ರಾಜಕೀಯ

ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಕಛೇರಿಗೆ ಸಚಿವ ಭೋಸರಾಜು ಭೇಟಿ: ಕೊಡಗಿಗೆ 25 ಕೋಟಿಯ ಯೋಜನೆ

ಬಿಜೆಪಿ ನಾಯಕತ್ವ ಇಲ್ಲದ ಪರಿಸ್ಥಿಯಲ್ಲಿದೆ: ಸಚಿವ ಭೋಸರಾಜು

ಕುಶಾಲನಗರ, ಅ 16: ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಭೋಸರಾಜು ಅವರು ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಕಛೇರಿಗೆ ಭೇಟಿ ನೀಡಿದರು.

ಶಾಸಕ ಡಾ.ಮಂಥರ್ ಗೌಡ, ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್, ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಪ್ರಮುಖರಾದ ಕೆ.ಪಿ.ಚಂದ್ರಕಲಾ, ನಟೇಶ್ ಗೌಡ, ಟಿ.ಪಿ.ಹಮೀದ್, ದಿನೇಶ್, ಖಲೀಮುಲ್ಲಾ, ಕಿರಣ್, ಶಿವಶಂಕರ್, ಜೋಸೆಫ  ವಿಕ್ಟರ್ ಸೋನ್ಸ್, ಸುನಿತಾ ಮತ್ತಿತರರು ಇದ್ದರು.

ಪಕ್ಷದ ಕಾರ್ಯಕರ್ತರು, ಮುಖಂಡರ ಅಹವಾಲು ಸ್ವೀಕರಿಸಿದ ಸಚಿವರು ಮಾತನಾಡಿ, ಕೊಡಗಿನಲ್ಲಿ ಕಾಂಗ್ರೆಸ್ ಶಾಸಕರ ಆಯ್ಕೆಗೆ ಕಾರ್ಯಕರ್ತರ ಶ್ರಮ ಅಧಿಕವಿದೆ. ಜನರು‌ ನೀಡಿದ ಅವಕಾಶ ಬಳಸಿಕೊಂಡು ಬೇರೂರಬೇಕಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ 20 ಸ್ಥಾನ ಗೆಲ್ಲಲು ಪಣ ತೊಡಲಾಗಿದೆ ಎಂದರು. ಕೊಡಗಿನಿಂದ ಹೆಚ್ಚಿನ‌ ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕಿದೆ.

ಮುಖಂಡರು, ಕಾರ್ಯಕರ್ತರಿಗೆ ಸೂಕ್ತ ಸ್ಥಾನ ಮಾನ ಕಲ್ಪಿಸಲು ಮುಖ್ಯ ಮಂತ್ರಿ ಚಿಂತನೆ ಹರಿಸಿದ್ದರೆ. ಎಲ್ಲರಿಗೂ ಅವಕಾಶ ದೊರೆಯಲಿದೆ ಎಂದರು.

ಮೋದಿ‌ ವಿರುದ್ದ ಕಾಂಗ್ರೆಸ್ ಮತ್ತು‌ ಮಿತ್ರ ಪಕ್ಷ ಒಂದುಗೂಡಿ ಸ್ಪರ್ಧೆಗೆ ಧುಮಿಕಿಗೆ ಎಂದರು. ಗ್ಯಾರೆಂಟಿಗಳನ್ನು ಸಮರ್ಪಕವಾಗಿ ಎಲ್ಲರಿಗೂ ತಲುಪಿಸುವಲ್ಲಿ ಕಾಂಗ್ರೆಸ್ ಸಫಲವಾಗಿದೆ ಎಂದರು.

ಶಾಸಕ ಮಂಥರ್ ಗೌಡ ಮಾತನಾಡಿ, ಕಾಡಾನೆ ಹಾವಳಿ, ತೋಟಗಳಲ್ಲಿನ ಲೈನ್ ಮನೆ ವಾಸಿಗಳ ಸಮಸ್ಯೆ, ಅರಣ್ಯ ಹಕ್ಕು ಸಮಸ್ಯೆಗಳ, ಪಿಡಿಒಗಳ ಅವ್ಯವಸ್ಥೆ ಬಗ್ಗೆ ಸಚಿವರ ಗಮನ ಸೆಳೆದು, ಹೌಸಿಂಗ್ ಫಾರ್ ಆಲ್ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿದರು.

ಸ್ಥಳೀಯ ಸಂಘಸಂಸ್ಥೆಗಳ ಚುನಾವಣೆಯಲ್ಲಿ ಸಾಧನೆ ತೋರಿದ ಜನಪ್ರತಿನಿಧಿಗಳನ್ನು ಅಭಿನಂದಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!