ಕುಶಾಲನಗರ ಸೆ ,19: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮ ಸಮೀಪದ ಜೇನುಕಲ್ಲುಬೆಟ್ಟ( ಭುವನಗರಿ) ಗ್ರಾಮದಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘದ 2022-23 ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಟಿ, ಕೆ ಚಂದ್ರಶೇಖರ್ ನವರ ಅಧ್ಯಕ್ಷತೆಯಲ್ಲಿ ನಡೆಯಿತು.
ನಂತರ ಸಭಾ ಅಧ್ಯಕ್ಷ ಟಿ ಕೆ ಚಂದ್ರಶೇಖರ್ ಮಾತಾಡುತ್ತಾ ಸಂಘದ ಬೆಳವಣಿಗೆಗೆ ಹಾಲು ಉತ್ಪಾದಕರ ಸಹಕಾರ ಬಹು ಮುಖ್ಯ, ತಮ್ಮೇಲ್ಲರ ಸಹಕಾರದೊಂದಿಗೆ ಈ ಸಾಲಿನಲ್ಲಿ ಸಂಘವು 4, ಲಕ್ಷದ 11 ಸಾವಿರದ 411 ರೂಗಳ ಆದಾಯವನ್ನು ಗಳಿಸಿದೆ , ಅಲ್ಲದೆ ರೈತರಿಗೆ ಬೇಕಾಗುವ ಎಲ್ಲಾ ಮೂಡಿಸಬಲ್ಲುದು ಸೌಲಭ್ಯಗಳನ್ನು ಒದಗಿಸುವ ಮುಖೇನ ಸಂಘದ ಅಭಿವೃದ್ಧಿಗೆ ಸಹಕಾರ ನೀಡುವಂತೆ ಕೋರಿದರು.
ಸಭೆಯಲ್ಲಿ ಹಾಜರಿದ್ದ ರೈತ ಸದಸ್ಯರು ಸಂಘದ ಅಭಿವೃದ್ಧಿಗೆ ಪೂರಕವಾದ ಸಲಹೆ ಸೂಚನೆಗಳನ್ನು ನೀಡಿದರು. ಸಭೆಯಲ್ಲಿ 2022-23 ನೇ ಸಾಲಿನ ಆಡಿಟ್ ವರದಿ ಪರಿಶೀಲನೆ, ಅಂದಾಜು ಬಜೆಟ್ ಮಂಜೂರು , ಬೈಲಾ ತಿದ್ದುಪಡಿ ಸೇರಿದಂತೆ ಅಭಿವೃದ್ಧಿಗೆ ಹೊಸ ಯೋಜನೆಗಳನ್ನು ತಯಾರಿಸುವ ವಿಷಯಗಳ ಬಗ್ಗೆ ಚರ್ಚೆಗಳು ನಡೆದವು. ವಾರ್ಷಿಕ ವರದಿಯನ್ನು ಸಭೆಗೆ ಕಾರ್ಯದರ್ಶಿ ಹೆಚ್, ಎಂ, ಬಸವರಾಜ್ ಮಂಡಿಸಿದರು.
ಹಾಸನ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಬಿ, ವಿ,ವೀಣಾ, ನವರು ಸಂಘಕ್ಕೆ ಹಾಲು ಹಾಕುವ ಉತ್ಪಾದಕರು ಹಾಲಿನ ಗುಣಮಟ್ಟವನ್ನು ಕಾಯ್ದುಕೊಳ್ಳುವಂತೆ, ಮತ್ತು ಹೈನುಗಾರಿಕೆಗೆ ಪೂರಕವಾದ ಯೋಜನೆಗಳ ಬಗ್ಗೆ, ಮತ್ತು ಪಶು ಚಿಕಿತ್ಸೆಯ ಮತ್ತು ಪಶು ಅಹಾರದ ಬಗ್ಗೆ, ಮತ್ತು ಒಕ್ಕೂಟದ ಯೋಜನೆಗಳ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ರೈತರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಕೂಡಿಗೆ ಗ್ರಾಮ ಪಂಚಾಯತಿ ಸದಸ್ಯರಾದ ಚಂದ್ರು, ಜಯಶೀಲಾ, ಸಂಘದ ಉಪಾಧ್ಯಕ್ಷ ಕೆ, ಆರ್, ಜಗದೀಶ್, ನಿರ್ದೇಶಕರಾದ ಕೆ , ಎಸ್ ಜೊಯಪ್ಪ, ನಾಗರಾಜ್, ಬಿ, ಆರ್, ಧರ್ಮದಾಸ್, ಶಂಕರನ್, ಅನ್ನಮ್ಮ ಬಿಜು, ಜ್ಯೋತಿ ವಿಜಯಕುಮಾರ್, ಎಸ್, ಆರ್,ಮಹೇಶ್, ಪಾರ್ವತಿ ಸತ್ಯವೃತ, ಸಂಘದ ಕಾರ್ಯದರ್ಶಿ ಹೆಚ್, ಎಂ, ಬಸವರಾಜ್, ಸೇರಿದಂತೆ ಹಾಲು ಉತ್ಪಾದಕರ ಸಂಘದ ಸದಸ್ಯರು ಹಾಜರಿದ್ದರು.
ದಕ್ಷ ಸ್ವಾಗತಿಸಿ, ರಕ್ಷಿತಾ ಪ್ರಾರ್ಥಿಸಿ, ಬಸವರಾಜ್ ವಂದಿಸಿದರು.
Back to top button
error: Content is protected !!