ಕಾರ್ಯಕ್ರಮ

ಬಿಇಓ ಕೆ.ವಿ.ಸುರೇಶ್ ಅವರಿಗೆ ಶಿಕ್ಷಕರಿಂದ ಆತ್ಮೀಯ ಬೀಳ್ಕೊಡುಗೆ

ಕುಶಾಲನಗರ, ಆ 26: ಮೈಸೂರು ನಗರದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಶಿಕ್ಷಣ ಸಂಸ್ಥೆ ( ಡಯಟ್ ) ಯ ಹಿರಿಯ ಉಪನ್ಯಾಸಕ( ಶಿಕ್ಷಣಾಧಿಕಾರಿ ತತ್ಸಮಾನ ಹುದ್ದೆ) ರಾಗಿ ವರ್ಗಾವಣೆಗೊಂಡ ಸೋಮವಾರಪೇಟೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ( ಬಿಇಓ ) ಕೆ.ವಿ.ಸುರೇಶ್ ಅವರಿಗೆ ತಾಲ್ಲೂಕು ವಿವಿಧ ಶಿಕ್ಷಕರ‌ ಸಂಘಟನೆಗಳು ಹಾಗೂ
ಬಿಇಓ ಕಛೇರಿಯ ಸಿಬ್ಬಂದಿ ವತಿಯಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು.
ಪ್ರೌಢಶಾಲಾ ಸಹ ಶಿಕ್ಷಕರ ಜಿಲ್ಲಾ ಹಾಗೂ ತಾಲ್ಲೂಕು ಘಟಕ, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸೇರಿದಂತೆ ಮುಖ್ಯ ಶಿಕ್ಷಕರು, ಶಿಕ್ಷಕರು ಹಾಗೂ ಕಛೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದ ವತಿಯಿಂದ ಬಿಇಓ ಕಛೇರಿಯಲ್ಲಿ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ಬಿಇಓ ಸುರೇಶ್ ಅವರನ್ನು ಶಾಲು ಹೊದಿಸಿ ಫಲತಾಂಬುಲ ನೀಡಿ ಸನ್ಮಾನಿಸಲಾಯಿತು.
ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ದಶಕಗಳ ಕಾಲ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ವಿವಿಧ ಹಂತದ ಅಧಿಕಾರ
ಹುದ್ದೆಯಲ್ಲಿ
ಉತ್ತಮವಾಗಿ ಸೇವೆ ಸಲ್ಲಿಸುವ ಮೂಲಕ ಶೈಕ್ಷಣಿಕ ಕ್ಷೇತ್ರದ ಪ್ರಗತಿಯೊಂದಿಗೆ ಸರಳ ಸಜ್ಜನಿಕೆಯಿಂದ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದುವ ಮೂಲಕ ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾದ ಕೆ.ವಿ.ಸುರೇಶ್ ಅವರ ಸೇವಾ ಕಾರ್ಯವನ್ನು ಈ ಸಂದರ್ಭದಲ್ಲಿ ಪ್ರಶಂಸಿಸಲಾಯಿತು.
ಸನ್ಮಾನಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಬಿಇಓ ಕೆ.ವಿ.ಸುರೇಶ್, ಭವಿಷ್ಯದ ಮಾನವ ಸಂಪನ್ಮೂಲ ಅಭಿವೃದ್ಧಿ ಹಾಗೂ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಎಲ್ಲರ ಸಹಭಾಗಿತ್ವ ಅಗತ್ಯವಿದೆ. ಪ್ರತಿಯೊಬ್ಬರೂ ಆಡಳಿತದ ಹಂತದಲ್ಲಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಪರಸ್ಪರ
ಸಹಕಾರ ಮನೋಭಾವ ಮತ್ತು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿದರೆ ನಿಗದಿತ ಜವಾಬ್ದಾರಿ ಮತ್ತು ನಿರ್ವಹಣೆ ಮೂಲಕ ನಿರೀಕ್ಷಿತ ಗುರಿ ಹಾಗೂ ಫಲಪ್ರದ ಸಾಧನೆ ಮಾಡಲು ಸಾಧ್ಯ ಎಂದರು.
