ಕ್ರೈಂ
ಶ್ರೀಗಂಧದ ನಾಟಾ ಸಾಗಾಟ: ಆರೋಪಿಗಳ ಬಂಧನ

ಕುಶಾಲನಗರ, ಸೆ 22: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಜೇನುಕಲ್ಲುಬೆಟ್ಟ ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯ ಚಿಕ್ಕನಾಯಕನ ಹೊಸಳ್ಳಿ ಎಂಬ ಗ್ರಾಮದ ಸರ್ವೇ ನಂಬರ್ 25 ರಲ್ಲಿ ಶ್ರೀಗಂದದ ಮರವನ್ನು ಕಡಿದು ತುಂಡುಗಳಾಗಿ ಮಾಡಿಕೊಂಡು ಸಾಗಿಸುತ್ತಿರುವ ವೇಳೆ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆಯವರು ಆರೋಪಿಗಳನ್ನು ಮಾಲು ಸಹಿತ ಬಂಧಿಸಿದ್ದಾರೆ.
ಶಿರಂಗಾಲ ಗ್ರಾಮದ ಬಿ.ಕೆ.ವಿಜಯ , ಮತ್ತು ಎಸ್.ಪಿ.ಗಣೇಶ್ ಎಂಬವರು ಬಂಧಿತ ಆರೋಪಿಗಳು. ರಾಘವ ಎಂಬಾತ ತಲೆಮರೆಸಿಕೊಂಡಿದ್ದು, ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ.
ಡಿಎಫ್ಒ ಕೆ.ಟಿ.ಪೂವಯ್ಯ, ಎಸಿಎಫ್ ಗೋಪಾಲ್ ಮಾರ್ಗದರ್ಶನದಲ್ಲಿ ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಎಚ್.ಪಿ.ಚೇತನ್ ನೇತೃತ್ವದಲ್ಲಿ ಹೆಬ್ಬಾಲೆ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಎಂ.ಕೆ.ಭರತ್, ಅರಣ್ಯ ಪಾಲಕ ಎಚ್.ಎಸ್.ಲೋಕೇಶ್,ಅರಣ್ಯ ವೀಕ್ಷಕ ರಾಜಪ್ಪ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.