ಪ್ರಕಟಣೆ
ಅಗಲಿದ ಕೇರಳ ಸಮಾಜದ ಅಧ್ಯಕ್ಷ ಕೆ.ಆರ್.ಶಿವಾನಂದ್ ಅವರಿಗೆ ಸಂತಾಪ ಸಭೆ
ಕುಶಾಲನಗರ, ಅ 25: ಸೋಮವಾರ ನಿಧನರಾದ ದೇವಾಲಯಗಳ ಒಕ್ಕೂಟದ ಸ್ಥಾಪಕ ಅಧ್ಯಕ್ಷರು, ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಸ್ಥಾಪಕ ಅಧ್ಯಕ್ಷರು, ಕೇರಳ ಸಮಾಜದ ಅಧ್ಯಕ್ಷರು, ಕಾವೇರಿ ರಿವರ್ ಸೇವಾ ಟ್ರಸ್ಟ್ ಉಪಾಧ್ಯಕ್ಷರು ಆಗಿ ಸೇವೆ ಸಲ್ಲಿಸಿದ ಕೆ.ಆರ್. ಶಿವಾನಂದನ್ ಅವರಿಗೆ ಒಕ್ಕೂಟದ ಆಶ್ರಯದಲ್ಲಿ ಸಂತಾಪ ಸೂಚಕ ಸಭೆ ನಡೆಯಿತು.
ಕುಶಾಲನಗರ ಅಯ್ಯಪ್ಪ ಸ್ವಾಮಿ ದೇವಾಲಯ ರಸ್ತೆಯಲ್ಲಿರುವ ಮಹಾಲಕ್ಷ್ಮಿ ಲಾಡ್ಜ್ ಸಭಾಂಗಣದಲ್ಲಿ ಸಂಜೆ ಗಣ್ಯರು ಶ್ರದ್ದಾಂಜಲಿ ಸಲ್ಲಿಸಿದರು.