ಕುಶಾಲನಗರ, ಅ 02: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ವತಿಯಿಂದ
ಚೆನ್ನೈನಲ್ಲಿ ನಡೆದ ಡ್ಯಾನ್ಸ್ ಟಾಲೆಂಟ್ ಶೋ-2023 ರ ಸ್ಪರ್ಧಾ ಕಾರ್ಯಕ್ರಮದಲ್ಲಿ ಕುಶಾಲನಗರದ ಏಂಜಲ್ಸ್ ವಿಂಗ್ಸ್ ಸ್ಕೂಲ್ ಆಫ್ ಡ್ಯಾನ್ ಸಂಸ್ಥೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ಸಾಧನೆ ತೋರಿದ್ದಾರೆ. ನೃತ್ಯ ಸಂಸ್ಥೆಯ
ಸಂಸ್ಥಾಪಕ ಹಾಗೂ ಸಂಯೋಜಕ ಮಾಸ್ಟರ್ ಅರ್ಪಿತ್ ಅನೂಪ್ ಡಿಸೋಜ, ವಿದುಷಿ ಏಂಜಲ್ ರಶ್ಮಿ ಡಿಸೋಜ ಅವರ ನೃತ್ಯ ಸಂಯೋಜನೆಯಲ್ಲಿ 23 ವಿದ್ಯಾರ್ಥಿಗಳ ತಂಡ ಚೆನ್ನೆನಲ್ಲಿ ನಡೆದ ಇಂಡಿಯನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಕಾಂಪಿಟಿನಷನಲ್ಲಿ ಅಂತಿಮ ಸುತ್ತಿನಲ್ಲಿ 10 ತಂಡಗಳೊಂದಿಗೆ ಸ್ಪರ್ಧಿಸಿ ಪ್ರಥಮ ಸ್ಥಾನ ಪಡೆದುಕೊಂಡಿದೆ.
ತಂಡದಲ್ಲಿ ಕುಶಾಲನಗರದ ಚೈತನ್ಯ ಡಿ, ದೇವಿಕಾ ಎಂ.ಆರ್, ಆರ್ಯ ಪಿ.ಎಸ್, ಮನಸ್ವಿ ಆರ್. ಶಂಕರ್, ನಕ್ಷ ಹೆಚ್.ವಿ, ಲಕ್ಷ್ಮಿಶ್ರೀ ವಿ, ಪ್ರಾರ್ಥನಾ ಎಂ.ಆರ್, ಕೊಯಲ್ ಪೊನ್ನಕ್ಕ, ಶಾನ್ವಿ ಸದಾನಂದ, ಭೂಮಿಕಾ ಎ, ಪ್ರಾರ್ಥನಾ ಎಂ.ಜೆ, ಲಿಯೋನೆಲ್ ಲ್ಯೂಕ್ ಡಿಸೋಜಾ ಮತ್ತು ನಂಜರಾಯಪಟ್ಟಣದ ತನುಷ್ಕ ಕೆ. ಆರ್, ನಿಗದಿ ಡಿ.ಹೆಚ್.
ದೃಶ್ಯ ಎನ್.ಆರ್, ಮಾನ್ಯ ಬಿ.ಡಿ. ರಚಿತ ಆರ್.ವೈ, ಪ್ರೀತಮ್ ಜಿ.ಹೆಚ್. ತೃಪ್ತಿ ಜಿ.ಎಚ್. ವರಲಕ್ಷ್ಮಿ
ಶ್ರೀ ಕೃತಿ ಎಚ್.ಜಿ.
ಹರಿದಾ ಜೆ, ಪ್ರತಿಕ್ಷಾ ಪಿ ಪಾಲ್ಗೊಂಡಿದ್ದರು.
ವಿದ್ಯಾರ್ಥಿಗಳ
ವಿವಿಧ ಬಗೆಯ ನೃತ್ಯ ಪ್ರದರ್ಶನಗಳ ಮೂಲಕ ಪ್ರಥಮ ಸ್ಥಾನ ಗಳಿಸಿದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ವಿದುಷಿ ಏಂಜಲ್ ರಶ್ಮಿ ಡಿಸೋಜ, ವಿದ್ಯಾರ್ಥಿಗಳ ಪರಿಶ್ರಮ, ಪೋಷಕರ ಸಹಕಾರದಿಂದ ಇಂತಹ ಉನ್ನತ ಮಟ್ಟದ ಪ್ರಶಸ್ತಿ ಪಡೆದುಕೊಳ್ಳಲು ಸಾಧ್ಯವಾಗಿದೆ. ಇತ್ತೀಚಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ವತಿಯಿಂದ ಏರ್ಪಡಿಸಿದ್ದ ನೃತ್ಯ ಸ್ಪರ್ಧೆಯ ಆಯ್ಕೆ ಪ್ರಕ್ರಿಯೆಯಲ್ಲಿ 120 ತಂಡಗಳ ಪೈಕಿ 10 ತಂಡಗಳನ್ನು ಆಯ್ಕೆ ಮಾಡಲಾಗಿತ್ತು. ಇದರಲ್ಲಿ ಕುಶಾಲನಗರದ ಏಂಜಲ್ ವಿಂಗ್ಸ್ ಸ್ಕೂಲ್ ಆಫ್ ಡ್ಯಾನ್ಸ್ ಕೂಡ ಒಂದಾಗಿತ್ತು.
ಚೆನ್ನೈನಲ್ಲಿ ನಡೆದ ಸ್ಪರ್ಧೆಯಲ್ಲಿ ಅಂತಿಮ ಸುತ್ತಿಗೆ ಆಯ್ಕೆಯಾದ 10 ಸಂಸ್ಥೆಗಳ ಪೈಕಿ ಉತ್ತಮ ಪ್ರದರ್ಶನ ನೀಡಿ ನಮ್ಮ ಸಂಸ್ಥೆ ಪ್ರಥಮ ಸ್ಥಾನ ಪಡೆದು ಕೊಂಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.
Back to top button
error: Content is protected !!