ಕೊಡಗು ವಿವಿ: ಸ್ನಾತಕೋತ್ತರ ಪದವಿ ಕೋರ್ಸ್‌ಗಳಿಗೆ ಪ್ರವೇಶಾತಿ ಪ್ರಾರಂಭ

ಕುಶಾಲನಗರ, ಆ 30: ಕೊಡಗು ವಿಶ್ವವಿದ್ಯಾಲಯದ ಜ್ಞಾನಕಾವೇರಿ ಅವರಣ ಮತ್ತು ಕೊಡಗು ವಿಶ್ವವಿದ್ಯಾಲಯದಲ್ಲಿ ಸಂಯೋಜನೆಗೊಳಗೊಂಡ ಘಟಕ ಕಾಲೇಜು, ಖಾಸಗಿ ಅನುದಾನಿತ ಹಾಗೂ ಅನುದಾನೇತರ ಮಹಾವಿದ್ಯಾಲಯಗಳಲ್ಲಿ 2023-24 ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಪದವಿ, ಎಂ.ಎಸ್ಸಿ, ಎಂ.ಎ, ಎಂ.ಕಾಂ, ಎಂಎಸ್ ಡಬ್ಲ್ಯೂ, ಎಂಬಿಎ (TTM) ಪಿಜಿ ಡಿಪ್ಲೋಮಾ ಹಾಗೂ ಸರ್ಟಿಫಿಕೇಟ್ ಕೋರ್ಸ್‌ಗಳಿಗೆ PG-CBCS (ಮಾತೃ ವಿಶ್ವವಿದ್ಯಾಯವಾದ ಮಂಗಳೂರು ವಿಶ್ವವಿದ್ಯಾನಿಲಯದ ನಿಯಮಾವಳಿಗಳನ್ವಯ) ಅರ್ಹತೆಯ ಪ್ರಕಾರ ಅರ್ಜಿಗಳನ್ನು ಆಹ್ವಾನಿಸಿ, ಪ್ರವೇಶಾತಿಯನ್ನು ಕೈಗೊಳ್ಳಲು ಅಧಿಸೂಚನೆ ಹೊರಡಿಸಲಾಗಿದೆ.
1. ಪ್ರವೇಶಾತಿ ಪ್ರಾರಂಭ ದಿನಾಂಕ: 23.08.2023
2. ದಂಡಶುಲ್ಕ ರಹಿತ ಕೊನೆಯ ದಿನಾಂಕ: 10.09.2023
3. ಪ್ರವೇಶಾತಿ ದಂಡರ ಸಹಿತ ಕೊನೆಯ ದಿನಾಂಕ: 15.09.2023
ಮೇಲಿನ ಪ್ರವೇಶಾತಿ ವಿವರಗಳನ್ನು ಹಾಗೂ ದಿನಾಂಕಗಳನ್ನು ಘಟಕ ಕಾಲೇಜು ಹಾಗೂ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರುಗಳು ತಮ್ಮ ಕಾಲೇಜಿನ ವೆಬ್ ಸೈಟ್ ಮತ್ತು ಸೂಚನಾ ಫಲಕದಲ್ಲಿ ಜೊತೆಗೆ ಘಟಕ ಹಾಗೂ ಕಾಲೇಜಿನ ಪಾಶುಪಾಲರು, ವಿದ್ಯಾರ್ಥಿಗಳು ಹಾಗೂ ಪೋಷಕರ ಗಮನಕ್ಕೆ ತರಲು ಸೂಚಿಸಲಾಗಿದೆ ಎಂದು ಕೊಡಗು ವಿಶ್ವವಿದ್ಯಾಲಯದ
ಕುಲಸಚಿವರು (ಪ್ರಭಾರ) ಡಾ. ಸೀನಪ್ಪ ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ: 88617 74778 website: kuk.Karnataka.gov.in
#ಸ್ನಾತಕೋತ್ತರ ಪದವಿಗಳಿಗೆ ಪ್ರವೇಶ ಪ್ರಾರಂಭ- 2023-24
