ಕುಶಾಲನಗರ, ನ 06: ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಕೂಡಿಗೆಯಲ್ಲಿ ಗುರುವಂದನೆ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಬಹಳ ಅರ್ಥಪೂರ್ಣವಾಗಿ ನೆರವೇರಿತು ಇದೇ ಸಂಸ್ಥೆಯಲ್ಲಿ 2001ರಿಂದ 2004ರವರೆಗೆ ತರಬೇತಿ ಪಡೆದ ಪ್ರಸ್ತುತ ಬೇರೆ ಬೇರೆ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಶಿಕ್ಷಣಾರ್ಥಿಗಳು ಸುಮಾರು ಇಪ್ಪತ್ತು ವರ್ಷಗಳ ನಂತರ ತಮ್ಮ ಗುರುಗಳು ಮತ್ತು ತಮ್ಮೊಂದಿಗೆ ಕಲಿತ ಎಲ್ಲರನ್ನೂ ಒಗ್ಗೂಡಿಸಿ ಒಂದು ಭಾವಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿ ತಮ್ಮ ಗುರುಗಳಿಗೆ ಸನ್ಮಾನಿಸಿ ಗುರುವಂದನೆ ಸಲ್ಲಿಸಿದರು.
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯನ್ನು ಮದುವಣಗಿತ್ತಿಯಂತೆ ಸಿಂಗರಿಸಿದ ಹಳೆಯ ವಿದ್ಯಾರ್ಥಿಗಳು ವಿದ್ಯುತ್ ದೀಪಾಲಂಕಾರಗಳಿಂದ ಜಗಮಗಿಸುವಂತೆ ಮಾಡಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಅಭಿವೃದ್ಧಿ ಉಪನಿರ್ದೇಶಕರಾದ ಶ್ರೀಯುತ ಚಂದ್ರಕಾಂತ್ ಎಂ ವಹಿಸಿಕೊಂಡು ಸುಸೂತ್ರವಾಗಿ ನೆರವೇರಿಸಿಕೊಟ್ಟರು
ತರಬೇತಿ ಪಡೆದ ವಿದ್ಯಾರ್ಥಿಗಳು ಬಹುತೇಕ ಶಿಕ್ಷಕರಾಗಿ ವಿವಿಧ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು. ಕೆಲವು ಪ್ರಶಿಕ್ಷಣಾರ್ಥಿಗಳು ಕೆ.ಎ.ಎಸ್ ಪರೀಕ್ಷೆ ಉತ್ತೀರ್ಣರಾಗಿ ಇಂದು ಉಪಕಾರ್ಯದರ್ಶಿಗಳಾಗಿ, ಕಾರ್ಮಿಕ ಇಲಾಖೆ ಅಧಿಕಾರಿಗಳಾಗಿ, ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾಗಿಯು ಕರ್ತವ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಕಾರ್ಯಕ್ರಮದ ಆಯೋಜನೆಯನ್ನು ದಿವಾಕರ್ ,ವಿಜಯ್ ಕುಮಾರ್, ವೇಣುಗೋಪಾಲ್ ಸತೀಶ್ ವಿಶ್ವನಾಥ್ ಉಮಾದೇವಿ ಮುಂತಾದ ಪ್ರಮುಖರು ಮುಂದಾಳತ್ವ ವಹಿಸಿಕೊಂಡು ಎಲ್ಲರನ್ನೂ ಒಗ್ಗೂಡಿಸಿದರು ಕಾರ್ಯಕ್ರಮಕ್ಕೆ
ಜಂಟಿ ನಿರ್ದೇಶಕರಾಗಿ ನಿವೃತ್ತಗೊಂಡಿದ್ದ ಶ್ರೀಯುತ ಕೆ.ಜೆ ಜೋಸೆಫ್ ರವರು ಆಗಮಿಸಿ ಕಾರ್ಯಕ್ರಮವನ್ನು ಕೊಂಡಾಡಿದರು ಶ್ರೀಮತಿ ಭಾಗ್ಯಲಕ್ಷ್ಮಿ,ಪೆರಿಗ್ರಿನ್ ಎಚ್ ಮಚ್ಚಾಡೋ, ಮಂಜುಳಾ,ದೀನಾ ನಾಯಕ್ ಮೊದಲಾದ ಉಪನಿರ್ದೇಶಕರುಗಳು ವಿವಿಧ ಉಪನ್ಯಾಸಕರುಗಳು ಹಾಜರಿದ್ದು ಗುರುವಂದನೆ ಸ್ವೀಕರಿಸಿದರು
Back to top button
error: Content is protected !!