ಕುಶಾಲನಗರ, ನ 25: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೆ ಕಬ್ಬಿಣದ ಸೇತುವೆಯು ಹಲವು ವರ್ಷಗಳಿಂದ ಗಿಡಗಂಟಿಗಳು ಬೆಳೆದು ಸಾರ್ವಜನಿಕರು ಹಾಗೂ ವಾಹನ ಸವಾರರು ತಿರುಗಾಡಲು ತುಂಬಾ ತೊಂದರೆಯಾಗುತ್ತಿದ್ದು ಇದರ ಬಗ್ಗೆ ಸ್ಥಳೀಯ ಗ್ರಾಮಸ್ಥರು ಕೂಡಿಗೆ ಹಾಗೂ ಕೂಡುಮಂಗಳೂರು ಎರಡು ಗ್ರಾಮ ಪಂಚಾಯಿತಿಗಳಿಗೆ ಮನವಿ ಸಲ್ಲಿಸಿದರು ಆದರೆ ಪೌರ ಕಾರ್ಮಿಕರು ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಭಾಸ್ಕರ್ ನಾಯಕ್ ಅವರು ಶನಿವಾರ ಬೆಳಿಗ್ಗೆ ಇಂದಲೇ ಕೂಡಿಗೆಯ ಪುರಾತನ ಕಾಲದ ಹಳೆಯ ಕಬ್ಬಿಣ ಸೇತುವೆಯ ಎರಡು ಬದಿಗಳಲ್ಲೂ ಗಿಡ ಗಂಟೆಗಳು ಬೆಳೆದಿದ್ದನ್ನು ತೆರವುಗೊಳಿಸಿ ಸ್ವಚ್ಛತೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ಮಾತನಾಡಿ ಇತ್ತೀಚಿಗೆ ಹಾಸನ ಕುಶಲನಗರ ಮಾರ್ಗವಾಗಿ ವಾಹನಗಳ ಸಂಖ್ಯೆ ಹೆಚ್ಚಾಗಿದ್ದು ಹೊಸ ಸೇತುವೆಯ ಮೇಲ್ಭಾಗ ವಾಹನಗಳು ಹಾಗೂ ಹಳೆಯ ಸೇತುವೆಯ ಮೇಲ್ಬಾಗ ಪಾದಾಚಾರಿಗಳು ತಿರುಗಾಡುತ್ತಿದ್ದು ಆದರೆ ಇದು ಹಲವು ಸಮಯಗಳಿಂದಲೂ ಸೇತುವೆಯ ಎರಡು ಬದಿಗಳಲ್ಲು ಗಿಡ ಗಂಟೆಗಳು ಬೆಳೆದಿದ್ದು ಇದರ ಬಗ್ಗೆ ಸಾರ್ವಜನಿಕರು ನಮಗೆ ಮನವಿ ಸಲ್ಲಿಸಿದ ಮೇರೆಗೆ ಶನಿವಾರ ಬೆಳಿಗ್ಗೆ ಇಂದಲೇ ನಮ್ಮ ಪೌರಕಾರ್ಮಿಕರು ಹಾಗೂ ನಾವು ಒಟ್ಟು ಸೇರಿ ಹಳೆಯ ಪುರಾತನ ಕಾಲದ ಕಬ್ಬಿಣದ ಸೇತುವೆಯನ್ನು ಸ್ವಚ್ಛಗೊಳಿಸುತ್ತಿದ್ದೇವೆ ಎಂದರು ಹಾಗೂ ಕೂಡಿಗೆ ಮತ್ತು ಕೂಡಮಂಗಳೂರು ಗ್ರಾಮಸ್ಥರು ಕೂಡುಮಂಗಳೂರು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಹಾಗೂ ಅಧ್ಯಕ್ಷರಿಗೆ ಇದೇ ಸಂದರ್ಭದಲ್ಲಿ ಅಭಿನಂದನೆಗಳನ್ನು ಸಲ್ಲಿಸಿದರು..
Back to top button
error: Content is protected !!