ತಾಲ್ಲೂಕಿನ ಶಿಕ್ಷಣ ಇಲಾಖೆಯ ಎಲ್ಲಾ ಅಧಿಕಾರಿಗಳು, ನೌಕರರು,ಶಿಕ್ಷಕರ ಸಂಘಟನೆಗಳು ಹಾಗೂ ಶಿಕ್ಷಕರು ತಮಗೆ ಉತ್ತಮ ಸಹಕಾರ ನೀಡುವ ಮೂಲಕ ಇಲಾಖೆಯ ಪ್ರಗತಿಗೆ ಶ್ರಮಿಸಲು ಕಾರಣರಾಗಿರುವುದಕ್ಕೆ ಸುರೇಶ್ ಕೃತಜ್ಞತೆ ಸಲ್ಲಿಸಿದರು.
ಶಿಕ್ಷಕರು
ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಶೈಕ್ಷಣಿಕ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ.ಸೋಮಶೇಖರ್ ಮಾತನಾಡಿ, ಬಿಇಓ ಕೆ.ವಿ.ಸುರೇಶ್ ಉತ್ತಮ ಸೇವಾ ಕಾರ್ಯ ನಿರ್ವಹಣೆಯಿಂದ
ಉತ್ತಮ ಅಧಿಕಾರಿಯಾಗಿ ಸೇವೆ ಸಲ್ಲಿಸುವ ಮೂಲಕ ಶಿಕ್ಷಕರೊಂದಿಗೆ ಉತ್ತಮ ಬಾಂಧವ್ಯ ಹೊಂದುವ ಮೂಲಕ ಜನಾನುರಾಗಿಯಾಗಿ
ಎಲ್ಲಾ ಶಿಕ್ಷಕರ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದರು.
ಪ್ರಭಾರ ಬಿಇಓ ಎಂ.ವಿ.ಮಂಜೇಶ್, ಬಿ ಆರ್ ಸಿ ಜಿ.ಎಂ.ಹೇಮಂತ್ ಮಾತನಾಡಿ, ಕ್ರಿಯಾಶೀಲ ವ್ಯಕ್ತಿತ್ವ ಹೊಂದಿರುವ ಸುರೇಶ್ ಅವರು ಶಿಕ್ಷಕರಿಗೆ ಉತ್ತಮ ಮಾರ್ಗದರ್ಶನ ನೀಡುವ ಮೂಲಕ ಶೈಕ್ಷಣಿಕ ಕ್ಷೇತ್ರದ ಪ್ರಗತಿಗೆ ಶ್ರಮಿಸಿದ್ದಾರೆ ಎಂದರು.
ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ಬಸವನಹಳ್ಳಿ
ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾಗಿ ಜಿಲ್ಲೆಗೆ ಆಗಮಿಸಿದ ಸುರೇಶ್ ರವರು , ಮೊರಾರ್ಜಿ ಶಾಲೆಯ ಸರ್ವಾಂಗೀಣ ಪ್ರಗತಿಗೆ ಶ್ರಮಿಸುವ ಮೂಲಕ ಪೋಷಕರು, ವಿದ್ಯಾರ್ಥಿಗಳು ಮತ್ತು ಸಮುದಾಯದ ಪ್ರೀತಿಗೆ ಪಾತ್ರರಾಗಿ ‘ಮೊರಾರ್ಜಿ ಪ್ರಿನ್ಸಿಪಾಲ್ ಸುರೇಶ್ ಸರ್’ ಎಂಬ ಹೆಸರಿನ ಖ್ಯಾತಿಗೆ ಭಾಜನರಾಗಿರುವುದು ಶಿಕ್ಷಕರ ಸೇವಾ ಕಾರ್ಯಕ್ಕೆ ಪ್ರೇರಣೆಯಾಗಿದೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಸಹ ಕಾರ್ಯದರ್ಶಿ ಎಚ್.ಎಸ್.ಚೇತನ್,
ತಾಲ್ಲೂಕು ಘಟಕದ
ಅಧ್ಯಕ್ಷ ಟಿ.ಕೆ.ಬಸವರಾಜ್,
ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಎಚ್.ಜಿ.ಕುಮಾರ್, ಸಂಘಟನಾ ಕಾರ್ಯದರ್ಶಿ ದಯಾನಂದ ಪ್ರಕಾಶ್, ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಆರ್.ರತ್ನಕುಮಾರ್,
ಕಾರ್ಯದರ್ಶಿ
ಟಿ.ವಿ.ಶೈಲಾ, ಪದಾಧಿಕಾರಿ ಯಶವಂತ್,
ಬಿಇಓ ಕಛೇರಿಯ ಪತ್ರಾಂಕಿತ ವ್ಯವಸ್ಥಾಪಕ ಎಂ.ಆರ್.ಕೀರ್ತಿ, ಮೇಲ್ವಿಚಾರಕ ಸಿ.ಪಿ.ದಾಮೋದರ್,
ತಾಲ್ಲೂಕು ಬೋಧಕೇತರ ನೌಕರರ ಸಂಘದ ಅಧ್ಯಕ್ಷ ಎಚ್.ಆರ್.ಸುರೇಶ್,
ಪದಾಧಿಕಾರಿಗಳಾದ ವಿ.ಜಿ.ದಿನೇಶ್, ಎಚ್.ಟಿ.ರಾಜೇಶ್, ಟಿ.ಬಿ.ಚಿದಾನಂದ,ಮೋಹನ್ ದಾಸ್,
ಇತರ ಪದಾಧಿಕಾರಿಗಳು ಇದ್ದರು., ಕಛೇರಿಯ ಪ್ರಥಮ ದರ್ಜೆ ಸಹಾಯಕ
ಮೋಹನ್ ದಾಸ್ ಕಾರ್ಯಕ್ರಮ ನಿರ್ವಹಿಸಿದರು.
