ಕುಶಾಲನಗರ, ನ 07: ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂಥರ್ ಗೌಡ ಅವರ ಹುಟ್ಟುಹಬ್ಬವನ್ನು ಕುಶಾಲನಗರ ಪುರಸಭೆಯಲ್ಲಿ ಆಚರಿಸಲಾಯಿತು.
ಕುಶಾಲನಗರ ಕಾಂಗ್ರೆಸ್ ಸಮಾನ ಮನಸ್ಕ ಮುಖಂಡರಾದ ವಿ.ಪಿ.ಶಶಿಧರ್, ಪ್ರಮೋದ್ ಮುತ್ತಪ್ಪ ನೇತೃತ್ವದಲ್ಲಿ ಪುರಸಭೆಯ ಪೌರಕಾರ್ಮಿಕ ವೃಂದಕ್ಕೆ ಹೊಸ ಉಡುಗೆ ವಿತರಿಸಲಾಯಿತು.
ಪುರಸಭೆ ಸಭಾಂಗಣದಲ್ಲಿ ಪೌರ ಕಾರ್ಮಿಕರಿಗೆ ಸಹಭೋಜನ ಏರ್ಪಡಿಸಲಾಗಿತ್ತು.
ಈ ಸಂದರ್ಭ ಮಾತನಾಡಿದ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್, ಸ್ವಚ್ಛತಾ ಸೇನಾನಿಗಳಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಇಂದು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸ್ವಚ್ಚತೆಗೆ ತಮ್ಮನ್ನು ಅರ್ಪಿಸಿಕೊಂಡಿರುವ ಪೌರ ಕಾರ್ಮಿಕರಿಗೆ ಪರ್ಯಾಯ ಯಂತ್ರಗಳ ಆವಿಷ್ಕಾರ ಅಸಾಧ್ಯ. ಅವರ ಸೇವೆಗೆ ಶಾಸಕರ ಹುಟ್ಟುಹಬ್ಬದಂದು ಗೌರವ ಸೂಚಕ ಸಣ್ಣ ಪ್ರಯತ್ನ ಇದಾಗಿದೆ ಎಂದರು.
ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ಮುತ್ತಪ್ಪ ಮಾತನಾಡಿ, ಪೌರ ಕಾರ್ಮಿಕ ವರ್ಗಕ್ಕೆ ನಿವೇಶನ, ವಸತಿ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಶಾಸಕ ಗಮನ ಸೆಳೆದಿದ್ದು ಮುಂದಿನ ದಿನಗಳಲ್ಲಿ ಉತ್ತಮ ವ್ಯವಸ್ಥೆ ಕಲ್ಪಿಸಲು ಎಲ್ಲಾ ರೀತಿಯ ಕ್ರಮವಹಿಸಲಾಗುವುದು ಎಂದರು.
ಕೆಪಿಸಿಸಿ ಸದಸ್ಯ ನಟೇಶ್ ಗೌಡ ಮಾತನಾಡಿದರು.
ಪುರಸಭೆ ಸದಸ್ಯರಾದ ಶೇಖ್ ಖಲೀಮುಲ್ಲಾ, ಎಂ.ಕೆ.ದಿನೇಶ್, ವಿ.ಎಸ್.ಆನಂದಕುಮಾರ್, ಜಯಲಕ್ಷ್ಮಿ ನಂಜುಂಡಸ್ವಾಮಿ, ಪೌರಕಾರ್ಮಿಕರ ಸಂಘದ ಪ್ರಮುಖ ಗಣೇಶ್, ಪ್ರಮುಖರಾದ ಶಿವಶಂಕರ್, ಜಿ.ಬಿ.ಜಗದೀಶ್, ಮುಸ್ತಾಫ, ಪ್ರಕಾಶ್, ಅಮೃತ್ ಮತ್ತಿತರರು ಇದ್ದರು.
Back to top button
error: Content is protected !!