ಕ್ರೈಂ

ದಂತ ವೈದ್ಯರ‌ ಮನೆಗೆ ನಕಲಿ ಐಟಿ ರೇಡ್: ನಾಲ್ವರ ಬಂಧನ

ಕುಶಾಲನಗರ, ನ 22: ಕುಶಾಲನಗರ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗುಮ್ಮನಕೊಲ್ಲಿ ನಿವಾಸಿ ದಂತ ವೈದ್ಯರೊಬ್ಬರ ಮನೆಗೆ ನಕಲಿ ಐಟಿ ಅಧಿಕಾರಿಗಳ ಹೆಸರಿನಲ್ಲಿ ರೇಡ್ ನಡೆಸಿದ ನಕಲಿ ಅಧಿಕಾರಿಗಳ ತಂಡವನ್ನು ಬಂಧಿಸಲಾಗಿದೆ.
ದಂತ ವೈದ್ಯ
ಪ್ರವೀಣ್ ದೇವರಗುಂಡ ಸೋಮಪ್ಪ ಎಂಬವರ ಮನೆಗೆ ನ.09 ರಂದು ಬೆಳಗ್ಗೆ ಸುಮಾರು 07.30 ಘಂಟೆ ಸಮಯದಲ್ಲಿ 04 ಜನರ ತಂಡ ಪ್ರವೇಶ ಮಾಡಿ ಆದಾಯ ತೆರಿಗೆ ಅಧಿಕಾರಿಗಳು ಎಂದು ತಿಳಿಸಿ, ನಿಮ್ಮ ಮನೆಗೆ ಆಂಬ್ಯುಲೆನ್ಸ್‌ನಲ್ಲಿ ರೂ. 200 ಕೋಟಿ ಹಣ ಬಂದಿರುವ ಕುರಿತು ಮಾಹಿತಿ ಇದ್ದು, ಮನೆಯನ್ನು ಪರಿಶೀಲನೆ ಮಾಡಬೇಕು. ಆದ್ದರಿಂದ ಮನೆಯ ಎಲ್ಲ ಸದಸ್ಯರನ್ನು ಒಂದು ಕಡೆ ಕುಳಿತುಕೊಳ್ಳುವಂತೆ ಹಾಗೂ ಎಲ್ಲಾ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿಸಿ 08.45 ರವರೆಗೆ ಹುಡುಕಾಟ ನಡೆಸಿದ್ದರು. ಪ್ರಾರಂಭದಲ್ಲಿ ಈ ರೇಡ್ ಬಗ್ಗೆ ಗೊಂದಲಕ್ಕೆ ಒಳಗಾಗಿದ್ದ ದಂತ ವೈದ್ಯ ಪ್ರವೀಣ್ ಕುಶಾಲನಗರ ಪೊಲೀಸರ ಗಮನಕ್ಕೆ ತಂದಿದ್ದಾರೆ.
ಡಿವೈಎಸ್ಪಿ ಆರ್.ವಿ ಗಂಗಾಧರಪ್ಪ, ಪಿಐ ಪ್ರಕಾಶ್.ಬಿ.ಜಿ, ಪಿಎಸ್ಐ ಗಳಾದ ಗೀತಾ, ಕಾಶಿನಾಥ ಬಗಲಿ, ಮತ್ತು ಸಿಬ್ಬಂದಿಗಳ ತಂಡ ಘಟನೆ ಸ್ಥಳಕ್ಕೆ ಭೇಟಿ ನೀಡಿ ಅಪರಾಧ ಕೃತ್ಯಕ್ಕೆ ಸಂಬಂಧಿಸಿದ ಮಾಹಿತಿ & ಸಾಕ್ಷ್ಯಾಧರಗಳನ್ನು ಕಲೆಹಾಕಿ ತನಿಖೆ ಕೈಗೊಂಡಾದಲಗ ಇದೊಂದು ಫೇಕ್ ರೇಡ್ ಎಂದು ತಿಳಿದುಬಂದಿದೆ.
ಈ ಸಂಬಂಧ ನ.22 ರಂದು ಆರೋಪಿಗಳಾದ ಕೊಡಗಿನ 1), ಟೀನಾ ನಂಜಪ್ಪ, (37 ವರ್ಷ), ಬಿಟ್ಟಂಗಾಲ 2) ಕಾರ್ಯಪ್ಪ, (42 ವರ್ಷ) ಬೇತು, 3) ನೀತಾ ಮಿಳಿಂದ್, (45 ವರ್ಷ), ಪೊನ್ನಂಪೇಟೆ ಮತ್ತು 4) ಹರೀಶ್, (33 ವರ್ಷ), ದೇವನಹಳ್ಳಿ ಎಂಬವರನ್ನು ದಸ್ತಗಿರಿ ಮಾಡಿ ಕ್ರಮ ಕೈಗೊಂಡಿದ್ದಾರೆ. ತಲೆಮರೆಸಿಕೊಂಡಿರುವ ಪ್ರವೀಣ್ ಎಂಬಾತನ ಪತ್ತೆಗೆ ಬಲೆ‌ ಬೀಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!