ಕುಶಾಲನಗರ ನ.7: 2023-24 ನೇ ಸಾಲಿನಲ್ಲಿ ಕೃಷಿ ಇಲಾಖೆಯ ಪ್ರಧಾನಮಂತ್ರಿ PMKSY Ol ಯೋಜನೆಯಡಿ ತುಂತುರು ನೀರಾವರಿ ಘಟಕಗಳು ಈ ಸಾಲಿನಲ್ಲಿ ಲಭ್ಯವಿದ್ದು ಇದರ ಅವಶ್ಯಕತೆ ಇರುವ ರೈತರು ಕೂಡಲೇ ಆಯಾ ಹೋಬಳಿ ಕೇಂದ್ರದ ರೈತ ಸಂಪರ್ಕ ಕೇಂದ್ರಗಳಿಗೆ ಅರ್ಜಿಗಳನ್ನು ಸಲ್ಲಿಸಿ ಇಲಾಖೆಯ ಸವಲತ್ತುಗಳನ್ನು ಪಡೆಯುವುದು
ಇಲಾಖೆಯ ನಿಯಮಾನುಸಾರ, ಜೇಷ್ಠತೆ ಮತ್ತು ಅನುದಾನದ ಆಧಾರದ ಮೇಲೆ ವಿತರಿಸಲಾಗುವುದು ಎಂದು ಸೋಮವಾರಪೇಟೆ ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕ ಯಾದವ್ ಬಾಬು ತಿಳಿಸಿದ್ದಾರೆ. ಇದರ ಜೊತೆಯಲ್ಲಿ PMKSY OI ಯೋಜನೆಯಡಿ ರೈತರ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಿಸಿಕೊಂಡಲ್ಲಿ ಶೇಕಡ 50% ರಷ್ಟು ಸಹಾಯಧನವನ್ನು ಕೃಷಿ ಇಲಾಖೆಯ ವತಿಯಿಂದ ರೈತರಿಗೆ ನೀಡುವುದು ಹಾಗೂ ಈ ಯೋಜನೆ ಅಡಿಯಲ್ಲಿ ರೈತರು ಹೊಸದಾಗಿ ಕೊಳವೆಬಾವಿ ಕೊರೆಸಿದಲ್ಲಿ ಅವರಿಗೆ 25,000 ರೂ ನಷ್ಟು ಸಹಾಯಧನವನ್ನು ನೀಡಲಾಗುವುದೆಂದು ಸಹಾಯಕ ಕೃಷಿ ನಿರ್ದೇಶಕರು ತಿಳಿಸಿರುತ್ತಾರೆ. ಇವುಗಳ ಯೋಜನೆಯನ್ನು ಸೋಮವಾರಪೇಟೆ ತಾಲ್ಲೂಕು, ಮತ್ತು ಕುಶಾಲನಗರ ತಾಲ್ಲೂಕಿನ ರೈತರು ಯೋಜನೆಯ ಮಾಹಿತಿಯನ್ನು ತಿಳಿದುಕೊಂಡು ಅದರ ಸದುಪಯೋಗವನ್ನು ಬಳಕೆ ಮಾಡಿಕೊಳ್ಳಲು ಮನವಿ ಮಾಡಿರುತ್ತಾರೆ.
Back to top button
error: Content is protected !!