—–+————–
*ಸರಳ ವ್ಯಕ್ತಿತ್ವದ ಅಧಿಕಾರಿ ಕೆ.ವಿ.ಸುರೇಶ್ ಕುರಿತ ವೃತ್ತಿ ಜೀವನ* :
ಸರಳ ವ್ಯಕ್ತಿತ್ವ ಮತ್ತು ಸ್ನೇಹಪರತೆ ಹಾಗೂ ಸಜ್ಜನಿಕೆ ಮೈಗೂಢಿಸಿಕೊಂಡಿರುವ‌ ಶ್ರೀಯುತ ಕೆ.ವಿ.ಸುರೇಶ್ ಅವರ
ಯೋಚನೆ ಮತ್ತು ಯೋಜನೆಯನ್ನು ಪ್ರತಿಯೊಂದರಲ್ಲೂ ಶಿಸ್ತುಬದ್ಧವಾಗಿ ಅಳವಡಿಸಿ ಕರ್ತವ್ಯ ನಿರ್ವಹಿಸಿದ್ದು, ಎಲ್ಲಾ ಅಧಿಕಾರಿ ಮತ್ತು ಶಿಕ್ಷಕರು, ಪೋಷಕರು ಹಾಗೂ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.
ಕೊಡಗು ಜಿಲ್ಲೆಗೆ 2002 ರಲ್ಲಿ *ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾಗಿ ಆಗಮಿಸಿದ ಶ್ರೀ ಕೆ.ವಿ.ಸುರೇಶ್, ಆ ಶಾಲೆಯ ಸರ್ವಾಂಗೀಣ ಪ್ರಗತಿಗೆ ಹಾಗೂ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅವಿರತ ಶ್ರಮ ವಹಿಸಿ ಆ ಮೊರಾರ್ಜಿ ಶಾಲೆಯನ್ನು ರಾಜ್ಯಕ್ಕೆ ಮಾದರಿ ಶಾಲೆಯನ್ನಾಗಿ ರೂಪಿಸುವ ಮೂಲಕ ಮೊರಾರ್ಜಿ ಶಾಲೆಯ ಪ್ರಿನ್ಸಿಪಾಲ್ ಸುರೇಶ್ ಎಂಬ ಹೆಗ್ಗಳಿಕೆ ಪಾತ್ರರಾದರು*.
