ಕುಶಾಲನಗರ, ನ 21: ಕುಶಾಲನಗರದ ಮಾದಾಪಟ್ಟಣ ಗ್ರಾಮದಲ್ಲಿ ಜಮೀನಿಗೆ ದಾಳಿ ನಡೆಸಿದ ಕಾಡಾನೆ ಬೆಳೆ ನಾಶ ಮಾಡಿದ ಘಟನೆ ಸೋಮವಾರ ರಾತ್ರಿ ನಡೆದಿದೆ.
ಪರಮೇಶ್ ಎಂಬವರಿಗೆ ಸೇರಿದ ಜಮೀನಿಗೆ ಲಗ್ಗೆಯಿಟ್ಟ ಕಾಡಾನೆ ತೆಂಗಿನ ಗಿಡಗಳನ್ನು ತುಳಿದು ನಾಶಪಡಿಸಿದೆ. ಸೆಲ್ಲಿಂಗ್ ಮಾಡಿ ಶೇಖರಿಸಿಟ್ಟಿದ್ದ ಅಪಾರ ಪ್ರಮಾಣದ ಜೋಳವನ್ನು ಎಳೆದು ಹರಡಿ ತಿಂದು ತುಳಿದು ನಾಶಗೊಳಿಸಿ ಅಪಾರ ಪ್ರಮಾಣದಲ್ಲಿ ನಷ್ಟ ಉಂಟುಮಾಡಿದೆ ಎಂದು ರೈತ ಅಳಲು ತೋಡಿಕೊಂಡಿದ್ದಾರೆ.
Back to top button
error: Content is protected !!