ಕುಶಾಲನಗರ, ನ 12: ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಹಾಕಿ ಪಂದ್ಯಾಟದಲ್ಲಿ ಕೊಡಗು ಜಿಲ್ಲೆಯ ಸರ್ಕಾರಿ ನೌಕರರ ತಂಡ ಜಯ ಸಾಧಿಸಿದ್ದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.
ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ 2023ರ ಕ್ರೀಡಾ ಕೂಟ ಇತ್ತೀಚೆಗೆ ತುಕೂರು ಜಿಲ್ಲೆಯ ನೆಹರು ಕ್ರೀಡಾಂಗಣದಲ್ಲಿ ನಡೆಯಿತು. ಜಿಲ್ಲೆಯ ವಿಜೇತ ಸರ್ಕಾರಿ ನೌಕರರ ತಂಡದ ಶನಿವಾರಸಂತೆ ಆರೋಗ್ಯ ಇಲಾಖೆಯ ಕೆ.ಆರ್.ನವೀನ್ ಕುಮಾರ್, ಸೋಮವಾರಪೇಟೆ ಕಂದಾಯ ಇಲಾಖೆಯ ಕೆ.ಕೆ.ಮಾಚಯ್ಯ, ವೀರಾಜಪೇಟೆ ಕಂದಾಯ ಕೆ.ಎಂ.ಸೋಮಣ್ಣ, ಪಿ.ಎಸ್.ಸತೀಶ್, ಸಿ.ಜಿ.ಶರತ್ ಪೊನ್ನಾಚ, ಮಡಿಕೇರಿ ಕಂದಾಯ ಇಲಾಖೆಯ ಸಿ.ಟಿ.ಜಾಗೃತ್ ಹಾಗೂ ಸಿ.ಎಸ್.ಸುಬ್ಬಯ್ಯ ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
2023-24 ನೇ ಸಾಲಿನ ಅಖಿಲ ಭಾರತ ನಾಗರಿಕ ಸೇವಾ ಹಾಕಿ ಪಂದ್ಯಾವಳಿಯು ನ.15 ರಿಂದ 24 ರವರೆಗೆ ಒಡಿಶಾ ರಾಜ್ಯದ ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ನಡೆಯಲಿದೆ.
Back to top button
error: Content is protected !!