ಕುಶಾಲನಗರ, ಸೆ 17: ಗೌರಿ ಗಣೇಶೋತ್ಸವ ಹಾಗೂ ಈದ್ ಮಿಲಾದ್ ಹಬ್ಬದ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ಸರ್ವಧರ್ಮ ಮುಖಂಡರೊಂದಿಗೆ ಪೂರ್ವಭಾವಿ ಸಭೆ ನಡೆಯಿತು.
ಗಾಯತ್ರಿ ಸಭಾಂಗಣದಲ್ಲಿ
ಗೌರಿ ಗಣೇಶ ಪ್ರತಿಷ್ಠಾಪನಾ ಸಮಿತಿ ಪ್ರಮುಖರು ಹಾಗೂ ಈದ್ ಮಿಲಾದ್ ಆಚರಿಸುವ ಮಸೀದಿಗಳ ಪ್ರಮುಖರು ಅನುಸರಿಸಬೇಕಾದ ಇಲಾಖೆಯ ನಿಯಮಗಳ ಬಗ್ಗೆ ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ತಿಳಿಸಿದರು.
ಈ ಸಂದರ್ಭ ಮಾತನಾಡಿದ ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ, ಕುಶಾಲನಗರ ನಗರ ಹಾಗೂ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ 90 ಕ್ಕೂ ಅಧಿಕ ಸ್ಥಳಗಳಲ್ಲಿ ಗಣಪತಿ ಪ್ರತಿಷ್ಠಾಪನೆ ನಡೆಯುತ್ತಿದೆ. ಗಣೇಶೋತ್ಸವ, ಈದ್ ಮಿಲಾದ್ ಆಚರಣೆಗಳು ಎಂದಿನಂತೆ ನಡೆಸುವಲ್ಲಿ ಆಕ್ಷೇಪವಿಲ್ಲ. ಉತ್ಸವಗಳಿಗೆ
ಪೊಲೀಸ್ ಇಲಾಖೆ ಅನಗತ್ಯ ನಿರ್ಭಂದ ಹೇರುತ್ತಿದ್ದಾರೆ ಎಂಬ ಆರೋಪಗಳು ಸಮಂಜಸವಲ್ಲ. ಎಲ್ಲಾ ಆಚರಣೆ, ಉತ್ಸವಗಳು ಶಾಂತಿಯುತವಾಗಿ ನಡೆಯಬೇಕು ಎಂಬುದು ಇಲಾಖೆಯ ಉದ್ದೇಶ.
ಉತ್ಸವದ ಮೆರವಣಿಗೆಗೆ ನಿರ್ಬಂಧವಿಲ್ಲ. ಆದರೆ ರಾತ್ರಿ 10 ಗಂಟೆ ನಂತರ ಮೈಕ್ ಬಳಕೆಗೆ ಅನುಮತಿಯಿಲ್ಲ.
ಉತ್ಸವ ಸಂದರ್ಭ ಅನಾಹುತಗಳು, ಅಹಿತಕರ ಘಟನೆಗಳು ಜರುಗದಂತೆ ಎಚ್ಚರವಹಿಸಲು ಇಲಾಖೆ ಮುಂದಾಗಿದೆ. ಕಿಡಿಗೇಡಿಗಳ ಕೃತ್ಯಗಳಿಂದ ಶಾಂತಿ ಭಂಗವಾಗದಂತೆ ಎಚ್ಚರವಹಿಸಬೇಕಿದೆ.
ನಿಯಮ ಪಾಲಿಸದ ಆಯೋಜಕರ ವಿರುದ್ದ ಕಾನೂನು ಕ್ರಮವಹಿಸಲಾಗುವುದು ಎಂದರು.
ಈ ಸಂದರ್ಭ ಗ್ರಾಮಾಂತರ ವೃತ್ತ ನಿರೀಕ್ಷಕ ರಾಜೇಶ್ ಕೋಟ್ಯಾನ್, ನಗರ ಠಾಣಾ ವೃತ್ತನಿರೀಕ್ಷಕ ಯಶವಂತ್,
ಠಾಣಾಧಿಕಾರಿಗಳಾದ ಚಂದ್ರಶೇಖರ್, ಗೀತಾ, ಭಾರತಿ, ಕಾಶಿನಾಥ್ ಬಗಲಿ ಇದ್ದರು.
Back to top button
error: Content is protected !!