ಕಾರ್ಯಕ್ರಮ

ಕರ್ನಾಟಕ ಒನ್, ಸಮಗ್ರ ನಾಗರಿಕ ಸೇವಾ ಕೇಂದ್ರಕ್ಕೆ ಚಾಲನೆ

ಸೋಮವಾರಪೇಟೆ, ನ 12: ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಗ್ರಾಮ ಒನ್ ಹಾಗೂ ಕರ್ನಾಟಕ ಒನ್ ಸಹಕಾರಿಯಾಗಲಿದೆ ಎಂದು ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ತಿಳಿಸಿದರು.
ಪಟ್ಟಣದ ಸೋಮೇಶ್ವರ ದೇವಾಲಯದ ಬಳಿಯ ಮೂಕಾಂಬಿಕಾ ಕಂಪ್ಯುಟರ್ ಆವರಣದಲ್ಲಿ ಕರ್ನಾಟಕ ಒನ್,ಸಮಗ್ರ ನಾಗರಿಕ ಸೇವಾ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು.
ಸರ್ಕಾರಿ ಕಚೇರಿಗಳಲ್ಲಿ ಜನಸಾಮಾನ್ಯರು ಅರ್ಜಿ ಸಲ್ಲಿಸಲು ಹಾಗೂ ಸವಲತ್ತು ಪಡೆಯಲು ಉಂಟಾಗುವ ಜನಸಂದಣಿ ತಪ್ಪಿಸುವುದರೊಂದಿಗೆ ಜನಸಾಮಾನ್ಯರ ಬಳಿಗೆ ಇಲಾಖೆ ತಲುಪಿಸಲು ಪಂಚಾಯ್ತಿಯ ಮಟ್ಟದಲ್ಲಿ ಗ್ರಾಮ ಒನ್ ಹಾಗೂ ತಾಲೂಕು ಮಟ್ಟದಲ್ಲಿ ಕರ್ನಾಟಕ ಒನ್ ಎಂಬ ಸಮಗ್ರ ನಾಗರೀಕ ಸೇವಾ ಕೇಂದ್ರವನ್ನು ಆರಂಭಿಸಿದೆ ಜನತೆ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ತಾಲೂಕು ದಂಡಾಧಿಕಾರಿ,ತಹಶೀಲ್ದಾರ್ ನರಗುಂದ ಮಾತನಾಡಿ ಸರ್ಕಾರದ ಮಹತ್ವಾಕಾಂಶೆಯ ಯೋಜನೆ ಈ ಕರ್ನಾಟಕ ಒನ್ ಇಲ್ಲಿ ಸರ್ಕಾರಿ ಕಚೇರಿಗಳಲ್ಲಿ ನೀಡಬಹುದಾದ ಅರ್ಜಿಗಳನ್ನು ಸಲ್ಲಿಸಬಹುದು,ಹಲವು
ದಾಖಲಗಳನ್ನು ಪಡೆಯಬಹುದು ಎಂದರು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯ್ತಿ ಸದಸ್ಯರುಗಳಾದ ಬಿ.ಸಿ.ವೆಂಕಟೇಶ್,ಶೀಲಾಡಿಸೋಜ,ಮೋಹಿನಿ, ಬಿಟ್ಟು ಬಿ.ಅರ್.ಮಹೇಶ್,ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ,ನಾಚಪ್ಪ, ಪೊಲೀಸ್ ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ್,ಕರ್ನಾಟಕ ಒನ್ ವ್ಯವಸ್ಥಾಪಕ ಎಸ್.ಚಂದ್ರು, ಪ್ರಮುಖರುಗಳಾದ ಸೋಮೇಶ್,ಶರತ್,ಲೋಹಿತಾಶ್ವ,ದಂತ ವೈದ್ಯ ಸೂರ್ಯ ವೆಂಕಟೇಶ್, ಅಭಿಯಂತರ ಎಸ್.ಎಂ.ಧನುಷ್ ಹಾಗೂ ಸೇವಾ ಕೇಂದ್ರದ ಸಿಬ್ಬಂದಿಗಳು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!