ಯೂನಿವರ್ಸಿಟಿ ಕ್ಯಾಂಪಸ್‌ನಲ್ಲಿ ನೀಡಲಾಗುವ ಕೋರ್ಸ್‌ಗಳು:
ಎಂ.ಎಸ್ಸಿ: ಜೀವರಸಾಯನಶಾಸ್ತ್ರ, ಸೂಕ್ಷ್ಮಾಣು ಜೀವವಿಜ್ಞಾನ, ಯೋಗ ವಿಜ್ಞಾನ, ರಸಾಯನಶಾಸ್ತ್ರ, ಗಣಕ ಯಂತ್ರ ವಿಜ್ಞಾನ, ಸಸ್ಯಶಾಸ್ತ್ರ, ಪರಿಸರ ವಿಜ್ಞಾನ
ಎಂಕಾಂ ಮತ್ತು ಎಂಎಸ್‌ಡಬ್ಲ್ಯೂ
ಎಂ.ಎ.: ಕನ್ನಡ, ಕೊಡವ, ರಾಜ್ಯಶಾಸ್ತ್ರ, ಇತಿಹಾಸ, ಪತ್ರಿಕೋದ್ಯಮ ಮತ್ತು ಸಮೂಹ ಮಾಧ್ಯಮ
ಹಾಗೂ
ಪಿಜಿ ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸ್: ಯೋಗ ವಿಜ್ಞಾನ ಮತ್ತು ಕೊಡವ ಅಧ್ಯಯನ
#FMKMCC ಮಡಿಕೇರಿಯಲ್ಲಿ ನೀಡಲಾಗುವ ಕೋರ್ಸ್‌ಗಳು:
ಎಂಎಸ್ಸಿ: ಭೌತಶಾಸ್ತ್ರ
ಎಂ.ಕಾಂ ಮತ್ತು ಎಂಬಿಎ (TTM)
ಎಂ.ಎ.: ಕೊಡವ, ಅರ್ಥಶಾಸ್ತ್ರ ಹಾಗೂ ಇಂಗ್ಲೀಷ್
ಪಿಜಿ ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸ್: ಯೋಗ ವಿಜ್ಞಾನ ಮತ್ತು ಕೊಡವ ಅಧ್ಯಯನ
ಜ್ಞಾನಕಾವೇರಿ ಕ್ಯಾಂಪಸ್ ನಲ್ಲಿರುವ ಸೌಲಭ್ಯಗಳು:
* Wi-Fi ಮತ್ತು ಇಂಟರ್ನೆಟ್
* ಪುರುಷ ಮತ್ತು ಮಹಿಳಾ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ
* ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು
* ಉತ್ತಮ ಗ್ರಂಥಾಲಯ
* ಶುದ್ಧ ಕುಡಿಯುವ ನೀರು
* CCTV ಮತ್ತು 24/7 ಭದ್ರತೆ
* ಕೌಶಲ್ಯ ಅಭಿವೃದ್ಧಿ ಕೋಶ
* ತರಬೇತಿ ಮತ್ತು ಉದ್ಯೋಗ ಕೋಶ
ಹೆಚ್ಚಿನ ಮಾಹಿತಿಗಾಗಿ:
ಜ್ಞಾನ ಕಾವೇರಿ ಕ್ಯಾಂಪಸ್, ಚಿಕ್ಕ ಅಳುವಾರ, ಕುಶಾಲನಗರ ತಾಲ್ಲೂಕು, ಕೊಡಗು ಜಿಲ್ಲೆ, ಪಿನ್‌ಕೋಡ್-571232
ಕೊಡಗು ವಿಶ್ವವಿದ್ಯಾನಿಲಯ: 8861774778 | FMKMCC ಮಡಿಕೇರಿ: 8088272689
ವೆಬ್‌ಸೈಟ್: Kuk.karnataka.gov.in/
ಇಮೇಲ್: Kodaguuniversityadmission@gmail.com