ಕಾರ್ಯಕ್ರಮ

ಗ್ರಾ‌.ಪಂ ಸದಸ್ಯ ಕೆ.ಬಿ.ಶಂಶುದ್ಧೀನ್ ಅವರಿಂದ ವಾರ್ಡ್ ಭೇಟಿ: ಸಾರ್ವಜನಿಕರ ಸಮಸ್ಯೆ ಆಲಿಕೆ

ಕುಶಾಲನಗರ, ನ 06: ಕೂಡುಮಂಗಳೂರು ಗ್ರಾ.ಪಂ ನ ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಅವರು ಸುಂದರನಗರ ವಾರ್ಡ್ ಗೆ ಭೇಟಿ ನೀಡಿ ಸಾರ್ವಜನಿಕರ‌ ಸಮಸ್ಯೆ ಆಲಿಸಿದರು.
ಕೂಡುಮಂಗಳೂರು ಗ್ರಾ.ಪಂ ನ‌ ಎರಡನೇ ವಾರ್ಡ್ ಆದ ಸುಂದರನಗರ‌ ಹಾಗೂ ನವಗ್ರಾಮಕ್ಕೆ ಸ್ಥಳೀಯ ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಭೇಟಿ ನೀಡಿದರು. ಬಳಿಕ ಗ್ರಾಮಸ್ಥರು ವಾರ್ಡ್ ನಲ್ಲಿ ಬಾಕಿಯಿರುವ ಅಭಿವೃದ್ಧಿ ‌ಕಾರ್ಯಗಳ ಬಗ್ಗೆ ವಾರ್ಡ್ ಸದಸ್ಯರ ಗಮನಕ್ಕೆ ತಂದರು. ಸುಂದರನಗರದಲ್ಲಿ ಕಾವೇರಿ ನೀರಾವರಿ ನಿಗಮದಿಂದ ನಡೆಸಲಾಗುತ್ತಿರುವ ಚರಂಡಿ ಕಾಮಗಾರಿ ಬಾಕಿಯಿದ್ದು, ಕಾಮಗಾರಿ ಪೂರ್ಣಗೊಳಿಸಿಕೊಡುವ ಬಗ್ಗೆ ಸದಸ್ಯರ ಗಮನಕ್ಕೆ ತಂದರು. ಈಗಾಗಲೇ ಸಮಸ್ಯೆಯನ್ನು ಸಂಬಂಧಪಟ್ಟ ನೀರಾವರಿ ನಿಗಮದ ಅಭಿಯಂತರರ ಗಮನಕ್ಕೆ ತರಲಾಗಿದ್ದು, ಆದಷ್ಟು ಬೇಗನೇ ಕಾಮಗಾರಿ ನಡೆಸಿಕೊಡುವ ಬಗ್ಗೆ ಭರವಸೆ ನೀಡಿದ್ದಾರೆ ಎಂದು ಕೆ.ಬಿ.ಶಂಶುದ್ಧೀನ್ ಗ್ರಾಮಸ್ಥರಿಗೆ ತಿಳಿಸಿದರು.
ಸುಂದರನಗರ ಸಮುದಾಯ ಭವನದಲ್ಲಿ ಮಧ್ಯವ್ಯಸನಿಗಳು ಹಾಗೂ ಗಾಂಜಾ ವ್ಯಸನಿಗಳ ಹಾವಳಿ ಹೆಚ್ಚಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು. ಈ ಬಗ್ಗೆ ಆಗಾಗಲೇ ಠಾಣಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ವಾರ್ಡ್ ಸದಸ್ಯರು ಪ್ರತಿಕ್ರಿಯಿಸಿದರು.
ನಿವೇಶನ ರಹಿತರು ಪಂಚಾಯಿತಿಯಿಂದ ನಿವೇಶನ ನೀಡುವಂತೆ ಮನವಿ ಮಾಡಿದರು. ನಿವೇಶನ ರಹಿತರು ಮೊದಲು ಪಂಚಾಯಿತಿಗೆ ಅರ್ಜಿ ನೀಡಿ ಫಲಾನುಭವಿಗಳ ಪಟ್ಟಿಗೆ ಹೆಸರು ಸೇರಿಸಿಕೊಳ್ಳುವಂತೆ ಕೆ.ಬಿ.ಶಂಶುದ್ಧೀನ್ ತಿಳಿಸಿದರು. ಇನ್ನು ಕೆಲವೇ ತಿಂಗಳುಗಳಲ್ಲಿ ನೈಜ ಫಲಾನುಭವಿಗಳಿಗೆ ಚಿಕ್ಕತ್ತೂರಿನಲ್ಲಿ ನಿವೇಶನ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದರು.
