ಕುಶಾಲನಗರ ಆ 30: ಕೂಡಿಗೆಯ ಸರಕಾರಿ ಕ್ರೀಡಾ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಕ್ರೀಡಾ ದಿನ ಆಚರಣೆ ನಡೆಯಿತು.
ಧ್ಯಾನ ಚಂದ್ ಅವರ ಹುಟ್ಟು ಹಬ್ಬವನ್ನು ಕ್ರೀಡಾ ದಿನವಾಗಿ ಆಚರಣೆ ಮಾಡುತ್ತಿದ್ದು, ಶಿಕ್ಷಣದ ಜೊತೆಗೆ ಕ್ರೀಡೆಯನ್ನು ಸಮಾನವಾಗಿ ತೆಗೆದುಕೊಂಡು ಹೋದಾಗ ವಿದ್ಯಾರ್ಥಿಗಳು ಹಾಕಿಕೊಂಡ ಗುರಿಯನ್ನು ಸಾಧಿಸಲು ಸಾಧ್ಯವಾಗುವುದು ಎಂದು ಕ್ರೀಡಾ ಶಾಲೆಯ ಮುಖ್ಯೋಪಾಧ್ಯಾಯ ದೇವ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಮೇಜರ್ ದ್ಯಾನ್ ಚಂದ್ ಅವರು ಮಿಲಿಟರಿ ಸೇವೆಯಲ್ಲಿ ಸೇರಿ ಚಂದ್ರನ ಬೆಳಕಿನಲ್ಲಿ ಹಾಕಿ ಅಭ್ಯಾಸ ಮಾಡಿ, ಒಲಿಂಪಿಕ್ ನ ಹಾಕಿ ಪಂದ್ಯದಲ್ಲಿ ಸತತವಾಗಿ ಮೂರು ಬಾರಿ ಗೆಲುವು ಸಾಧಿಸಿ ಚಿನ್ನವನ್ನು ಸಂಪಾದಿಸಿರುತ್ತಾರೆ. ಅವರ ಆದರ್ಶ ಗುಣಗಳನ್ನು ಈಗಿನ ಕ್ರೀಡಾ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಕ್ರೀಡಾ ಕೀರ್ತಿಯನ್ನು ಹೆಚ್ಚಿಸಬೇಕು ಎಂದರು.
ಈ ಸಂದರ್ಭ ಶಾಲೆಯ ಸಹ ಶಿಕ್ಷಕ ಪ್ರೇಮ ನಾಥನ್, ಎಂ.ಡಿ. ಮುರುಳಿ, ಎನ್.ಕೆ.ರಜನಿ, ಪಿ. ಆರ್. ಅಶ್ವಿನಿ, ಬಿ.ಕೆ.ಮಧುರ, ಕ್ಷೇಮಪಾಲಕಿ ಜಿ. ಎಸ್.ಸವಿತಾ, ಹಾಕಿ ತರಬೇತುದಾರ ಬಿ.ಎಸ್.ವೆಂಕಟೇಶ್, ಬಿ.ಜಿ. ಮಂಜುನಾಥ್, ಎ.ಸಿ. ದಿನಮಣಿ, ಜಿ.ಸುರೇಶ್, ಎಂ.ಎಸ್ ಮೋಹನ್, ಹೆಚ್.ಎನ್. ಹರ್ಷ ಸೇರಿದಂತೆ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಹಾಜರಿದ್ದರು.
30 ಕೆಯುಎಸ್ 07 ಚಿತ್ರದಲ್ಲಿ ಕೂಡಿಗೆ ಕ್ರೀಡಾ ಶಾಲೆಯಲ್ಲಿ ರಾಷ್ಟ್ರೀಯ ಕ್ರೀಡಾ ದಿನ ಆಚರಣೆ ಮಾಡಲಾಯಿತು.
Back to top button
error: Content is protected !!