ಆ ಶಾಲೆಯಲ್ಲಿನ ಕಟ್ಟಡದ ಭೌತಿಕ ಚಿತ್ರಣವನ್ನೇ ಬದಲಾಯಿಸಿ ಸುಸಜ್ಜಿತ ಕಟ್ಟಡ ನಿರ್ಮಾಣ ಹಾಗೂ ಶಾಲೆಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶ ಗಳಿಸಲು
ಅಹರ್ನಿಶಿ ಶ್ರಮಿಸಿರುವುದು ಅನುಕರಣೀಯವಾದುದು. ಅಲ್ಲಿಂದ 2011 ರಲ್ಲಿ ಪ್ರಾಂಶುಪಾಲರ ಹುದ್ದೆಯಿಂದ ಮಡಿಕೇರಿಯ ಡಿಡಿಪಿಐ ಕಛೇರಿಗೆ ಶಿಕ್ಷಣಾಧಿಕಾರಿಯಾಗಿ
ಮುಂಬಡ್ತಿ ಹೊಂದಿ 2 ವರ್ಷಗಳ ಕಾಲ ಸೇವೆ ಸಲ್ಲಿಸಿದ
ನಂತರ 2013 ರಲ್ಲಿ ಕೊಡಗು ಜಿಲ್ಲೆಯ ಬಿಸಿಎಂ ಇಲಾಖೆಯ ಜಿಲ್ಲಾ ಅಧಿಕಾರಿಯಾಗಿ ನಾಲ್ಕೂವರೆ ವರ್ಷಗಳ ಕಾಲ ಸೇವೆ ಸಲ್ಲಿಸಿ 2018 ರ ಮಾರ್ಚ್ ನಲ್ಲಿ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಬಿಇಓ ಆಗಿ ವರ್ಗಾವಣೆ ಹೊಂದಿದರು. ನಂತರ 2018 ರ ನವೆಂಬರ್ ನಲ್ಲಿ ಮರಳಿ *ಕೊಡಗು ಜಿಲ್ಲೆಯ ಕೂಡಿಗೆ ಡಯಟ್ ಸಂಸ್ಥೆಯ ಹಿರಿಯ ಉಪನ್ಯಾಸಕರಾಗಿ ನೇಮಕಗೊಂಡು* ಸೇವೆ ಸಲ್ಲಿಸಿದರು. ಇದೇ ವೇಳೆ ಕೆಲವು ತಿಂಗಳ ಕಾಲ ಡಯಟ್ ನ ಪ್ರಭಾರ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ 2022 ರ ಮಾರ್ಚ್ 9 ಕ್ಕೆ ಕೂಡಿಗೆ ಡಯಟ್ ನಿಂದ ಸೋಮವಾರಪೇಟೆ ತಾಲ್ಲೂಕಿನ ಬಿಇಓ ಆಗಿ ನೇಮಕಗೊಂಡು ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದಾರೆ.
ಇದೀಗ ಇಲ್ಲಿಂದ ಮೈಸೂರಿನ ಡಯಟ್ ಗೆ ಹಿರಿಯ ಉಪನ್ಯಾಸಕರಾಗಿ ವರ್ಗಾವಣೆಗೊಂಡಿರುವ ಶ್ರೀಯುತ ಸುರೇಶ್ ಸರ್ ಅವರಿಗೆ ತಾಲ್ಲೂಕಿನ ಎಲ್ಲಾ ಶಿಕ್ಷಕರ ಪರವಾಗಿ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಲಾಯಿತು.
ಕೊಡಗು ಜಿಲ್ಲೆಯಲ್ಲಿ ಎರಡು ದಶಕಗಳ ಕಾಲ ಉತ್ತಮ ಸೇವೆ ಸಲ್ಲಿಸುವ ಮೂಲಕ ಅವರ ಸೇವಾನಿಷ್ಠೆ, ಕಾರ್ಯತತ್ಪರತೆ, ಎಲ್ಲರೊಂದಿಗೆ ಬೆರೆಯುವ ಸ್ನೇಹಜೀವಿಯಾಗಿರುವ ಶ್ರೀ ಸುರೇಶ್ ಉತ್ತಮ ವಾಗ್ಮಿ ಕೂಡ ಆಗಿದ್ದಾರೆ.
*ವೃತ್ತಿ ಜೀವನ ಆರಂಭ*: ಮೂಲತಃ ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕಿನ ಕಂಚಗಾರಕೊಪ್ಪಲು ಗ್ರಾಮದವರಾದ ಕೆ.ವಿ. ಸುರೇಶ್
1999 ರಲ್ಲಿ ಕೆ.ಇ.ಎಸ್.ಪರೀಕ್ಷೆ ತೇರ್ಗಡೆ ಹೊಂದಿ ತಾವು ಓದಿದ ಕೆ.ಆರ್.ನಗರ ತಾಲ್ಲೂಕಿನ ಮಾವತ್ತೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ವೃತ್ತಿ ಜೀವನ ಆರಂಭಿಸಿದ ಶ್ರೀಯುತ ಸುರೇಶ್ ಅವರು ಆ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಯಲ್ಲಿ ಉತ್ತಮ ಫಲಿತಾಂಶದೊಂದಿಗೆ ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದಾರೆ.
ಸದರಿ ಶಿಕ್ಷಣಾಧಿಕಾರಿ ಸುರೇಶ್ ಅವರಿಗೆ ತಾಲ್ಲೂಕಿನ ಶಿಕ್ಷಕರು ಅಭಿನಂದಿಸಿ ಆತ್ಮೀಯ ‌ಬೀಳ್ಕೊಡುಗೆ ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!