ವಾರ್ಡ್ ನಲ್ಲಿ ಚರಂಡಿ ಸ್ವಚ್ವತೆ, ಕುಡಿಯುವ ನೀರು ಹಾಗೂ ಬೀದಿ‌ ದೀಪದ ಸಮಸ್ಯೆಗಳಿದ್ದಲ್ಲಿ ತಿಳಿಸುವಂತೆ ವಾರ್ಡ್ ಸದಸ್ಯರು ಮನವಿ ಮಾಡಿದರು. ನಂತರ ಸರ್ಕಾರದ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ತಿಳಿಸಿದ ಕೆ.ಬಿ.ಶಂಶುದ್ಧೀನ್ ಅವರು, ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು. ಎಸ್.ಸಿ, ಎಸ್.ಟಿ ಸಮುದಾಯದ ಫಲಾನುಭವಿಗಳಿಗೆ ಶೇ ೨೫ರ ಅನುದಾನದಲ್ಲಿ ಹೊಲಿಗೆ ಯಂತ್ರ ನೀಡಲಾಗುವುದು. ಹೊಲಿಗೆ ಯಂತ್ರ ಅಗತ್ಯವಿರುವವರು‌ ಪಂಚಾಯಿತಿಗೆ ಅರ್ಜಿ ನೀಡುವಂತೆ ತಿಳಿಸಿದರು. ವಸತಿ ಯೋಜನೆಯಡಿ ಮನೆ ನಿರ್ಮಾಣ ಮಾಡುತ್ತಿರುವ ಫಲಾನುಭವಿಗಳು ಆದಷ್ಟು ಬೇಗನೇ ಮನೆ ಕೆಲಸವನ್ನು ಪೂರ್ಣಗೊಳಿಸುವಂತೆ ತಿಳಿಸಿದರು.
ಬಳಿಕ ಮಾಗನಾಡಿದ ವಾರ್ಡ್ ಸದಸ್ಯ ಕೆ.ಬಿ.ಶಂಶುದ್ಧೀನ್, ಕೂಡುಮಂಗಳೂರು ಗ್ರಾ.ಪಂ ನ ಎರಡನೇ ವಾರ್ಡ್ ಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಲಾಗಿದೆ. ಹಾಗೆಯೇ ಸರ್ಕಾರ ಯೋಜನೆಗಳನ್ನು ಹಾಗೂ ಸರ್ಕಾರದಿಂದ ಜನರಿಗೆ ಸಿಗುವ ಸೌಲಭ್ಯಗಳ ಬಗ್ಗೆ ತಿಳಿಯಪಡಿಸಲಾಯಿತು. ಇನ್ನು ಕೆಲವೇ ದಿನಗಳಲ್ಲಿ ಹದಿನೈದನೇ ಹಣಕಾಸು ಹಾಗೂ ವರ್ಗ ಒಂದರ ಅನುದಾನದಲ್ಲಿ ಸುಂದರನಗರದಲ್ಲಿ ಚರಂಡಿ ಕಾಮಗಾರಿ, ವಿನಾಯಕ ಬಡಾವಣೆಯಲ್ಲಿ ರಸ್ತೆ ಅಭಿವೃದ್ಧಿ, ಬಸವೇಶ್ವರ ಬಡಾವಣೆಯಲ್ಲಿ ರಸ್ತೆ ಕಾಮಗಾರಿ ಹಾಗೂ ನವಗ್ರಾಮದಲ್ಲಿ ರಸ್ತೆ ‌ಕಾಮಗಾರಿ ನಡೆಸಲಾಗುವುದು. ರಾಜ್ಯ ಸರ್ಕಾರದಿಂದ ಪ್ರವಾಹ ಪೀಡಿತ ಪ್ರದೇಶಗಳ ಅಭಿವೃದ್ಧಿಗಾಗಿ ೭ ಕೋಟಿ ಅನುದಾನ ಬಂದಿದೆ. ವಾರ್ಡ್ ನ ಕೆಲವು ಅಭಿವೃದ್ಧಿ ಕಾಮಗಾರಿಗಳನ್ನು ಶಾಸಕರ ಗಮನಕ್ಕೆ ತರಲಾಗಿದ್ದು, ವಾರ್ಡ್ ನಲ್ಲಿ ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆಸಲು ಶಾಸಕರು‌ ಅನುದಾನ‌ ನೀಡುವ ಭರವಸೆಯಿದೆ ಎಂದರು.
ಈ ಸಂದರ್ಭ ಗ್ರಾಮಸ್ಥರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!