ಎಲ್ಲರಲ್ಲಿ ಮೊದಲಿಗರಾಗಿದ್ದಾರೆ ಎಂದು ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ನಾಗೇಶ್ ತಿಳಿಸಿದರು.
ಕುಶಾಲನಗರ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಅದ್ದೂರಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಸಾರಿಗೆ ಬಸ್ ನಿಲ್ದಾಣದ ಆವರಣದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ಆಟೋ ಸಂಘಟನೆಗಳು ಅತ್ಯಂತ ಶಕ್ತಿಯುತವಾಗಿವೆ. ಕೆಲವು ಚಾಲಕರು ಕಾನೂನು ಪಾಲನೆ ಮಾಡದೆ ಓಡಿಸುವ ರೀತಿಯಿಂದ ಎಲ್ಲರನ್ನು ದೂಷಿಸುವಂತೆ ಆಗುತ್ತೆ. ಅದರಿಂದ ನಿಮ್ಮ ಸಭೆಗಳಲ್ಲಿ ಚರ್ಚಿಸಿ ಒಳ್ಳೆಯ ರೀತಿಯ ನಡವಳಿಕೆ ಅಳವಡಿಸಿಕೊಂಡು ಉತ್ತಮರಾಗುವಂತೆ ಕರೆ ನೀಡಿದರು.
ಆಟೋ ಚಾಲಕರು ಮತ್ತು ಮಾಲೀಕರ ಸಂಘಕ್ಕೆ ಉಚಿತವಾಗಿ ನಿವೇಶನ ನೀಡಿರುವ ದಿ. ವಿ.ಪಿ.ನಾಗೇಶ್ ಅವರ ಪತ್ನಿ ಜಯಶ್ರೀ ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ರಸ್ತೆಯಲ್ಲಿ ಅಪಘಾತ ಸಂಭವಿಸಿದಾಗ ಮೊದಲು ಸಹಾಯಕ್ಕೆ ಧಾವಿಸುವುದು ಚಾಲಕರು. ಆ ಸೇವೆಯನ್ನು ಶಬ್ದಗಳಲ್ಲಿ ವರ್ಣಿಸಲು ಅಸಾಧ್ಯ. ಗರ್ಭಿಣಿಯರಿಗೆ ಉಚಿತ ಸೇವೆ ನೀಡುವುದನ್ನು ನೋಡಿದ್ದೇವೆ. ಸದಾ ಸಮಾಜ ಸೇವೆಯಲ್ಲಿ ಚಾಲಕರು ಮುಂದಿದ್ದಾರೆ ಎಂದು ಶ್ಲಾಘಿಸಿದರು.
ಸಂಘದ ಅಧ್ಯಕ್ಷ ಕೃಷ್ಣ ದರ್ಶನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ರಾಜ್ಯೋತ್ಸವ ಪ್ರಯುಕ್ತ ನಡೆದಿದ್ದ ವಿವಿಧ ಕ್ರೀಡೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಆರೋಗ್ಯ ಇಲಾಖೆ ಸಹಯೋದಗೊಂದಿಗೆ ರಕ್ತದಾನ, ನೇತ್ರದಾನ, ಅಂಗಾಂಗದಾನ, ಆರೋಗ್ಯ ತಪಾದಣಾಯ ಶಿಬಿರ, ಆಯುಷ್ಮಾನ್ ಕಾರ್ಡ್ ನೋಂದಣಿ ಕಾರ್ಯ ನಡೆಯಿತು.
ಈ ಸಂದರ್ಭ ಉದ್ಯಮಿ ವಿ.ಎನ್. ತೇಜಸ್, ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಗೌಡ, ಖಜಾಂಚಿ ಮುನೀರ್ ಅಹಮದ್, ಮಾಜಿ ಖಜಾಂಚಿ ಜಿ.ರಮೇಶ್, ಪತ್ರಕರ್ತ ಎಚ್.ಎಂ. ರಘು, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಚ್.ಕೆ.ಶಾಂತಿ, ರಕ್ತ ನಿಧಿ ಘಟಕದ ಡಾ.ಕರುಂಬಯ್ಯ ಸಂಘದ ನಿರ್ದೇಶಕರು, ಸದಸ್ಯರು ಹಾಜರಿದ್ದರು.
ಸಂಜೆ ಡ್ಯಾನ್ಸ್ ಡ್ಯಾನ್ಸ್, ಸನ್ಮಾನ ಸಮಾರಂಭ, ಆಟೋ ಅಲಂಕಾರ ಸ್ಪರ್ಧೆ ನಡೆಯಿತು. ಭಾನುವಾರ ಊರಿನ ಪ್ರಮುಖ ಬೀದಿಗಳಲ್ಲಿ ಅಲಂಕೃತ ಆಟೋ ರಿಕ್ಷಾಗಳ ಮೆರವಣಿಗೆ, ಕಲ್ಲಡ್ಕ ಗೊಂಬೆ ಕುಣಿತ, ಅನ್ನಸಂತರ್ಪಣೆ, ರಸಮಂಜರಿ ನಡೆಯಲಿದೆ.
Back to top button
error: Content is protected !!