ಸಭೆ

ಕೂಡಿಗೆ ಗ್ರಾಮ ಪಂಚಾಯತಿ ಆಡಳಿತ ಮಂಡಳಿಯ ತುರ್ತು ಸಭೆ

ಕುಶಾಲನಗರ, ನ‌ 06: ಕೂಡಿಗೆ ಗ್ರಾಮ ಪಂಚಾಯತಿ ಆಡಳಿತ ಮಂಡಳಿಯ ತುರ್ತು ಸಭೆಯು ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಟಿ ಗಿರೀಶ್ ಅಧ್ಯಕ್ಷತೆಯಲ್ಲಿ ನಡೆಯಿತು.
ಕೂಡಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮೀಪದಲ್ಲಿರುವ ಶುದ್ದ ಕುಡಿಯುವ ನೀರಿನ ಘಟಕದ ಯಂತ್ರಗಳ ರಿಪೇರಿ ಮತ್ತು ತಾಂತ್ರಿಕ ಸಮಸ್ಯೆಯಿಂದ ಸ್ಥಗಿತಗೊಂಡ ಘಟಕದಿಂದ ಸಾರ್ವಜನಿಕರಿಗೆ ನೀರನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಕುಡಿಯುವ ನೀರು ಒದಗಿಸುವ ಹಿನ್ನೆಲೆಯಲ್ಲಿ ತುರ್ತು ಸಭೆಯು ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಈ ವಿಷಯದ ಬಗ್ಗೆ ಚರ್ಚೆಗಳು ನಡೆದು, ಗ್ರಾಮ ಪಂಚಾಯತಿ ಅನುದಾನವನ್ನು ಬಳಕೆ ಮಾಡಿ ಘಟಕದ ಯಂತ್ರಗಳ ದುರಸ್ತಿ ಮಾಡುವುದು ಮತ್ತು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಮುಖೇನ ಅದಕ್ಕೆ ಬೇಕಾಗುವ ನೀರಿನ ಸೌಕರ್ಯಗಳನ್ನು ಒದಗಿಸುವ ಮೂಲಕ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಬಗ್ಗೆ ಹಾಜರಿದ್ದ ಸರ್ವ ಸದಸ್ಯರು ಒಕ್ಕೊರಲಿನ ತೀರ್ಮಾನ ಕೈಗೊಂಡರು.
ಈ ಸಂದರ್ಭ ಗ್ರಾಪಂ ಸದಸ್ಯರಾದ ಅರುಣ್ ರಾವ್, ಹೆಚ್. ಎಸ್. ರವಿ. ಅನಂತ, ಚಂದ್ರು, ಶಿವಕುಮಾರ್, ಮೋಹಿನಿ ತಮ್ಮೇಣೇಗೌಡ, ಮಂಗಳಾ, ಜಯಶೀಲಾ, ರತ್ನಮ್ಮ, ಇಂಜಿನಿಯರ್ ಕೀರ್ತನ್, ಅಭಿವೃದ್ಧಿ ಅಧಿಕಾರಿ ಮಂಜುಳಾ ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!