ಕಾರ್ಯಕ್ರಮ

ಕೂಡುಮಂಗಳೂರು ಗ್ರಾಪಂ ವತಿಯಿಂದ ಆಯುಧ ಪೂಜೆ ಆಚರಣೆ

ಕುಶಾಲನಗರ, ಅ 22:

ಕೂಡುಮಂಗಳೂರು ಗ್ರಾಮ ಪಂಚಾಯಿತಿ ವತಿಯಿಂದ ಅಧ್ಯಕ್ಷ ಭಾಸ್ಕರ್
ನಾಯಕ್.ಡಿ ಅಧ್ಯಕ್ಷತೆಯಲ್ಲಿ ಆಯುಧಪೂಜೆ ಆಚರಿಸಲಾಯಿತು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಂತೋಷ್ ಮತ್ತು ಪಂಚಾಯಿತಿ ಸಿಬ್ಬಂದಿ ವರ್ಗ ಹಾಗೂ ಸಾರ್ವಜನಿಕರು ಆಗಮಿಸಿ ಸರಳವಾಗಿ ಆಯುಧ ಪೂಜೆಯನ್ನು
ನೆರವೇರಿಸಿದರು.

ಈ ಸಂದರ್ಭ ಮಾತನಾಡಿದ ಅಧ್ಯಕ್ಷ
ಭಾಸ್ಕರ್ ನಾಯಕ್, ಈ ಹಬ್ಬವು ನಮ್ಮ ನಾಡಿನ ಸಮಸ್ತ ಜನರಿಗೆ ಖುಷಿ ನೆಮ್ಮದಿಯನ್ನು ತರಲಿ ನಾಡ ದೇವತೆ ತಾಯಿ ಚಾಮುಂಡೇಶ್ವರಿ ಎಲ್ಲಾ ಸಂಕಷ್ಟಗಳನ್ನು ಪರಿಹರಿಸಿ ಆರೋಗ್ಯ, ಸುಖ, ಸಮೃದ್ಧಿ ಕರುಣಿಸಲಿ ಎಂದು ಹೇಳಿ ನಾಡಿನ ಸಮಸ್ತ ಜನತೆಗೆ ಭಕ್ತಿ ಪೂರ್ವಕ ಶುಭಾಶಯಗಳು ತಿಳಿಸಿದರು.

ಈ ಸಂದರ್ಭ ಪಂಚಾಯಿತಿ ಸಿಬ್ಬಂದಿಗಳಾದ ಮಮತಾ, ಅವಿನಾಶ್, ಪವಿತ್ರ, ಲೈನ, ಚುಂಚನಾಯ್ಕ, ಸುಬ್ರಮಣಿ, ರಾಮು ಮತ್ತಿತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!