ಕುಶಾಲನಗರದ ಪಾರಸ್ ಪೃಥ್ವಿ ಜುವೆಲ್ಲರ್ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಶ್ರೀ ಕೃಷ್ಣ ಛದ್ಮವೇಶ ಸ್ಪರ್ಧಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಜುವೆಲ್ಲರ್ ಆವರಣದಲ್ಲಿ ನಡೆದ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಯಮಿ ದೀಪ್ತಿ ಚೇತನ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಗುಣಮಟ್ಟದ ಆಭರಣಗಳಿಗೆ ಹೆಸರುವಾಸಿಯಾದ ಪೃಥ್ವಿ ಜುವೆಲ್ಲರ್ ನಲ್ಲಿರುವ ಸ್ಕೀಂ ಗಳ ಸದುಪಯೋಗಪಡೆದು ಚಿನ್ನ ಖರೀದಿಸಲು ಉತ್ತಮ ಅವಜಾಶವಿದೆ ಎಂದರು.
ಮತ್ತೋರ್ವ ಮುಖ್ಯ ಅತಿಥಿ ಉಪನ್ಯಾಸಕ ಗೋಪಾಲ್ ಮಾತನಾಡಿದರು.
ಕಾರ್ಯಕ್ರಮದಲ್ಲಿ 50 ಕ್ಕೂ ಅಧಿಕ ಪುಟಾಣಿಗಳು ಕೃಷ್ಣ ವೇಷ ಧರಿಸಿ ಗಮನ ಸೆಳೆದರು. ಈ ಪೈಕಿ ಕೆ.ಎಚ್.ಪುನರ್ವಿ ಪ್ರಥಮ, ತುಶಾಂತ್ ದ್ವಿತೀಯ, ಕುಸಮಶ್ರೀ ತೃತೀಯ ಬಹುಮಾನ ಪಡೆದರು.
ಕಾರ್ಯಕ್ರಮದಲ್ಲಿ
ಉಪನ್ಯಾಸಕಿ ನಯನ ಹರಿಶ್ಚಂದ್ರ, ಜುವೆಲ್ಲರಿ ಕುಶಾಲನಗರ ಶಾಖೆ ವ್ಯವಸ್ಥಾಪಕ ಪೂಣಚ್ಚ, ಸಿಬ್ಬಂದಿಗಳಾದ ನೇತ್ರಾ, ತ್ರಿವೇಣಿ, ಮುಜೀಬ್, ಪಲ್ಲವಿ, ರೆಹಮತ್ ಅಲಿ, ಪವನ್, ಪರ್ವಿನ್, ಪ್ರಜ್ವಲ್ ಇದ್ದರು.
Back to top button
error: Content is protected !!