ಪ್ರಕಟಣೆ

ತಂಬಾಕು ಉತ್ಪಾದನೆಯಲ್ಲಿ 10 ಮಿಲಿಯನ್ ಹೆಚ್ಚಳ: ಬುಲ್ಲಿ ಸುಬ್ಬರಾವ್

ಪಿರಿಯಾಪಟ್ಟಣ, ಸೆ 13: ಪ್ರಸಕ್ತ ಸಾಲಿನಲ್ಲಿ ಪ್ರಾಕೃತಿಕ ವಿಕೋಪದ ನಡುವೆಯೂ ನಿರೀಕ್ಷೆಗೂ ಮೀರಿ 95.77 ಮಿಲಿಯನ್ ತಂಬಾಕು ಉತ್ಪಾದನೆ ಯಾಗಿದ್ದು ಯಾವುದೇ ಕಾರಣಕ್ಕೂ ರೈತರು ಕಾಳಸಂತೆಯಲ್ಲಿ ತಂಬಾಕು ಮಾರಾಟ ಮಾಡಬಾರದು ಎಂದು ತಂಬಾಕು ಮಂಡಳಿ ಪ್ರಾದೇಶಿಕ ವ್ಯವಸ್ಥಾಪಕ ಬುಲ್ಲಿ ಸುಬ್ಬರಾವ್ ರೈತರಲ್ಲಿ ಮನವಿ ಮಾಡಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಬಾರಿ ರಾಜ್ಯದಲ್ಲಿ 95.77 ಮಿಲಿಯನ್ ತಂಬಾಕು ಉತ್ಪಾದನೆ ಹಾಗೂ ಶೇ.5.8 ಹೆಕ್ಟೇರ್ ಪ್ರದೇಶ ಹೆಚ್ಚಳವಾಗಿದೆ. ಕಳೆದ ಸಾಲಿನಲ್ಲಿ ರಾಜ್ಯದಲ್ಲಿ ಎಫ್ ಸಿ ವಿ ತಂಬಾಕು 61 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿತ್ತು, ಪ್ರಸಕ್ತ ಸಾಲಿನಲ್ಲಿ 69 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತಂಬಾಕು ಬೆಳೆಯಲಾಗಿದ್ದು, ಬೆಳೆ ಪ್ರದೇಶ 8.58 ರಷ್ಟು ಏರಿಕೆಯಾಗಿದೆ. ಈ ಬಾರಿ ಪ್ರಾಕೃತಿಕ ವಿಕೋಪ ಏರುಪೇರು, ಅಧಿಕ ಮಳೆ ನಡುವೆಯೂ ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿದ್ದ ನಿಗದಿಗಿಂತ ಹೆಚ್ಚು 10 ಮಿಲಿಯನ್ ಕೆಜಿ ತಂಬಾಕು ಉತ್ಪಾದನೆಯಾಗಿದೆ. ಈ ಬಗ್ಗೆ ರಾಜ್ಯದಲ್ಲಿ ಬೆಳೆ ಸರ್ವ ನಡೆಸಿದ್ದು ಸ್ವಲ್ಪ ಹೆಚ್ಚು ಕಡಿಮೆ ಕೇಂದ್ರ ಸರ್ಕಾರ ನೀಡಿದ 10 ಕೋಟಿ ಕೆ.ಜಿ ಹಂತ ತಲುಪುವುದು ರಲ್ಲಿ ಯಾವುದೇ ಸಂಸಯವಿಲ್ಲ ಎಂದಿದ್ದಾರೆ.
ಕಾಳಸಂತೆಯಲ್ಲಿ ಮಾರಾಟ ಮಾಡಬೇಡಿ:
ರೈತರು ಬೆಳೆದಿರುವ ತಂಬಾಕಿಗೆ ಉತ್ತಮ ಧರ ನೀಡಿ ಖರೀದಿಸಲು ಮಂಡಳಿ ಸಿದ್ದವಿದ್ದು ಯಾವುದೇ ಕಾರಣಕ್ಕೂ ಕಾಳ ಸಂತೆಯಲ್ಲಿ ಮಧ್ಯವರ್ತಿಗಳಿಗೆ ತಂಬಾಕು ಮಾರಾಟ ಮಾಡಬಾರದು ಉತ್ತಮ ಗುಣಮಟ್ಟದ ತಂಬಾಕು ಹಾಗೂ ಹುಡಿ ಸೊಪ್ಪು ಎಲ್ಲವನ್ನೂ ಮಾರುಕಟ್ಟೆಯಲ್ಲಿಯೇ ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ ಹಾಗಾಗಿ ಕಾಳಸಂತೆಯಲ್ಲಿ ತಂಬಾಕು ಮಾರಾಟ ಮಾಡಬಾರದು ಒಂದು ವೇಳೆ ಕಾಳಸಂತೆಯಲ್ಲಿ ಮಾರಾಟ ಮಾಡುವ ಬಗ್ಗೆ ಕಂಡು ಬಂದರೆ ಜಾಗೃತದಳದವರಿಗೆ ಮಾಹಿತಿ ನೀಡಬಹುದು ಜಾಗೃತದಳದ ದೂರವಾಣಿ ಸಂಖ್ಯೆ 9448491381, 9448493421 ಸಂಪರ್ಕಿಸಿ ದೂರನ್ನು ದಾಖಲಿಸಬಹುದು ಎಂದು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!