ಕುಶಾಲನಗರ ಸೆ 19: ಇಲ್ಲಿಗೆ ಸಮೀಪದ ಶಿರಂಗಾಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಕುಶಾಲನಗರ ತಾಲ್ಲೂಕು ಶ್ರೀ ವಿಶ್ವ ಕರ್ಮ ಸೇವಾ ಸಮಿತಿಯ ವತಿಯಿಂದ ಮೊದಲನೇಯ ವರ್ಷದ ವಿಶ್ವ ಕರ್ಮ ಜಯಂತಿ ಅಂಗವಾಗಿ ವಿಶ್ವಕರ್ಮ ಸಮುದಾಯದವರು ಶಿರಂಗಾಲದಲ್ಲಿ ಅದ್ದೂರಿಯಾಗಿ ಜಯಂತೋತ್ಸವ ಆಚರಣೆ ನಡೆಸಿದರು.
ಇದರ ಅಂಗವಾಗಿ ಸಮುದಾಯದ ಮಹಿಳೆಯರು ಕಾವೇರಿ ನದಿಯಲ್ಲಿ ಗಂಗೆ ಪೂಜೆ ಮಾಡಿ ನಂತರ ಕಳಸವನ್ನು ಹೊತ್ತು ಗ್ರಾಮ ಪ್ರಮುಖ ಪೇಟೆ ಬೀದಿಯಲ್ಲಿ ಮೆರವಣಿಗೆ ಸಾಗಿ ಬಂದು ಕಾಳಿಕಂಭ ದೇವಾಲಯಲ್ಲಿ ಪೂಜೆ ಸಲ್ಲಿಸಿ, ನಂತರ ಉಮಾಮಹೇಶ್ವರ ದೇವಾಲಯದ ಕಳಸ ಪೂಜೆಯನ್ನು ನೆರವೇರಿಸಲಾಯಿತು.
ನಂತರ ನಡೆದ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಶಿರಂಗಾಲ ಗ್ರಾಮ ಪಂಚಾಯತಿ ಅಧ್ಯಕ್ಷೆ ಲತಾಬಾಯಿ ನೆರವೇರಿಸಿದರು. ನಂತರ ಮಾತಾಡುತ್ತಾ ಸಮುದಾಯದರು ಒಕ್ಕೂಟದ ಮೂಲಕ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಗ್ರಾಮಕ್ಕೆ ಮಾದರಿಯಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವಕರ್ಮ ಸೇವಾ ಸಮಿತಿಯ ಅಧ್ಯಕ್ಷ ಶ್ಯಾಮಸುಂದರ ವಹಿಸಿದರು. ಮುಖ್ಯ ಅತಿಥಿಗಳಾಗಿ ಮಂಟಿಗಮ್ಮ ದೇವಾಲಯ ಸಮಿತಿಯ ಅಧ್ಯಕ್ಷ ಎಸ್, ಎಸ್ ಚಂದ್ರಶೇಖರ್, ಕಾರ್ಯದರ್ಶಿ ಗಣೇಶ, ಕುಶಾಲನಗರ ವಿಶ್ವ ಕರ್ಮ ಸಮಾಜದ ಅಧ್ಯಕ್ಷ ಲಿಂಗಮೂರ್ತಿ, ಮಾನವ ಹಕ್ಕುಗಳ ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ಯ ರಾಜ್ಯ ಕಾರ್ಯದರ್ಶಿ ವಿ, ಕೃಷ್ಣ, ಮುಳ್ಳುಸೋಗೆ ಪ್ರಕಾಶ್, ಶಿರಂಗಾಲ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಬಸವರಾಜ್, ಸಮಾಜ ಪ್ರಮುಖರಾದ ಎಂ, ಎಸ್ ವಿಜಯಕುಮಾರ್, ಎಸ್ ಜೆ ಮಹಾದೇವ, ಎಸ್ ಸಿ, ಪ್ರಕಾಶ್, ಮಹೇಶ್, ಮಲೇಶ್, ಹರೀಶ್, ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷೆ ಪದ್ಮಮ್ಮ, ಶಿರಂಗಾಲ ಸೇವಾ ಸಮಿತಿಯ ಕಾರ್ಯದರ್ಶಿ ಪುರುಷೋತ್ತಮ, ಪಾಪಣ್ಣ ಸೇರಿದಂತೆ ಸಮಿತಿಯ ಸದಸ್ಯರು ಹಾಜರಿದ್ದರು.
ಇದೇ ಸಂದರ್ಭದಲ್ಲಿ ಸಮುದಾಯದ ಹಿರಿಯ ಗಣ್ಯರನ್ನು ಗೌರವಿಸಿ ಸನ್ಮಾನಿಸಲಾಯಿತು.
Back to top button
error: Content is protected !!